HomePage_Banner
HomePage_Banner

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಮಧು ನರಿಯೂರು, ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು

Puttur_Advt_NewsUnder_1
Puttur_Advt_NewsUnder_1
  • ಜೂ.2ರಂದು ವರ್ಚುವಲ್ ಗೂಗಲ್ ಮೀಟ್ ಮೂಲಕ ಪದಗ್ರಹಣ ಸಮಾರಂಭ

ಪುತ್ತೂರು: ಪ್ರತಿಷ್ಠಿತ ರೋಟರಿ ಕ್ಲಬ್ ಪುತ್ತೂರು ಇದರ 2021-22ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಮಧು ನರಿಯೂರು ಮತ್ತು ಕಾರ್ಯದರ್ಶಿಯಾಗಿ ಶ್ರೀಧರ್ ಗೌಡ ಕಣಜಾಲುರವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜು.೨ರಂದು ವರ್ಚುವಲ್ ಗೂಗಲ್ ಮೀಟ್‌ನಲ್ಲಿ ನಡೆಯಲಿದೆ.

ಪೂರ್ವಾಧ್ಯಕ್ಷರಾಗಿ ಜೇವಿಯರ್ ಡಿಸೋಜ, ನಿಕಟಪೂರ್ವ ಕಾರ್ಯದರ್ಶಿಯಾಗಿ ದತ್ತಾತ್ರೆಯ ರಾವ್ ಎಂ, ಜತೆ ಕಾರ್ಯದರ್ಶಿ ಡಾ. ಶ್ರೀಪ್ರಕಾಶ್, ನಿಯೋಜಿತ ಅಧ್ಯಕ್ಷ ಉಮಾನಾಥ್‌ ಪಿ ಬಿ, ಕೋಶಾಧಿಕಾರಿಯಾಗಿ ಸೋಮಶೇಖರ್ ರೈ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಸುನಿಲ್ ಶೆಟ್ಟಿ, ವೃತ್ತಿಪರ ಸೇವಾ ವಿಭಾಗದ ನಿರ್ದೇಶಕರಾಗಿ ಡಾ. ಶ್ರೀಪತಿ ರಾವ್, ಸಮುದಾಯ ಸೇವಾ ನಿರ್ದೇಶಕರಾಗಿ ಡಾ. ಜಯದೀಪ್, ಅಂತಾರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕರಾಗಿ ರಫೀಕ್ ಎಂ.ಜಿ, ಯುವ ಸೇವಾ ನಿರ್ದೇಶಕರಾಗಿ ಸುಜಿತ್ ಬಿ, ಸಾರ್ಜೆಂಟ್ ಆಗಿ ಜಗದೀಶ್ ಆಚಾರ್ಯ, ಬುಲೆಟಿನ್ ಎಡಿಟರ್ ಆಗಿ ಸಹ ಶಿಕ್ಷಕ ಕಿಶನ್ ಬಿ.ವಿ, ಎಕ್ಸಿಗೇಟಿವ್ ಸೆಕ್ರೆಟರಿ ಆಗಿ ದೀಪಕ್ ಕೆ.ಪಿ, ಚೆಯರ್‌ಮೆನ್‌ಗಳಾಗಿ ಡಾ. ನಝೀರ್ ಅಹಮ್ಮದ್ ಕೆ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಉದ್ಯಮಿ ವಾಮನ್ ಪೈ, ಶೀಕಾಂತ್ ಕೊಳತ್ತಾಯ, ಪ್ರೀತಾ ಎ, ಹೆರಾಲ್ಡ್ ಮಾಡ್ತಾ, ಸತೀಶ್ ನಾಯಕ್ ಎಂ, ಪ್ರೇಮಾನಂದ್ ಬಿ, ಗೋವಿಂದ ಪ್ರಕಾಶ್ ಸಾಯರವರು ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷ ಮಧು ನರಿಯೂರುರವರ ಪರಿಚಯ: ಉದ್ಯಮಿ ಮಧು ನರಿಯೂರು ಅವರು ಮೂಲತಃ ಸುಳ್ಯ ತಾಲೂಕು ಕನಕಮಜಲು ಪ್ರತಿಷ್ಠಿತ ಪಟೇಲ್ ಮನೆತನದ ನರಿಯೂರು ದುಗ್ಗಪ್ಪ ಗೌಡ ದಂಪತಿ ಪುತ್ರ. ಇವರು ಇಂಡಿಯ ಸಿಮೆಂಟ್‌ನ ಅಧೀಕೃತ ವಿತರಕರಾಗಿದ್ದು ಪುತ್ತೂರಿನ ಬಬ್ಲು ಎಂಟರ್‌ಪ್ರೈಸಸ್‌ನ ಮಾಲಕರಾಗಿದ್ದಾರೆ. ಉದ್ಯಮದ ಜೊತೆ ಕೃಷಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಕೊಂಡಿದ್ದಾರೆ. ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ಇದರ ಉಪಾಧ್ಯಕ್ಷರಾಗಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ನಿರ್ದೇಶಕರಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಮಧು ನರಿಯೂರುರವರು ಪ್ರಸ್ತುತ ಕುರಿಯದಲ್ಲಿ ಪತ್ನಿ ಇನ್ನರ್‌ವೀಲ್ಹ್ ಕ್ಲಬ್‌ನ ಜೊತೆ ಕಾರ್ಯದರ್ಶಿ ಮತ್ತು ರೋಟರಿ ಕ್ಲಬ್‌ನಲ್ಲಿ ಸಕ್ರಿಯರಾಗಿರುವ ಸಂಧ್ಯಾ, ಪುತ್ರಿಯರಾದ ಮಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ದೀಯಾ ನರಿಯೂರು ಹಾಗೂ ೬ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ದ್ವಿತಿ ನರಿಯೂರುರವರೊಂದಿಗೆ ವಾಸ್ತವ್ಯವಿದ್ದಾರೆ.

ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲುರವರ ಪರಿಚಯ: ಮೂಲತಃ ಕನಮಜಲು ಗ್ರಾಮದ ಕಣಜಾಲು ದಿ.ಕೆ.ಎಂ.ಕೃಷ್ಣಪ್ಪ ಗೌಡ ಮತ್ತು ದೇವಕಿ ದಂಪತಿ ಪುತ್ರರಾಗಿರುವ ಶ್ರೀಧರ್ ಗೌಡ ಕಣಜಾಲು ಅವರು ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪರ್ಲಡ್ಕ ಶಿವಪೇಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆ ಸಮಿತಿ ಖಜಾಂಜಿಯಾಗಿದ್ದಾರೆ. ಇದರ ಜೊತೆಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಲಹಾ ಸಮಿತಿ ಸದಸ್ಯರಾಗಿದ್ದು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಇಂಟರ್‌ನಲ್ ಆಡಿಟರ್ ಆಗಿದ್ದಾರೆ. ಇವರ ಪತ್ನಿ ಗಂಗಾ ಸಿ. ಬೆಟ್ಟಂಪಾಡಿ ಸಹಕಾರಿ ಸಂಘದ ಸಿಬ್ಬಂದಿಯಾಗಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪುತ್ರ ಪ್ರಮಿತ್, ಅಂತಿಮ ಪದವಿ ಓದುತ್ತಿರುವ ಶ್ರಮಿತ್‌ರವರೊಂದಿಗೆ ಪರ್ಲಡ್ಕ ಶಿವಪೇಟೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಪದಗ್ರಹಣ ಸಮಾರಂಭ- ಸುದ್ದಿ ಚಾನೆಲ್‌ನಲ್ಲಿ ನೇರ ಪ್ರಸಾರ
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.2ರಂದು ಬೆಳಿಗ್ಗೆ 9ಕ್ಕೆ ಮಹಾವೀರ ವೆಂಚರ್‍ಸ್‌ನಲ್ಲಿ ವರ್ಚುವಲ್‌ಗೂಗಲ್ ಮೀಟ್‌ನಲ್ಲಿ ನಡೆಯಲಿದೆ.

ಮಂಗಳೂರು ರೋಟರಿ ಕ್ಲಬ್‌ನ ಅಧ್ಯಕ್ಷ ಸುಧೀರ್ ಕುಮಾರ್ ಜಾಲನ್ ಅವರು ಪದಪ್ರದಾನ ನಡೆಸಿಕೊಡಲಿದ್ದಾರೆ. ಸುಳ್ಯ ಅಕಾಡೆಮಿಕ್ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ್, ವಲಯ ೫ರ ಸಹಾಯಕ ಗವರ್ನರ್ ಜಿತೇಂದ್ರ ಎನ್.ಎ, ವಲಯ ಲೆಫ್ಟಿನೆಂಟ್ ಉಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೋವಿಡ್ ನಿಯಮಾವಳಿಯಂತೆ ಪದಪ್ರದಾನ ಸಮಾರಂಭ ನಡೆಯಲಿದ್ದು, ಸುದ್ದಿ ಕೇಬಲ್ ಚಾನಲ್ ಮತ್ತು ಸುದ್ದಿ ನ್ಯೂಸ್ ಪುತ್ತೂರು ಯುಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ನಡೆಯಲಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.