HomePage_Banner
HomePage_Banner

ಕೆ.ಎಂ.ಜೆ., ಎಸ್.ವೈ.ಎಸ್., ಎಸ್.ಎಸ್.ಎಫ್., ಕೆ.ಸಿ.ಎಫ್. ವತಿಯಿಂದ ಗಂಡಿಬಾಗಿಲು ಶಾಲಾ ವಠಾರದಲ್ಲಿ ಸಹಾಯ್ ಸ್ವಚ್ಛತಾ ಅಭಿಯಾನ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: “ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” ಎಂಬ ಘೋಷಣೆಯೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್., ಎಸ್.ಎಸ್.ಎಫ್., ಕೆ.ಸಿ.ಎಫ್. ಇದರ ಸಹಾಯ್ ಆಶ್ರಯದಲ್ಲಿ ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತಾ ಅಭಿಯಾನ ಕಾರ್‍ಯಕ್ರಮ ನಡೆಯಿತು.

ಎಸ್.ವೈ.ಎಸ್. ಘಟಕದ ಅಧ್ಯಕ್ಷ ಹಸೈನಾರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಹಾಯ್ ಉಪ್ಪಿನಂಗಡಿ ಘಟಕದ ಉಸ್ತುವಾರಿ ಅಬ್ದುಲ್ ರಝಾಕ್ ಲತೀಫಿ ಕುಂತೂರ್ ಉದ್ಘಾಟಿಸಿದರು.

ಗಂಡಿಬಾಗಿಲು ಶಾಲಾ ಮುಖ್ಯ ಶಿಕ್ಷಕ ಶೇಖರ್ ಕತ್ತಿ ಮಾತನಾಡಿ ಸಹಾಯ್ ತಂಡದ ಸೇವೆಯು ನಮ್ಮ ಶಾಲೆಗೆ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೂ ಸ್ವಚ್ಚತಾ ಅಭಿಯಾನ ಮಾಡುತ್ತಿರುವುದು ಜನರು ಹಾಗೂ ದೇವರು ಮೆಚ್ಚುವಂಥದ್ದು ಎಂದು ಶುಭ ಹಾರೈಸಿದರು.

ಎಸ್.ಎಸ್.ಎಫ್. ಮಸೂದ್ ಸಅದಿ, ಎಸ್.ವೈ.ಎಸ್. ಸರಳೀಕಟ್ಟೆ ಸೆಂಟರ್ ಅಧ್ಯಕ್ಷ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಸಂಘಟನೆಯ ಸೇವಾ ಕಾರ್‍ಯಕ್ರಮಗಳ ಬಗ್ಗೆ ತಿಳಿಸಿದರು.

ಸಹಾಯ್ ಉಪ್ಪಿನಂಗಡಿ ಘಟಕದ ಯೂಸುಫ್ ಹಾಜಿ ಕಳಂಜಿಬೈಲ್, ಸುಲೈಮಾನ್ ಕರಾಯ ಸ್ಥಳೀಯರಾದ ರಝಾಕ್ ಮುಸ್ಲಿಯಾರ್, ಎಸ್.ಪಿ. ಮಜೀದ್, ಶಾಕಿರ್, ಮಜೀದ್ ಎಸ್. ಉಪಸ್ಥಿತರಿದ್ದರು.

ಎಸ್.ವೈ.ಎಸ್. ಕಾರ್‍ಯದರ್ಶಿ ಮುಸ್ತಫಾ ಮುಸ್ಲಿಯಾರ್ ಗಂಡಿಬಾಗಿಲು ಸ್ವಾಗತಿಸಿ, ಎಸ್.ಎಸ್.ಎಫ್. ಗಂಡಿಬಾಗಿಲು ಘಟಕದ ಅಧ್ಯಕ್ಷ ಸೈಫ಼ುಲ್ಲ ಬಿ.ಎಸ್. ವಂದಿಸಿದರು. ಎಸ್.ವೈ.ಎಸ್. ಪ್ರಧಾನ ಕಾರ್‍ಯದರ್ಶಿ ಹಾರಿಸ್ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.