HomePage_Banner
HomePage_Banner

ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಘೋಷಣೆ ಮತ್ತು ಪದಗ್ರಹಣ ಸಮಾರಂಭ

Puttur_Advt_NewsUnder_1
Puttur_Advt_NewsUnder_1


ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.30ರಂದು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಬಿ ವಿಶ್ವನಾಥ.ರೈಯವರಿಗೆ ನಿಕಟಪೂರ್ವ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಅಧಿಕಾರ ಹಸ್ತಾಂತರ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ ವಿಶ್ವನಾಥ.ರೈ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು.ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೂತನ ಸದಸ್ಯರಿಗೆ ಶಾಲು ಹೊದೆಸಿ,ಪ್ರಮಾಣ ಪತ್ರ ನೀಡಿ ಗೌರವಿಸಿದರು.ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವ ಕೈಗಳ ನಿರೀಕ್ಷೆಯಲ್ಲಿದ್ದೇವೆ.ನಾಯಕರ ಜೊತೆಗೆ ಕಾರ್ಯಕರ್ತರ ಕೆಲಸಗಳಿಗೂ ಹುರಿದುಂಬಿಸಿ ಅವರಿಗೆ ಬಲ ತುಂಬುವ ಕಾರ್ಯ ಮಾಡಲಿದ್ದೇವೆ,ಕಾಂಗ್ರೆಸ್ನಲ್ಲಿ ಹೊಸ ಶಕೆ ಪ್ರಾರಂಭವಾಗಿದೆ,ಹೊಸ ತಂಡ ಮತ್ತಷ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ ಎಂದು ಶುಭಹಾರೈಸಿದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಕಾಂಗ್ರೆಸ್ ಪಕ್ಷ ನನಗೆ ಅನೇಕ ಹಿರಿಯರೊಂದಿಗೆ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿದೆ.ಇಂತಹ ಪರಿಸ್ಥಿತಿಯಲ್ಲಿ ಓರ್ವ ಸೂಕ್ತವಾದ ಅಧ್ಯಕ್ಷರ ಆಯ್ಕೆ ನಡೆದಿದೆ ಅವರ ಮೂಲಕ ಪಕ್ಷ ಸಂಘಟನೆ ಸಾಧ್ಯವಾಗಲಿದೆ ನಾವು ಕೂಡ ಅವರಿಗೆ ಸಹಕಾರ ನೀಡಲಿದ್ದೇವೆ.ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಂದಲೇ ಪಡೆಯಬೇಕು ಎಂಬಂತೆ ಮೂರು ವರ್ಷದ ಹಿಂದೆ ಕಳೆದುಕೊಂಡ ಅಧಿಕಾರವನ್ನು ಮತ್ತೆ ಪಡೆಯುವಲ್ಲಿ ಕಾರ್ಯಕರ್ತರು ಒಟ್ಟಾಗಿ ಸೇರಿ ಕೆಲಸ ಮಾಡಿ ಶಕುಂತಲಾ ಶೆಟ್ಟಿಯವರು ಮತ್ತೆ ಶಾಸಕಿಯಾಗುವಂತೆ ಕೆಲಸ ಮಾಡಬೇಕಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ.ರೈ ಮಾತನಾಡಿ ಪಕ್ಷದ ಅಧ್ಯಕ್ಷನೆಂಬುದು ಬಯಸದೇ ಬಂದ ಅವಕಾಶವಾಗಿದೆ.ಈ ಅವಕಾಶವನ್ನು ಜವಬ್ದಾರಿಯುತವಾಗಿ ನಿರ್ವಹಿಸುವ ದೃಷ್ಠಿಯಿಂದ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷವನ್ನು ಬಲಪಡಿಸುವ ದೃಷ್ಠಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದ್ದೇವೆ,ಶಿಸ್ತು ಹಾಗೂ ಸಂಘಟನೆಗೆ ಪ್ರಮುಖ ಆದ್ಯತೆ ನೀಡಿ ಕೆಲಸ ನಿರ್ವಹಿಸಲಿದ್ದೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ,ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ನೂತನವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಂ.ಬಿ ವಿಶ್ವನಾಥ.ರೈ,ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಹಾಗೂ ನಿರ್ಗಮಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶಾಲು ಹಾಕಿ ಸನ್ಮಾನಿಸಿದರು.

ಬ್ಲಾಕ್ ಕಾಂಗ್ರೆಸ್‌ನ ನೂತನ ಸಮಿತಿಯ ಘೋಷಣೆ:
ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ಸಭಾಧ್ಯಕ್ಷತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ.ರೈ ಬ್ಲಾಕ್ ಕಾಂಗ್ರೆಸ್ನ ನೂತನ ಸಮಿತಿಯ ಘೋಷಣೆ ಮಾಡಿದರು ಉಪಾಧ್ಯಕ್ಷರುಗಳಾಗಿ ಯಾಕೂಬ್ ಮುಲಾರ್,ದಿನೇಶ್ ಪಿ.ವಿ,ಅಬ್ದುಲ್ ಅಜೀಜ್ ಬುಶ್ರಾ,ಮಹಾಬಲ.ರೈ,ಸಚಿನ್ ಸರೋಳಿ,ಮೌರೀಸ್ ಮಸ್ಕರೇನಸ್,ಶಶಿಕಿರಣ್.ರೈ ಎನ್,ರಾಮ ಮೇನಾಲ,ಮನೋಹರ.ರೈ,ಆಲಿ ಕುಂಞಿ ಕೊರೆಂಗಿಲ ಅಧಿಕಾರ ಸ್ವೀಕರಿಸಿದರು.ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾಗಿ ಅಮಲ ರಾಮಚಂದ್ರ,ಬಾಸ್ಕರ್ ಕೋಡಿಂಬಾಳ,ಪೂಣೇಶ್ ಕುಮಾರ್ ಭಂಡಾರಿಯವರು ಆಯ್ಕೆಯಾದರು.ವಲೇರಿಯನ್ ಡಯಾಸ್ ಖಜಾಂಜಿಯಾಗಿ,ಜಾನ್ ಸಿರಿಲ್ ರೊಡ್ರಿಗಸ್ ಕಛೇರಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಕಾರ್ಯದರ್ಶಿಗಳಾಗಿ ಜಯಂತ್ ಪೂಜಾರಿ ಕೆಂಗುಡೇಲು,ರಾಮಚಂದ್ರ ನಾಯ್ಕ್,ಕೆ.ಎ ಅಲಿ,ಎಂ.ಬಿ ಇಬ್ರಾಹಿಂ ಮೈರೋಳು,ಹಬೀಬ್ ಕಣ್ಣೂರು,ಮನಮೋಹನ್.ರೈ,ರೋಶನ್ ರೈ ಬನ್ನೂರು,ಪವನ್ ಡಿ.ಜಿ,ಡಿ.ಕೆ ಅಬ್ದುಲ್ ರಹೀಮನ್ ಅಧಿಕಾರ ಸ್ವೀಕರಿಸಿದರು.ಸದಸ್ಯರುಗಳಾಗಿ ಮೂಸನ್ ಕಾರ್ನೂರು,ಮಾಧವ ಪೂಜಾರಿ,ಶಿವರಾಮ ಮಣಿಯಾಣಿ,ರಾಮಚಂದ್ರ ಸೊರಕೆ,ಗೋಪಾಲಕೃಷ್ಣ ಪಾಟಾಳಿ,ರಾಕೇಶ್.ರೈ,ಬಾಸ್ಕರ್ ಕರ್ಕೇರ,ವಸಂತ ಪಾಣಂಬು,ಗುರುಪ್ರಸಾದ್.ರೈ,ಜಗನ್ಮೋಹನ್ ರೈ,ಉಮ್ಮರ್ ಜನಪ್ರೀಯ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾಸ್ಕರ್ ಗೌಡ ಕೋಡಿಂಬಾಳ ಸ್ವಾಗತಿಸಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ವಂದಿಸಿದರು.ಎನ್.ಎಸ್.ಯು.ಐ ಪದಾಧಿಕಾರಿ ವೀರಾ ಜೆನಿಫರ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.