HomePage_Banner
HomePage_Banner

ಪತ್ರಕರ್ತೆ ಗೌರಿ ಲಂಕೇಶ್ ಮರ್ಡರ್ ಕೇಸ್ – ಕೆಮ್ಮಾಯಿಯ ಮೋಹನ್ ನಾಯಕ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಪುತ್ತೂರು ಕೆಮ್ಮಾಯಿ ಮೂಲದ ಮೋಹನ್ ನಾಯಕ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂ.30ರಂದು ಮುಂದೂಡಿದೆ.

 

ಮೋಹನ್ ನಾಯಕ್ ವಿರುದ್ಧ ದಾಖಲಾಗಿದ್ದ ಕೋಕಾ ಕಾಯ್ದೆಯನ್ನು (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ರದ್ದು ಪಡಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಗೌರಿ ಲಂಕೇಶ್ ಸಹೋದರಿ, ಚಲನಚಿತ್ರ ನಿರ್ದೇಶಕಿ ಕವಿತ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮೋಹನ್ ನಾಯಕ್ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ಧರಿಸಬೇಕು ಎಂದು ನಿರ್ದೇಶನ ನೀಡಿತ್ತಲ್ಲದೆ ಈ ಸಂಬಂಧ ಕರ್ನಾಟಕ ಸರಕಾರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರಿಗೆ ನೋಟಿಸ್ ಜಾರಿ ಮಾಡಿತ್ತು.
2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ನಡೆದಿದ್ದ ಲಂಕೇಶ್ ಪತ್ರಿಕೆಯ ಸಂಪಾದಕ ದಿ. ಪಿ.ಲಂಕೇಶ್ ಅವರ ಪುತ್ರಿ, ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2018ರ ಜುಲೈ 18ರಂದು ಬಂಧಿತನಾಗಿ ಇದುವರೆಗೂ ಜೈಲಿನಲ್ಲಿರುವ ಕೆಮ್ಮಾಯಿಯ ಮೋಹನ್ ನಾಯಕ್ ಮೇಲೆ ಹಾಕಲಾಗಿದ್ದ ಕೋಕಾ ಕಾಯ್ದೆಯನ್ನು ಏಪ್ರಿಲ್ 22ರಂದು ಹೈಕೋರ್ಟ್ ರದ್ದುಗೊಳಿಸಿತ್ತು. ಇದರಿಂದ ಮೋಹನ್ ನಾಯಕ್ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ಸುಲಭವಾಗಿ ಸಿಗುವ ಸಾಧ್ಯತೆ ಇತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ದೂರುದಾರರಾಗಿರುವ ಕವಿತಾ ಲಂಕೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
‘ಕೋಕಾ’ ಪ್ರಕರಣವನ್ನು ಕೈ ಬಿಡುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದ ಕವಿತಾ ಲಂಕೇಶ್ ಪರ ವಕೀಲರಾದ ಹುಫೇಜ ಅಹ್ಮದಿರವರು ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೂ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅವಕಾಶವಿದೆ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು.
ಈ ಆರೋಪಿಗಳು ಸಂಘಟಿತ ಅಪರಾಧವನ್ನು ನಡೆಸಿದ್ದರು ಎಂಬುದನ್ನು ಎಸ್‌ಐಟಿ ದಾಖಲಿಸಿದ್ದ ಕೋಕಾ ಪ್ರಕರಣ ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅವರು ವಾದಿಸಿದ್ದರು. ಪುತ್ತೂರುನ ಹೊಗೆಸೊಪ್ಪು ವ್ಯಾಪಾರಿ ಕೆಮ್ಮಾಯಿಯ ವಾಸು ನಾಯಕ್ ಅವರ ಪುತ್ರ ಮೋಹನ್ ನಾಯಕ್(52ವ) ಅಪರಾಧಿಗಳಿಗೆ ನಿರಂತರ ಆಶ್ರಯ ನೀಡಿದ್ದ ಮತ್ತು ಕೋಕಾ ಕಾಯ್ದೆಯಡಿ ವ್ಯಾಖ್ಯಾನಿಸಿರುವಂತೆ ‘ನಿರಂತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ’ ಎಂದು ಅವರು ವಾದ ಮಂಡಿಸಿದ್ದರು.
ಅರ್ಜಿದಾರರ ವಾದ ಆಲಿಸಿದ ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ನ್ಯಾಯಪೀಠ ಜಾಮೀನು ಅರ್ಜಿಯನ್ನು ಪ್ರಶ್ನಾರ್ಹ ತೀರ್ಪಿನ ಮೂಲಕ ಯಾವುದೇ ಪ್ರಭಾವವಿಲ್ಲದೆ ನಿರ್ಧರಿಸಬೇಕು ಎಂದು ಹೇಳಿತ್ತು.
ಗೌರಿಯವರ ಕೊಲೆಗಾರರಿಗೆ ಆಶ್ರಯ ನೀಡಿದ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾದ ಆರೋಪಗಳಡಿಯಲ್ಲಿ ಮೋಹನ್ ನಾಯಕ್ ವಿರುದ್ಧ ‘ಕೋಕಾ’ ಕಾಯ್ದೆಯಡಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಜತೆಗೆ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆದರೆ ಬೆಂಗಳೂರು ಪೊಲೀಸ್ ಆಯುಕ್ತರ ಆದೇಶ ಮತ್ತು ಪೂರಕ ಚಾರ್ಜ್‌ಶೀಟ್ ಎರಡನ್ನೂ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಸುಪ್ರೀಂಕೋರ್ಟಲ್ಲಿ ಪ್ರಶ್ನಿಸಲಾಗಿತ್ತು. ಈ ಮಧ್ಯೆ ಮೋಹನ್ ನಾಯಕ್ ಜಾಮೀನು‌ ಕೋರಿ ಸಲ್ಲಿಸಿದ್ದ ವಿಚಾರಣೆ ಜೂನ್ 30ರಂದು ಹೈಕೋರ್ಟಲ್ಲಿ ನಡೆಯಲು ದಿನ ನಿಗದಿಯಾಗಿತ್ತು. ಕೋಕಾ ಕಾಯ್ದೆಯನ್ನು ಹೈಕೋರ್ಟ್ ರದ್ದು ಪಡಿಸಿರುವುದರಿಂದ ಮತ್ತು ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಿರುವುದರಿಂದ ಮೋಹನ‌ ನಾಯಕ್ ಗೆ ಜಾಮೀನು ಸಿಗಬಹುದೇ ಅಥವಾ ಜಾಮೀನು ಅರ್ಜಿ ಮತ್ತೆ ತಿರಸ್ಕಾರವಾಗಲಿದೆಯೇ ಎಂಬ ಕುತೂಹಲ ಮೂಡಿತ್ತು.‌ ಜೂನ್ 30ರಂದು ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ ಮುಂದೆ ಬಂದಿತ್ತಾದರೂ ಯಾವುದೇ ತೀರ್ಪು ಪ್ರಕಟವಾಗದೆ ಮುಂದೂಡಿಕೆಯಾಗಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.