HomePage_Banner
HomePage_Banner

ಎಡಮಂಗಲ ಡೆಕ್ಕಳದಲ್ಲಿ ನಿರಂತರ ಅಕ್ರಮ ಮದ್ಯ ಮಾರಾಟ-ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು

Puttur_Advt_NewsUnder_1
Puttur_Advt_NewsUnder_1

ಅಕ್ರಮ ಮದ್ಯ ಮಾರಾಟದ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಪಂಚಾಯತ್ ಎದುರು ಧರಣಿ-ಕಮಲಾಕ್ಷ ಎಡಮಂಗಲ ಎಚ್ಚರಿಕೆ

ಕಡಬ: ಎಡಮಂಗಲ ಗ್ರಾಮದ ಡೆಕ್ಕಳ ಎಂಬಲ್ಲಿ ವ್ಯಕ್ತಿಯೋರ್ವರು ಅಕ್ರಮವಾಗಿ ನಿರಂತರ ಮದ್ಯ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ದಾಳಿಯ ನಾಟಕವಾಡಿ ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಲಿತ ಮುಖಂಡ ಕೈಮಲ ಯಾನೆ ಕಮಲಾಕ್ಷ ಆರೋಪಿಸಿದ್ದು, ಅಕ್ರಮ ಮದ್ಯ ಮಾರಾಟದ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಎಡಮಂಗಲ ಪಂಚಾಯತ್ ಕಛೇರಿಯ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜು.2ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಜ,ಎಡಮಂಗಲ ಗ್ರಾ.ಪಂ. ಮಾಜಿ ಸದಸ್ಯ ಕೈಮಲ ಯಾನೆ ಕಮಲಾಕ್ಷ ಅವರು, ಕಳೆದ ಮೂರು ವರ್ಷಗಳಿಂದ ಡೆಕ್ಕಳ ದಿ.ಸೀತಾರಾಮ ಎಂಬವರ ಮಗ ರಂಜಿತ್ ಎಂಬವರು ನಿರಂತರವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಈಗಾಗಲೇ ಪೋಲಿಸ್ ಅಧಿಕಾರಿಗಳನ್ನು ಭೇಟಿ ಮಾಡಿ ಖುದ್ದು ದೂರು ನೀಡಿದರೂ ಪ್ರಯೋಜನವಾಗಿಲ್ಲ, ಇನ್ನು ನಮಗೆ ಪ್ರತಿಭಟನೆ ಒಂದೇ ದಾರಿ, ಆದುದರಿಂದ ಅಕ್ರಮ ಮದ್ಯ ಮಾರಾಟದ ವಿರುದ್ದ ಕ್ರಮ ಕೈಗೊಂಡು ಅದನ್ನು ನಿಲ್ಲಿಸದಿದ್ದರೆ, ಜು.7ರಂದು ಮಹಿಳೆಯರೊಂದಿಗೆ ಸೇರಿ ಎಡಮಂಗಲ ಗ್ರಾಮ ಪಂಚಾಯತ್ ಎದುರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ, ಪತ್ರಿಕಾಗೋಷ್ಟಿಯಲ್ಲಿ ಕೇಶವ ಮುಳಿಮಜಲು ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.