HomePage_Banner
HomePage_Banner

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರನ್ನಾಗಿ ಕಮರುದ್ದೀನ್ ಸಾಲ್ಮರ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಸರಕಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿರುವ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ಪುತ್ತೂರಿನ ಸಾಹಿತಿ, ಕವಿ ಮತ್ತು ಹಾಡುಗಾರ, ಕಮರುದ್ದೀನ್ ಸಾಲ್ಮರರವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಮ್ ಉಚ್ಚಿಲ್‌ರವರು ನೇಮಕಗೊಳಿಸಿ ಆದೇಶಿಸಿದ್ದಾರೆ.

ಕಮರುದ್ದಿನ್ ಸಾಲ್ಮರರವರು ಹಲವಾರು ವರ್ಷಗಳಿಂದ ಸಾಹಿತ್ಯರಂಗದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಾ ಭಾವನಾತ್ಮಕ ಹಾಗೂ ಸೌಹಾರ್ದ ಹಾಡುಗಳು ಮೂಲಕ ಪ್ರಸಿದ್ಧರಾಗಿರುತ್ತಾರೆ. ಇವರು ರಚಿಸಿ ಹಾಡಿದ ” ಎವು ಡೆ ವುಳ್ಳೆ ನೀ” ಎಂಬ ಬ್ಯಾರಿ ಹಾಡುಗಳನ್ನು ಒಳಗೊಂಡ ಕ್ಯಾಸೆಟ್ ಈಗಲೂ ಜನಪ್ರಿಯವಾಗಿದೆ. ಇವರು ಪುತ್ತೂರು ಸಾಲ್ಮರ ನಿವಾಸಿಯಾಗಿದ್ದು, ಸಾಲ್ಮರ ಮನೆತನದ, ದಿವಂಗತ ಅಬ್ದುಲ್ ರಹಿಮಾನ್ ಹಾಗೂ ನಫೀಸಾ ದಂಪತಿಗಳ ಸುಪುತ್ರರಾಗಿರುತ್ತಾರೆ. ಇವರು ಪತ್ನಿ ಖದೀಜತಲ್ ಕುಬ್ರ, ಪುತ್ರ ರಿಹಾನ್‌ರೆಹಮಾನ್, ಅಲೀನಾ ಅವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ. ಇವರ ಸಹೋದರ ನೂರುದ್ದೀನ್ ಸಾಲ್ಮರ ಖ್ಯಾತ ನೋಟರಿ ನ್ಯಾಯವಾದಿ ಮತ್ತು ಬದ್ರುದ್ದೀನ್ ಸಾಲ್ಮರ ಅವರು ಉದ್ಯಮಿಯಾಗಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.