HomePage_Banner
HomePage_Banner

ಮಾಯಿದೆ ದೇವುಸ್ ಚರ್ಚ್ ಸ.ಧರ್ಮಗುರುಗಳಾಗಿ ವಂ|ಕೆವಿನ್ ಲಾರೆನ್ಸ್, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕರಾಗಿ ವಂ|ಸ್ಟ್ಯಾನಿ ನೇಮಕ

Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರ ಆದೇಶದಂತೆ ಪುತ್ತೂರು ನಗರದ ಹೃದಯಭಾಗದಲ್ಲಿರುವ ಸುಮಾರು 191 ವರ್ಷಗಳ ಇತಿಹಾಸವಿರುವ ಮಾಯಿದೆ ದೇವುಸ್ ಚರ್ಚ್‌ಗೆ ನೂತನ ಸಹಾಯಕ ಧರ್ಮಗುರುಗಳಾಗಿ ವಂ|ಕೆವಿನ್ ಲಾರೆನ್ಸ್ ಡಿ’ಸೋಜ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕರಾಗಿ ವಂ|ಸ್ಟ್ಯಾನಿ ಪಿಂಟೋರವರು ಜೂ.30ರಂದು ಆಗಮಿಸಿದ್ದಾರೆ.

 

ವಂ|ಕೆವಿನ್ ಲಾರೆನ್ಸ್ ಪರಿಚಯ:
ಕಿರೆಂ ಚರ್ಚ್ ವ್ಯಾಪ್ತಿಯ ಬಜ್ಪೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಗ್ರೆಗರಿ ಡಿ’ಸೋಜ ಹಾಗೂ ಮೇರಿ ಡಿ’ಸೋಜರವರ ಮೂವರು ಮಕ್ಕಳಲ್ಲಿ ದ್ವಿತೀಯವರಾಗಿ ಜನಿಸಿದ ವಂ|ಕೆವಿನ್ ಲಾರೆನ್ಸ್‌ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಿರೆಂ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ರುಜಾಯ್ ಗ್ಲ್ಯಾಡ್ಸನ್ ಪದವಿ ಪೂರ್ವ ಕಾಲೇಜಿನಲ್ಲಿ, ಬಿಕಾಂ ಪದವಿಯನ್ನು ಪೊಂಪೈ ಕಿರೆಂ ಕಾಲೇಜಿನಲ್ಲಿ, ದೇವಶಾಸ್ತ್ರ ಹಾಗೂ ತತ್ವಶಾಸ್ತ್ರ ಯಾಜಕೀ ಧಾರ್ಮಿಕ ಶಿಕ್ಷಣವನ್ನು ಮಂಗಳೂರು ಜೆಪ್ಪು ಸೆಮಿನರಿಯಲ್ಲಿ ಪೂರೈಸಿದ್ದರು. ಬಳಿಕ ರೀಜೆನ್ಸಿ ಶಿಕ್ಷಣವನ್ನು ನಾರಾವಿಯಲ್ಲಿ, ದಿಯಾಕೊನ್ ಆಗಿ ಕೂಳೂರು ಚರ್ಚ್‌ನಲ್ಲಿ ವಂ|ಕೆವಿನ್‌ರವರು ಸೇವೆ ಸಲ್ಲಿಸಿರುತ್ತಾರೆ. 2021, ಏಪ್ರಿಲ್ 21 ರಂದು ಮಂಗಳೂರಿನ ರೊಸಾರಿಯೋ ಕೆಥೆದ್ರಲ್‌ನಲ್ಲಿ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ವಂ|ಕೆವಿನ್‌ರವರಿಗೆ ಯಾಜಕೀದೀಕ್ಷೆಯನ್ನು ಪಡೆದುಕೊಂಡ ಬಳಿಕ ಪ್ರಥಮವಾಗಿ ಪುತ್ತೂರು ಚರ್ಚ್‌ಗೆ ಆಗಮಿಸಿರುತ್ತಾರೆ.

ವಂ|ಸ್ಟ್ಯಾನೀ ಪಿಂಟೋ ಪರಿಚಯ:
ಬೆಳ್ತಂಗಡಿಯ ಇಂದುಬೆಟ್ಟು ಚರ್ಚ್‌ನ ನಿವಾಸಿ ರೋಮನ್ ಪಿಂಟೋ ಹಾಗೂ ಸಿಸಿಲಿಯಾ ಡಿ’ಸೋಜರವರ ಏಳು ಮಂದಿ ಮಕ್ಕಳ ಪೈಕಿ ಆರನೇಯವರಾಗಿ ಜನಿಸಿದ ವಂ|ಸ್ಟ್ಯಾನೀ ಪಿಂಟೋರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬೆಳ್ತಂಗಡಿ ಶಾಲೆಯಲ್ಲಿ ಪೂರೈಸಿದ್ದು, ಪದವಿ ಪೂರ್ವ ಶಿಕ್ಷಣವನ್ನು ರುಜಾಯ್ ಗ್ಲ್ಯಾಡ್ಸನ್ ಕಾಲೇಜಿನಲ್ಲಿ, ಎಸ್‌ಡಿಎಂ ಕಾಲೇಜಿನಲ್ಲಿ ಇಂಗ್ಲೀಷ್ ಮೇಜರ್ ಹಾಗೂ ಜರ್ನಲಿಸಂ ಶಿಕ್ಷಣವನ್ನು, ದೇವಶಾಸ್ತ್ರ ಹಾಗೂ ತತ್ವಶಾಸ್ತ್ರ ಯಾಜಕೀ ಧಾರ್ಮಿಕ ಶಿಕ್ಷಣವನ್ನು ಸೈಂಟ್ ಪೀಯೂಸ್ ಸೆಮಿನರಿಯಲ್ಲಿ ಪೂರೈಸಿರುತ್ತಾರೆ. ಬಳಿಕ ರೀಜೆನ್ಸಿ ಶಿಕ್ಷಣವನ್ನು ಮಂಗಳೂರಿನ ಬಜ್ಜೋಡಿ ಪಾಲನಾ ಕೇಂದ್ರದಲ್ಲಿ ಹಾಗೂ ದಿಯಾಕೋನ್ ಆಗಿ ಫಜೀರ್ ಚರ್ಚ್‌ನಲ್ಲಿ ವಂ|ಸ್ಟ್ಯಾನೀರವರು ಸೇವೆ ಸಲ್ಲಿಸಿರುತ್ತಾರೆ. 2015, ಏಪ್ರಿಲ್ 16 ರಂದು ನಿಕಟಪೂರ್ವ ಧರ್ಮಾಧ್ಯಕ್ಷರಾದ ವಂ|ಅಲೋಶಿಯಸ್ ಪಾವ್ಲ್ ಡಿ’ಸೋಜರವರಿಂದ ವಂ|ಸ್ಟ್ಯಾನಿ ಪಿಂಟೋರವರು ಯಾಜಕೀದೀಕ್ಷೆಯನ್ನು ಪಡೆದುಕೊಂಡ ಬಳಿಕ ಸಹಾಯಕ ಧರ್ಮಗುರುಗಳಾಗಿ ಬಿಜೈ ಚರ್ಚ್(2 ವರ್ಷ)ನಲ್ಲಿ, ಪೆರ್ಮನ್ನೂರು ಚರ್ಚ್(2 ವರ್ಷ)ನಲ್ಲಿ, ಮಡಂತ್ಯಾರು ಚರ್ಚ್(1 ವರ್ಷ)ನಲ್ಲಿ, ಮಂಗಳೂರು ಜೆಪ್ಪು ವರ್ಕ್‌ಶಾಪ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ವಂ|ಸ್ಟ್ಯಾನೀರವರು ಇಂಗ್ಲೀಷ್ ಹಾಗೂ ಎಜ್ಯುಕೇಶನ್‌ನಲ್ಲಿ ಎಂ.ಎ ಗಳಿಸಿದ್ದು, ಜೊತೆಗೆ ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ಅಲ್ಲದೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್)ಯಲ್ಲಿ ಅವರು ಉತ್ತೀರ್ಣರಾಗಿದ್ದು ಇದೀಗ ಪುತ್ತೂರು ಚರ್ಚ್‌ಗೆ ಆಗಮಿಸಿರುತ್ತಾರೆ.

 

ಕೊರೋನಾ ಹಿನ್ನೆಲೆಯಲ್ಲಿ ಬಹಳ ಸರಳ ರೀತಿಯಲ್ಲಿ ಪ್ರಾರ್ಥನಾವಿಧಿಯು ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋರವರ ನೇತೃತ್ವದಲ್ಲಿ ನಡೆಯಿತು. ಧರ್ಮಗುರುಗಳಾದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಂ|ಆಂಟನಿ ಪ್ರಕಾಶ್ ಮೊಂತೇರೋ, ಫಿಲೋಮಿನಾ ಪುರುಷರ ವಸತಿನಿಲಯದ ವಾರ್ಡನ್ ವಂ|ಅಶೋಕ್ ರಾಯನ್ ಕ್ರಾಸ್ತಾ, ಧರ್ಮಭಗಿನಿಯರು, ಚರ್ಚ್ ಆರ್ಥಿಕ ಸಮಿತಿಯ ಸದಸ್ಯರಾದ ಜೆರೋಮಿಯಸ್ ಪಾಸ್, ವಿ.ಜೆ ಫೆರ್ನಾಂಡೀಸ್, ಝೇವಿಯರ್ ಡಿ’ಸೋಜ, ವಿನ್ಸೆಂಟ್ ತಾವ್ರೋ, ವಾಳೆ ಗುರಿಕಾರರು ಹಾಗೂ ಪ್ರತಿನಿಧಿಗಳು, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಐಸಿವೈಎಂ ಸದಸ್ಯರು ಮತ್ತು ವಾಮಂಜೂರು ಚರ್ಚ್‌ನ ಸಹಾಯಕ ಸಹಾಯಕ ಧರ್ಮಗುರು ವಂ|ಸಂತೋಷ್ ಡಿ’ಸೋಜ, ಐಸಿವೈಎಂ ನಿರ್ದೇಶಕ ವಂ|ಅಶ್ವಿನ್, ಕೊಡಿಯಾಲ್‌ಬೈಲ್ ಪ್ರೆಸ್‌ನ ಮ್ಯಾನೇಜರ್ ವಂ|ನೀಲೇಶ್ ಸಹಿತ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ವಂದಿಸಿದರು. ಮೊಟ್ಟೆತ್ತಡ್ಕ ವಾಳೆಯ ಗುರಿಕಾರಿಣಿ ಲವೀನಾ ಪಸನ್ನ ಕಾರ್ಯಕ್ರಮ ನಿರೂಪಿಸಿದರು.

 

ವಂ|ಲ್ಯಾರಿ ಪಿಂಟೋ, ವಂ|ಸುನಿಲ್ ಡಿ’ಸೋಜ ವರ್ಗಾವಣೆ…
ಮಾಯಿದೆ ದೇವುಸ್ ಚರ್ಚ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ|ಲ್ಯಾರಿ ಪಿಂಟೋರವರು ಜು.8 ರಂದು ಮಂಗಳೂರಿನ ಸೈಂಟ್ ಅಂತೋನಿ ಆಶ್ರಮಕ್ಕೆ ಸಹಾಯಕ ನಿರ್ದೇಶಕರಾಗಿ ವರ್ಗಾವಣೆಗೊಳ್ಳಲಿದ್ದಾರೆ. ಅದೇ ರೀತಿ ಕಳೆದ ನಾಲ್ಕು ವರ್ಷಗಳಿಂದ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಫಿಲೋಮಿನಾ ಬಾಲಕರ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿ ಸೇವೆ ಸಲಿಸುತ್ತಿದ್ದ ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಪೊಂಪೈ ಕಿರೆಂಯಲ್ಲಿ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ವರ್ಗಾವಣೆಗೊಂಡು ಈಗಾಗಲೇ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

 

ಸೌಭಾಗ್ಯ…
ಸ್ವಾಗತ ಸ್ವೀಕರಿಸಿ ಮಾತನಾಡಿದ ನೂತನ ಧರ್ಮಗುರುಗಳಾದ ವಂ|ಕೆವಿನ್ ಲಾರೆನ್ಸ್ ಹಾಗೂ ವಂ|ಸ್ಟ್ಯಾನಿ ಪಿಂಟೋರವರು, ಪುತ್ತೂರು ಚರ್ಚ್‌ನಲ್ಲಿ ಸೇವೆ ಸಲ್ಲಿಸಲು ನಮಗೆ ಸಿಕ್ಕಿರೋದು ಸೌಭಾಗ್ಯವೇ ಸರಿ. ಚರ್ಚ್ ಹಾಗೂ ಇಲ್ಲಿನ ಶಿಕ್ಷಣ ಸಂಸ್ಥೆಗಳ ಉನ್ನತಿಗಾಗಿ ನಾವು ನಿಮ್ಮೊಂದಿಗೆ ಸದಾ ಬದ್ಧರಾಗಿದ್ದೇವೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿ ಸಮಾಜದಲ್ಲಿ ಉತ್ತಮ ರೀತಿಯ ಬಾಳ್ವೆ ನಡೆಸುತ್ತಿದ್ದಾರೆ. ಎಲ್ಲರ ಪ್ರೀತಿಯ ಆಶೀರ್ವಾದ ಹಾಗೂ ಪ್ರೋತ್ಸಾಹ ಮುಖ್ಯ.

`ಬಂಧುತ್ವ’ ಸೇತುವೆ ಮೂಲಕ ಸೇವೆ…
ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯು ಸರಿಸುಮಾರು 22 ಕಿ.ಮೀ ಹೊಂದಿದ್ದು,19 ವಾಳೆ, 673 ಕುಟುಂಬ, 3100 ಕ್ರೈಸ್ತ ವಿಶ್ವಾಸಿ ಜನರನ್ನು ಹೊಂದಿದೆ. ಈ ಚರ್ಚ್ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರಿಂದ ಸ್ಥಾಪಿತವಾದ ಮಾಯಿದೆ ದೇವುಸ್ ಕ್ಯಾಂಪಸ್ ಹಾಗೂ ದರ್ಬೆಯಲ್ಲಿ ಫಿಲೋ ಕ್ಯಾಂಪಸ್ ಹೊಂದಿದ್ದು ಕೆ.ಜಿಯಿಂದ ಪಿಜಿ ವರೆಗೆ ಸರಿಸುಮಾರು ೮ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಬಾಲಕರ, ಪುರುಷರ, ಮಹಿಳೆಯರ ವಸತಿನಿಲಯ, ನಾಲ್ಕು ಸಂಸ್ಥೆಗಳ ಧರ್ಮಭಗಿನಿಯರ ಕಾನ್ವೆಂಟ್‌ಗಳೂ ಈ ಚರ್ಚ್ ಹೊಂದಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ಮೂಲಕ ಶಿಕ್ಷಣ ಸಂಸ್ಥೆಗಳ ಉನ್ನತಿಯನ್ನು ಸಾರಿದ್ದಾರೆ ಎಂಬುದು ನಿಜ. ಆದ್ದರಿಂದ ನಾವೆಲ್ಲಾ ನಮ್ಮಲ್ಲಿನ ಪ್ರತಿಭೆಗಳನ್ನು ಪ್ರಚುರಪಡಿಸುತ್ತಾ ಉತ್ತಮ `ಬಂಧುತ್ವ’ದ ಸೇತುವೆಯನ್ನು ಕಟ್ಟುವ ಮೂಲಕ ಸೇವೆ ಮಾಡೋಣ.

-ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಧಾನ ಧರ್ಮಗುರುಗಳು, ಮಾಯಿದೆ ದೇವುಸ್ ಚರ್ಚ್

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.