HomePage_Banner
HomePage_Banner

ಚಿಗುರೆಲೆಗಳ ನಿನಾದ: ಆನ್‌ಲೈನ್ ಕವಿಗೋಷ್ಠಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಶಸ್ತಿಗಳ ಹಿಂದೆ ಹೋಗದಿರಿ: ರಶ್ಮಿ ಸನಿಲ್

ಪುತ್ತೂರು: ಯುವ ಕವಿಗಳ ಒಗ್ಗೂಡುವಿಕೆಯಿಂದ ಮುನ್ನಡೆಯುತ್ತಿರುವ `ಚಿಗುರೆಲೆಗಳ ನಿನಾದ’ ವಾಟ್ಸಪ್ ಬಳಗದ ವತಿಯಿಂದ ಗೂಗಲ್ ಮೀಟ್ ಮೂಲಕ ಆನ್‌ಲೈನ್ ಕವಿಗೋಷ್ಠಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಲ್ಯಾಬ್ ಸಹಾಯಕ ನಾರಾಯಣ ಕುಂಬ್ರ ಉದ್ಘಾಟಿಸಿದರು.

ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಇನ್ಫೋಸಿಸ್ ಸಂಸ್ಥೆಯ ಲೆಕ್ಕ ಪರಿಶೋಧಕಿಯಾಗಿರುವ ಯುವ ಬರಹಗಾರ್ತಿ ರಶ್ಮಿ ಸನಿಲ್ ಮಂಗಳೂರು ಮಾತನಾಡಿ, ಕವಿಗಳು ತನ್ನ ಅನುಭವನ್ನೇ ಪದಗಳಲ್ಲಿ ಪೋಣಿಸಿ ಕವಿತೆ ರಚಿಸಿರುವುದು ವಿಶೇಷ. ಪ್ರಶಸ್ತಿ, ಬಹುಮಾನದ ಹಿಂದೆ ಬೀಳದೇ ತನ್ನದೇ ರೀತಿಯಲ್ಲಿ ಸಾಧನೆಯಲ್ಲಿ ತೊಡಗಿಸಿಕೊಂಡರೇ ಪ್ರಶಸ್ತಿಗಳು ನಮ್ಮ ಬಳಿ ತನ್ನಿಂದ ತಾನೇ ನಮ್ಮನ್ನು ಸೇರುತ್ತದೆ ಎಂದು ಅವರು ಹೇಳಿದರು. ಅಲ್ಲದೇ ಕವಿಗೋಷ್ಠಿಯಲ್ಲಿ ವಾಚಿಸಿದ ಎಲ್ಲಾ ಕವನಗಳನ್ನು ವಿಮರ್ಶಿಸಿದರು. ಪತ್ರಿಕಾ ವರದಿಗಾರ ಇಬ್ರಾಹಿಂ ಖಲೀಲ್ ಪುತ್ತೂರು ರವರು ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಮುಖ್ಯ ಅತಿಥಿಗಳಾಗಿ ಗ್ರೂಪ್ ಅಡ್ಮೀನ್‌ರಾಗಿರುವ ಯುವ ಕವಯತ್ರಿ ಜೀವಿತಾ ಪುತ್ತೂರು ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ಚಂದ್ರಮೌಳಿ, ಅಪೂರ್ವ ಕಾರಂತ್, ಜೀವಿತಾ ಪುತ್ತೂರು, ಪ್ರಜ್ಞಾ ಕುಲಾಲ್ ಕಾವು, ನಾರಾಯಣ ಕುಂಬ್ರ, ಅಖಿಲಾ ಶೆಟ್ಟಿ ಪುತ್ತೂರು, ಇಂಚರ ಪುತ್ತೂರು, ಸುಪ್ರೀತಾ ಚರಣ್ ಕಡಬ, ಕೀರ್ತನ್, ಸೌಜನ್ಯ ಬಿ.ಎಂ ಕೆಯ್ಯೂರು, ವಿಭಾ ಭಟ್, ಪ್ರಣವ್ ಭಟ್, ರೇಷ್ಮಾ ಶೆಟ್ಟಿ ಗೊರೂರು, ಜೀವನ್ ಪುಣಚ ಸ್ವ-ರಚಿತ ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ಯುವಕವಿ ಸುಪ್ರಿತಾ ಚರಣ್ ಕಡಬ ಪ್ರಾರ್ಥಿಸಿದರು. ಚಂದ್ರ ಮೌಳಿ ಸ್ವಾಗತಿಸಿ, ಸೌಜನ್ಯ ಬಿ.ಎಂ. ಕೆಯ್ಯೂರು ವಂದಿಸಿದರು. ಪ್ರಜ್ಞಾ ಕುಲಾಲ್ ನಿರೂಪಿಸಿದರು. ಪ್ರಣವ್ ಭಟ್, ಇಂಚರ ಪುತ್ತೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.