HomePage_Banner
HomePage_Banner

ಬಡಗನ್ನೂರುಃ ಕೆ ಎಮ್ ಜೆ, ಎಸ್‌ ವೈ ಎಸ್, ಎಸ್‌ ಎಸ್ ಎಫ್ ವತಿಯಿಂದ ನಡೆಯುವ ಪಾಗಿಂಗ್ ಕಾರ್ಯಕ್ರಮಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರುಃ ಕೆ ಎಮ್ ಜೆ, ಎಸ್‌ ವೈ ಎಸ್,  ಎಸ್‌ ಎಸ್ ಎಫ್  ಈಶ್ವರಮಂಗಲ ಸೆಂಟರ್, ಸೆಕ್ಟರ್ ಇದರ ಅಧೀನದಲ್ಲಿರುವ ಕೊಯಿಲ ಹಾಗೂ ಬಡಗನ್ನೂರು ಬ್ರಾಂಚ್ ಜಂಟಿಯಾಗಿ  ಬಡಗನ್ನೂರು ಗ್ರಾಮ ಪಂಚಾಯತ್ ವಠಾರದಲ್ಲಿ ಫಾಗಿಂಗ್ ಕಾರ್ಯಕ್ರಮಕ್ಕೆ ಜೂ 29 ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಗ್ರಾ. ಪಂ. ಉಪಾಧ್ಯಕ್ಷ ಸಂತೋಷ್ ಆಳ್ವ ಚಾಲನೆ ನೀಡಿ ಮಾತನಾಡಿ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಪ್ ನವರು ತುರ್ತು ಸಂದರ್ಭಗಳಲ್ಲಿ ಯಾವುದೇ ಜಾತಿ ಮತ ಧರ್ಮ ಇಲ್ಲದೆ ನೆರವಾಗುತ್ತಿರುವುದು ಶ್ಲಾಘನೀಯ. ಇವರು ನಮ್ಮ ಗ್ರಾಮದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ವಾಗಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇನ್ನೂ ಮುಂದೆಯೂ ನಮಗೆ ಇವರ ಸಹಾಯ ಇದೇ ರೀತಿ ಮುಂದುವರಿಯಲಿ ಎಂದು ಶುಭ ಹಾರೈಸಿದರು. 
ಗ್ರಾ.ಪಂ  ಪಿಡಿಒ ವಸೀಮ ಗಂಧದ   ಸಮಾಜಮುಖಿ ಕಾರ್ಯಗಳಿಗಾಗಿ ಹುಟ್ಟಿದ ಸಂಘಟನೆ ಎಸ್ ವೈಎಸ್ ಮತ್ತು ಎಸ್ಎಸ್ಎಫ್ ಎಂದರು. ಪ್ರಸ್ತುತ ಕೋವಿಡ್ ಕಾಲದ ಸಂಕಷ್ಟ ಸಮಯದಲ್ಲಿ ಸಂಘಟನೆಯವರು ನಮ್ಮೊಂದಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಇದೀಗ ಡೆಂಗ್ಯೂ ಭೀತಿ ಹೆಚ್ಚಿರುವ ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಫಾಗಿಂಗ್ ಮಾಡುತ್ತಿರುವುದು ಶ್ಲಾಘನೀಯ. ಇನ್ನೂ ಮುಂದೆಯೂ ಸಂಘಟನೆಯ ಸೇವೆಗಳು ಹೀಗೆ ಮುಂದುವರಿಯಲಿ.ಪಂಚಾಯತ್ ವತಿಯಿಂದ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.
ಕಾಂಗ್ರೆಸ್ ಮುಖಂಡ ಜಯರಾಜ್ ಶೆಟ್ಟಿ ಅಣಿಲೆ  ಮಾತನಾಡಿ ಸಂಘಟನೆಯ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾವಿದೆ ಎಂದರು. ಈ ಸಂಧರ್ಭದಲ್ಲಿ ಇಸಾಬ ಅಮೀರ್ ರಫೀಕ್ ಕಾವುಂಜ, ಎಸ್‌ ವೈಎಸ್  ಬಡಗನ್ನೂರು ಬ್ರಾಂಚ್ ಕೋಶಾಧಿಕಾರಿ ಆದಂ ಏರುಕೊಟ್ಯ, ಸದಸ್ಯ ಸಲ್ಮಾನ್ ಇಬ್ರಾಹಿಂ ಕೊಯಿಲ, ಎಸ್ ಎಸ್‌ ಎಫ್ ಕೊಯಿಲ ಯೂನಿಟ್ ಉಪಾಧ್ಯಕ್ಷ ಮುದಸ್ಸಿರ್ ಶರವೂ,   ಎಸ್ ಎಸ್‌ ಎಫ್ ಪುತ್ತೂರು ಡಿವಿಜನ್ ಸದಸ್ಯ ಅಬೂಬಕ್ಕರ್ ಲತೀಫಿ  ಗ್ರಾಮಾಸ್ತರು ಉಪ್ಥಿತರಿದ್ದರು. ಎಸ್ ವೈ ಎಸ್  ಜಿಲ್ಲಾ ಸಮಿತಿ ಸದಸ್ಯ ಹಾಗೂ ಈಶ್ವರಮಂಗಲ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ  ಹಮೀದ್ ಕೊಯಿಲ  ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.