HomePage_Banner
HomePage_Banner

ಸಂಪ್ಯ ಪೊಲೀಸರ ಕಾರ್ಯಾಚರಣೆ – ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆ ಕರ್ಕುಂಜದ ಹಂಝ ಎ ಬಂಧನ – ಬೆಳಿಯೂರುಕಟ್ಟೆ ಸಿದ್ದಿಕ್ ಪರಾರಿ

Puttur_Advt_NewsUnder_1
Puttur_Advt_NewsUnder_1

ಮಾಂಸ ಉದ್ದೇಶದಿಂದ ಸಾಗಾಟ – ಜಾನುವಾರು ರಕ್ಷಣೆ ಮಾಡಿದ ಪೊಲೀಸರು

ಪುತ್ತೂರು: ಕೋವಿಡ್ -19 ಸಂದರ್ಭದಲ್ಲಿ ಕೇರಳ, ಕರ್ನಾಟಕ ನಡುವೆ ವಾಹನ ತಪಾಸಣೆಯಿದ್ದರೂ ಕೇರಳಕ್ಕೆ ಪಿಕಾಪ್ ಜೀಪಿನಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯ ರವಿ ಅವರ ನೇತೃತ್ವದ ಸಿಬ್ಬಂದಿಗಳು ಪತ್ತೆ ಮಾಡಿ. ಆರೋಪಿ ಚಾಲಕನನ್ನು ಬಂಧಿಸಿ, ಜಾನುವಾರು ರಕ್ಷಣೆ ಮಾಡಿದ ಘಟನೆ ಜೂ. 30 ರಂದು ಪಾಣಾಜೆ ಗ್ರಾಮದ ಒಡ್ಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಪುತ್ತೂರು ಕರ್ಕುಂಜ ನಿವಾಸಿ ಮಹಮ್ಮದ್ ಕುಂಞಿ ಅವರ ಪುತ್ರ ಪಿಕಾಪ್ ಜೀಪು ಚಾಲಕ ಹಂಝ ಎ(42 ವ)ರವರು ಬಂಧಿತ ಆರೋಪಿ. ಜೀಪಿನಲ್ಲಿದ್ದ ಇನ್ನೋರ್ವ ಆರೋಪಿ ಬೆಳಿಯೂರುಕಟ್ಟೆ ನಿವಾಸಿ ಸಿದ್ದಿಕ್ ಪರಾರಿಯಗಿದ್ದಾರೆ. ಸಂಪ್ಯ ಪೊಲೀಸರು ಬೆಳಿಗ್ಗೆ ಒಡ್ಯದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೆಟ್ಟಂಪಾಡಿ ಮಿತ್ತಡ್ಕ ಕಡೆಯಿಂದ ಒಡ್ಯ ಕಡೆಗೆ ಬಂದ ಪಿಕಫ್ ವಾಹನವನ್ನು ನಿಲ್ಲಿಸಿದ್ದರು. ಇದೇ ಸಂದರ್ಭ ವಾಹನದಲ್ಲಿದ್ದ ವ್ಯಕ್ತಿಯೊಬ್ಬ ವಾಹನದಿಂದ ಇಳಿದು ಓಡಿ ಹೋಗಿದ್ದು, ವಾಹನ ಚಾಲಕ ಹಂಝ ಅವರು ಕೂಡಾ ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ಆತನನ್ನು ಹಿಡಿದು ವಿಚಾರಿಸಿದಾಗ ತಾನು ಸಿದ್ದಿಕ್ ಅವರಿಂದ ಹಸುಗಳನ್ನು ಖರೀದಿ ಮಾಡಿ ಯಾವುದೇ ಪರವಾನಿಗೆಯನ್ನು ಹೊಂದದೇ ಮಾಂಸ ಮಾಡುವ ಉದ್ದೇಶದಿಂದ ಬೆಳಿಯೂರುಕಟ್ಟೆಯ ಸಿದ್ದಿಕ್ ನೊಂದಿಗೆ ಸೇರಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದರು. ಬಂಧಿತ ಆರೋಪಿಯಿಂದ ಹಸು ಸಾಗಾಟ ಮಾಡಲು ಉಪಯೋಗಿಸಿದ ಅಂದಾಜು ರೂ. 4,50,000  ಮೌಲ್ಯದ ಪಿಕಪ್ ವಾಹನ ಮತ್ತು ತಲಾ ರೂ. 20 ಸಾವಿರ ದಂತೆ ಒಟ್ಟು ರೂ.40 ಸಾವಿರ ಮೌಲ್ಯದ 2 ಹಸುಗಳನ್ನು ರಕ್ಷಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.