HomePage_Banner
HomePage_Banner

ಮಿತಿಮೀರಿದ ಪೊಲೀಸ್ ತಪಾಸಣೆ ವೇಳೆ ಟೆಂಪೋ ಡಿಕ್ಕಿ ಹೊಡೆದು ಯುವಕ ಸಾವು :ಎಸ್.ವೈ.ಎಸ್ ಎಸ್ಸೆಸ್ಸೆಫ್ಫ್ ಆತೂರು ಖಂಡನೆ

Puttur_Advt_NewsUnder_1
Puttur_Advt_NewsUnder_1

 

ತೂರು : ಕೋವಿಡ್ ನಿಮಿತ್ತ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದೀಗ ಮಧ್ಯಾಹ್ನ 2 ಗಂಟೆ ವರೆಗೆ ಎಲ್ಲಾ ಅಂಗಡಿಗಳು ತರೆಯಲು ಹಾಗೂ ಅಗತ್ಯಕ್ಕಾಗಿ ಹೊರಗಡೆ ತೆರಳಲು ಅನುಮತಿ ದೊರಕಿದೆ. ಹೀಗಿದ್ದೂ ಕೂಡಾ ಆತೂರಿನಲ್ಲಿ 10 ಗಂಟೆಯಾಗುವಷ್ಟರಲ್ಲೇ ಕಡಬ ಪೊಲೀಸರು ಬಿಗಿಯಾದ ತಪಾಸಣೆಯನ್ನು ನಡೆಸಿ ಯುವಕನೋರ್ವನ ಸಾವಿಗೆ ನೇರ ಕಾರಣವಾಗಿದ್ದಾರೆ.

ದೀರ್ಘ ಸಮಯದ ಲಾಕ್ ಡೌನ್ ನಿಮಿತ್ತ ಉದ್ಯೋಗ ಹಾಗೂ ಅಗತ್ಯಗಳನ್ನು ಕಳೆದುಕೊಂಡಿದ್ದ ಜನರು ಈಗಿನ ಸೀಮಿತ ಅನ್ ಲಾಕ್ ಅವಧಿಗಳಲ್ಲಿ ವ್ಯಾಪಾರ ಅಥವಾ ಅಗತ್ಯಗಳಿಗಾಗಿ ಹೊರಗಿಳಿಯುವ ಸಂದರ್ಭದಲ್ಲಿ ತಪಾಸಣೆಯ ಹೆಸರಲ್ಲಿ ಕಿರುಕುಳ ನೀಡಿ ಅಮಾಯಕ ಯುವಕನೋರ್ವನ ಸಾವಿಗೆ ಕಾರಣವಾದ ಪೊಲೀಸರ ವಿರುದ್ದ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಆತೂರು ಯುನಿಟ್ ತೀವ್ರವಾಗಿ ಖಂಡಿಸುತ್ತದೆ.

ಆತೂರಿನಲ್ಲಿ ಬಿಗಿಯಾದ ತಪಾಸಣೆಯನ್ನು ಮಾಡುತ್ತಿರುವ ಪೋಲೀಸರಿಗಾಗಿ ಸಾರ್ವಜನಿಕರು ನಿರ್ಮಿಸಿಕೊಟ್ಟ ತಾತ್ಕಾಲಿಕ ಶೆಡ್ ಇದೆಯಲ್ಲದೆ ಸರಕಾರದ ಅಥವಾ ಪೊಲೀಸ್ ಇಲಾಖೆಯ ಚೆಕ್ ಪೋಸ್ಟ್ ಇಲ್ಲ.

ಅನ್ ಲಾಕ್ ಅವಧಿ ಸೀಮಿತವಿರುವ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಅಗತ್ಯಗಳಿಗಾಗಿ ಓಡಾಡುವುದು ಸಹಜ ಹಾಗೂ ಅನಿವಾರ್ಯ. ಅದೇ ಸಮಯದಲ್ಲೇ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಡ್ಡಗಟ್ಟಿ ತಪಾಸಣೆ ನಡೆಸಿ ಜನರನ್ನು ಗೊಂದಲಗೊಳಿಸುವ ನಡೆ ಅಮಾನವೀಯವಾಗಿದೆ. ಇದರಿಂದಲೇ ಅಮಾಯಕ ಯುವಕ ಪ್ರಾಣ ಕಳಕೊಳ್ಳಬೇಕಾಗಿದೆ.

ಕಡಬ ಪೊಲೀಸರ ಈ ನಡೆಯ ವಿರುದ್ದ ಈ ಹಿಂದೆಯೂ ಸಾರ್ವಜನಿಕರು ದೂರಿಕೊಂಡಿದ್ದು, ಮೇಲಾಧಿಕಾರಿಗಳ ನಿಷ್ಕ್ರೀಯತೆಯೇ ಇಂತಹ ಘಟನೆ ನಡೆಯಲು ಕಾರಣವಾಗಿದೆ.

ಹಾಗಾಗಿ ಈ ಘಟನೆಯಲ್ಲಿ ತಪ್ಪಿತಸ್ಥ ಪೊಲೀಸರ ನಡೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದೂ ಅಮಾಯಕ ಹಾರಿಸ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಎಸ್. ವೈ.ಎಸ್ ಮತ್ತು ಎಸ್ಸೆಸ್ಸೆಫ್ ಆತೂರು ಯುನಿಟ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.