HomePage_Banner
HomePage_Banner

ವಿವೇಕಾನಂದ ವಿದ್ಯಾಸಂಸ್ಥೆಯಿಂದ ಮಹತ್ವದ ನಿರ್ಧಾರ-ಮನೆ ಕಳೆದುಕೊಂಡ ವಿದ್ಯಾರ್ಥಿನಿ ದೀಕ್ಷಾಗೆ ಉಚಿತ ಪಿಯುಸಿ ಶಿಕ್ಷಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನೆಯೊಂದು ಕುಸಿದು ಬಿದ್ದು ಬನ್ನೂರು ಗ್ರಾ.ಪಂ ಕಚೇರಿ ಕಟ್ಟಡದಲ್ಲಿ ಆಶ್ರಯ ಪಡೆದಿರುವ ಚಿಕ್ಕಮುಡ್ನೂರು ಗ್ರಾಮದ ಕುಂಬುರ್ಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ದೀಕ್ಷಾ ಅವರ ಮುಂದಿನ ಪಿಯುಸಿ ವಿದ್ಯಾಭ್ಯಾಸಕ್ಕೆ ವಿವೇಕಾನಂದ ವಿದ್ಯಾಸಂಸ್ಥೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಅವರು ತಿಳಿಸಿದ್ದಾರೆ.

ಚಿಕ್ಕಮುಡ್ನೂರು ಗ್ರಾಮದ ಕುಂಬುರ್ಗ ನಿವಾಸಿ ಗೋಪಾಲ ಶೆಟ್ಟಿ ಅವರ ಮನೆ ಭಾಗಶಃ ಕುಸಿದು ಬಿದ್ದು ಮನೆಯಲ್ಲಿ ವಾಸ್ತವ್ಯಕ್ಕೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ನಿರ್ದೇಶನಂತೆ ಬನ್ನೂರು ಗ್ರಾ.ಪಂನಿಂದ ಸುರಕ್ಷಿತ ಸ್ಥಳಕ್ಕೆ ಕುಟುಂಬವನ್ನು ಸ್ಥಳಾಂತರಿಸಲಾಗಿತ್ತು. ತಾತ್ಕಾಲಿಕ ನೆಲೆಯಲ್ಲಿ ಬನ್ನೂರು ಗ್ರಾ.ಪಂ ಕಟ್ಟಡದಲ್ಲೇ ಆಶ್ರಯ ನೀಡಿದ ಬಳಿಕ ಜೂ. 29 ರಂದು ಸಂಜೆ ಶಾಸಕ ಸಂಜೀವ ಮಠಂದೂರು ಅವರು ಗೋಪಾಲ ಶೆಟ್ಟಿ ಕುಟುಂಬವನ್ನು ಭೇಟಿ ಮಾಡಿ ಪಕ್ಕಾ ಮನೆ ಮಾಡಿಕೊಡುವ ಭರವಸೆ ನೀಡಿದರು. ಅದಾದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ವಿದ್ಯಾರ್ಥಿನಿ ದೀಕ್ಷಾ ಅವರ ಸಹೋದರ ವಿಕಾಸ್‌ಗೆ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ೮ನೇ ತರಗತಿಗೆ ದಾಖಲಾತಿ ಪ್ರಕ್ರಿಯೆ ನಡೆಸಿದರು.

ಇದೀಗ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ನಿರ್ಣಯಿಸಿದಂತೆ ಕಾಲೇಜಿನ ಪದವಿ ಪೂರ್ವ ಸಂಸ್ಥೆಯ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಅವರು ಜೂ.30ರಂದು ಗೋಪಾಲ ಶೆಟ್ಟಿ ಕುಟುಂಬವನ್ನು ಭೇಟಿ ಮಾಡಿ ಅವರ ಪುತ್ರಿಯೊಂದಿಗೆ ಮಾತನಾಡಿದ್ದಾರೆ. ಜೊತೆಗೆ ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿ ಮುಂದಿನ ಪಿಯುಸಿ ಶಿಕ್ಷಣಕ್ಕೆ ನಮ್ಮ ಕಾಲೇಜಿನಲ್ಲಿ ಉಚಿತ ಸೀಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇದಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ತಯಾರಿ ಮತ್ತು ಪಠ್ಯಗಳ ಅಭ್ಯಾಸಕ್ಕೆ ಕಾಲೇಜಿನ ಆನ್‌ಲೈನ್ ಕ್ಲಾಸ್‌ನಲ್ಲಿ ಮಾಹಿತಿ ನೀಡುವ ಕುರಿತು ಕಾಲೇಜಿನ ವಾಟ್ಸಪ್ ಗ್ರೂಪ್‌ಗೆ ಸೇರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿಶೇಷ ಅಧಿಕಾರಿ ವೆಂಕಟೇಶ್, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ, ಸದಸ್ಯರಾದ ರಾಘವೇಂದ್ರ ಅಂದ್ರಟ್ಟ, ತಿಮ್ಮಪ್ಪ ಪೂಜಾರಿ, ಸ್ಮಿತಾ ನಾಯ್ಕ್, ಸುಪ್ರಿತ, ಮಾಜಿ ಅಧ್ಯಕ್ಷೆ ರಮಣಿ ಗಾನಿಗ, ಮಾಜಿ ಸದಸ್ಯ ರತ್ನಾಕರ ಪ್ರಭು, ಪಂಚಾಯತ್ ಸಿಬ್ಬಂದಿ ಜಯಂತಿ, ಬಿಜೆಪಿ ಬನ್ನೂರು ಶಕ್ತಿಕೇಂದ್ರ ಅಧ್ಯಕ್ಷ ನಾಗೇಶ್ ಟಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.