ಕಡಬದ ಯಶಸ್ವೀ ಉದ್ಯಮಿ ಸುಂದರ ಗೌಡ ಮಂಡೆಕರ ಅವರಿಗೆ ಅರವತ್ತರ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ಕಡಬ: ಕಡಬದ ಯಶಸ್ವೀ ಉದ್ಯಮಿ ಸುಂದರ ಗೌಡ ಮಂಡೆಕರ ಅವರಿಗೆ ಅರವತ್ತರ ಸಂಭ್ರಮ

ಕಡಬ: ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿದರೆ ಬದುಕಿನಲ್ಲಿ ಯಶಸ್ಸು ಖಂಡಿತಾ ಇದೆ, ಇದಕ್ಕೆ ನಿದರ್ಶನ ಕಡಬದ ಸುಂದರ ಗೌಡ ಮಂಡೆಕರ ಅವರು ಯಶಸ್ವೀ ಉದ್ಯಮಿಯಾಗಿ ಇಂದು ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಠ ಚಾಪು ಮೂಡಿಸಿ ಯಶಸ್ವೀ ಉದ್ಯಮಿಯಾಗಿ ಸಮಾಜದ ಯುವ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ.
ಮಲೆನಾಡ ತಪ್ಪಲಿನ ಕೊಂಬಾರು ಗ್ರಾಮದ ಮಂಡೆಕರ ಎಂಬಲ್ಲಿನ ಬಡ ಕುಟುಂಬದಿಂದ ಬಂದು ಉದ್ಯಮ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ತನ್ನ ಸಾರ್ಥಕ ಬದುಕನ್ನು ರೂಪಿಸಿಕೊಂಡಿದ್ದಾರೆ. ಬದುಕಿನಲ್ಲಿ ಸವಾಲುಗಳನ್ನು ಎದುರಿಸಿ ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಕಡಬದ ಸುಂದರ ಗೌಡ ಮಂಡೆಕರ ಅವರ ಸಾರ್ಥಕ ಬದುಕಿನ ಐವತ್ತೊಂಬತ್ತು ವಸಂತಗಳನ್ನು ಪೂರೈಸಿ ಅರವತ್ತನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
1979 ರಲ್ಲಿ ಹೈಸ್ಕೂಲು ಶಿಕ್ಷಣವನ್ನು ಮುಗಿಸಿ ಸುಳ್ಯದ ತೂಗು ಸೇತುವೆ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಜ್ ಅವರಲ್ಲಿ ರೇಷನಲ್ ಇಂಜಿನಿಯರ್ ವರ್ಕರ್(ಆಯಶಿಲ್ಪಿ) ಆಗಿ ವೃತಿ ಆರಂಭಿಸಿದ್ದರು. ಗಿರೀಶ್ ಭಾರಧ್ವಜ್ ಅವರ ಗರಡಿಯಲ್ಲಿ ಮೂರು ವರ್ಷ ಪಳಗಿ, ಅವರ ಮಾರ್ಗದರ್ಶನದಲ್ಲಿ ಕಡಬ ಸಂತೆ ಕಟ್ಟೆ ಬಲಿ, ಪಂಚಾಯತ್ ಕಟ್ಟಡದಲ್ಲಿ ಕೆಎಸ್ಎಫ್ಸಿಯಿಂದ ಆರ್ಥಿಕ ಸಹಕಾರ ಪಡೆದು 27-10-1982 ರಂದು ಶ್ರೀ ಗಣೇಶ್ ಇಂಡಸ್ಟ್ರೀಸ್ ಪ್ರಾರಂಭಿಸಿ ಸ್ವಂತ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯೇ ಲೇತ್ ವರ್ಕ್ ಮತ್ತು ಆಯಿಲ್ ಮಿಲ್ ಆರಂಭಿಸಿದ್ದರು. ಬಳಿಕ ಈಗ ಇರುವ ಜಾಗವನ್ನು ಖರೀದಿಸಿ ಅಲ್ಲಿ ಶ್ರೀ ಗಣೇಶ್ ಬಿಲ್ಡಿಂಗ್ ನಿರ್ಮಿಸಿ ಅಲ್ಲಿಗೆ ಗಣೇಶ್ ಇಂಡಸ್ಟ್ರೀಸ್ ಹಾಗೂ ಆಯಿಲ್ ಮಿಲ್ ನ್ನು ಸ್ಥಳಾಂತರಗೊಳಿಸಿದರು ಬಳಿಕ ಸುಂದರ ಗೌಡರ ಹೊಸ ಯುಗ ಆರಂಭವಾಯಿತು. ಬಿಡುವಿಲ್ಲದ ಶ್ರಮ, ಕೆಲಸದಲ್ಲಿ ನಿಷ್ಠೆ ಸುಂದರ ಗೌಡರ ಯಶಸ್ಸಿನ ಹಾದಿಯಲ್ಲಿ ಮತ್ತಷ್ಟು ಸಾಧಿಸುವಂತಾಯಿತು. ಶ್ರೀ ಗಣೇಶ್ ಬಿಲ್ಡಿಂಗ್ ಹಂತಹಂತವಾಗಿ ವಿಸ್ತಾರಗೊಂಡು ಈಗ ಗಣೇಶ್ ಬಿಲ್ಡಿಂಗ್ ವಾಣಿಜ್ಯ ಸಮಚ್ಚಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಕಛೇರಿ, ಸೆಂಟ್ರಲ್ ಸೆಲೆ ಬಸ್‌ ಶಾಲೆ ಸೇರಿದಂತೆ 30 ಕ್ಕೂ ಹೆಚ್ಚು ವಾಣಿಜ್ಯ ವ್ಯವಹಾರ ಮಳಿಗೆಗಳು ಇವೆ.
ಉದ್ಯಮದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸುಂದರ ಗೌಡರು 1994 ರಲ್ಲಿ ಮೊದಲ ಬಾರಿಗೆ ಕಡಬ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಎರಡನೇ ಬಾರಿಗೂ ಪಂಚಾಯತ್ ಗೆ ಆಯ್ಕೆಯಾಗಿ ಜನಪರ ಕೆಲಸಗಳನ್ನು ಮಾಡಿದ್ದರು. ಸಹಕಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೆಶಕ ರಾಗಿ ಎರಡು ಬಾರಿ ಆಯ್ಕೆಯಾಗಿ ಸಂಘದ ಅಧ್ಯಕ್ಷರಾಗಿ ರೈತಾಪಿ ವರ್ಗದ ಹಿತ ಕಾಯುವಲ್ಲಿ ಯಶಸ್ವೀ ಕಾರ್ಯ ನಿರ್ವಹಿಸಿದ್ದರು. 2017 ರಲ್ಲಿ ಇವರ ಅಧ್ಯಕ್ಷ ಅವಧಿಯಲ್ಲಿ ಮಂಗಳೂರಿನಲ್ಲಿ ನಡೆದ 64 ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಕಡಬ ಪ್ರಾಥಮಿಕ ಸಹಕಾರ ಸಂಘಕ್ಕೆ ಅತ್ಯುಮ ಸಹಕಾರ ಸಂಘ ಪ್ರಶಸ್ತಿ ಲಭಿಸಿತ್ತು. ಸಂಘದ ನೂತನ ಕಟ್ಟಡದ ಉದ್ಘಾಟನೆ, ನೂಜಿಬಾಳ್ತಿಲ-ಕಲ್ಲುಗುಡ್ಡೆ ಶಾಖೆಯ ನೂತನ ಕಟ್ಟಡ, ದಾಸ್ತಾನು ಕೊಠಡಿಗೆ ಶಿಲಾನ್ಯಾಸ, ಕಡ್ಯಕೊಣಾಜೆಯಲ್ಲಿ ಸಂಘದ ಮೂರನೇ ಶಾಖೆ ಪ್ರಾರಂಭ ಹೀಗೆ ಸುಂದರ ಗೌಡರ ಅವಧಿಯಲ್ಲಿ ಸಂಘದ ಅಭಿವೃದ್ಧಿ ಕಾರ್ಯಗಳು ನಡೆದಿತ್ತು. ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತು, ತಳಮಟ್ಟದಿಂದಲೇ ಪಕ್ಷವನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಕಡಬ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದ ಸುಂದರ ಗೌಡರು ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ಕ್ಷೆತ್ರದ ಜೀರ್ಣೋದ್ದಾ ಸಮಿತಿ ಉಪಾಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ, ಪಿಜಕಳ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಡಬ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾಗಿ ದೀರ್ಘ ಕಾಲದಿಂದ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜು ಸ್ಥಾಪಕಾಧ್ಯಕ್ಷರಾಗಿದ್ದಾರೆ. ಜೆಸಿಐ, ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಸುಂದರ ಗೌಡರು 1983 ರಲ್ಲಿ ಪಂಜ ಸಾಧಶ್ರೀ ಪ್ರಶಸ್ತಿ, ಕಡಬ ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಗಿತ್ತು. ಸುಂದರ ಗೌಡರು ಉದ್ಯಮಿಯಾಗಿ ಸಾಮಾಜಿಕ ಧಾರ್ಮಿಕ ಹಾಗೂ ಸಹಕಾರಿ ಕ್ಷೆತ್ರದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಗೆ ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಇವರಿಗೆ ಸಮಾಜ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಸುಂದರ ಗೌಡರು ತಾನೂ ಬೆಳೆಯುವುದರೊಂದಿಗೆ ಅದೆಷ್ಟೋ ಯುವಕರಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶಕರಾಗಿ ಆರ್ಥಿಕ ಸಹಕಾರಿಯಾಗಿ ಬೆಳೆಯಲು ಅವಕಾಶ ಕಲ್ಪಿಸಿ ಮಾದರಿಯಾಗಿದ್ದಾರೆ. ಇವರ ಕೈಕೆಳಗೆ ದುಡಿದು ಇವರ ಗರಡಿಯಲ್ಲಿ ಪಳಗಿದವ ಯುವಕರು ಇಂದು ತಮ್ಮದೇ ಉದ್ಯಮ ನಡೆಸುತ್ತಾ ಬದುಕುಕಟ್ಟಿಕೊಂಡು ಸುಂದರ ಗೌಡರಿಗೆ ಅಬಾರಿಯಾಗಿದ್ದಾರೆ.
ಸುಂದರ ಗೌಡರು ಕೋಡಿಂಬಾಳ ಗ್ರಾಮದ ಮಡ್ಯಡ್ಕ ಹಾಗೂ ಕೊಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಮುಗಿಸಿ ಬಳಿಕ ಕುಕ್ಕೇಶ್ರೀ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಐತ್ತೂರು ಗ್ರಾಮದ ಮಂಡೆಕರ ನಿವಾಸಿ ಕೊರಗಪ್ಪ ಗೌಡ ಹಾಗೂ ಅಕ್ಕಮ್ಮ ದಂಪತಿ ಪುತ್ರರಾಗಿರುವ ಸುಂದರ ಗೌಡರು ಪ್ರಸ್ತುತ ಕಡಬ ಗ್ರಾಮದ ತುಂಬೆತಡ್ಕದಲ್ಲಿ ನೆಲೆಸಿದ್ದಾರೆ. ಇವರು 1984 ಮೇ.13ರಂದು ಚಂದ್ರಾವತಿ ಅವರನ್ನು ಮದುವೆಯಾಗಿ ಇಬ್ಬರು ಪುತ್ರರನ್ನು ಪಡೆದಿದ್ದಾರೆ. ಇವರ ಪುತ್ರ ಹೇಮಂತ್ ಎಂ.ಎಸ್ ಅವರು ಬಿಎಸ್ಎನ್ಎಲ್ ನಲ್ಲಿ ಜೆಟಿಒ ಆಗಿ ಉನ್ನತ ಹುದ್ದೆಯಲ್ಲಿದ್ದಾರೆ. ಸೊಸೆ ಲಾವಣ್ಯ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಪುತ್ರ ಹಿತೇಶ್ ಎಂ.ಎಸ್ ಅವರು ತಂದೆಯ ಮಾರ್ಗದರ್ಶನದಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಗಣೇಶ್ ಬಿಲ್ಡಿಂಗ್ ಬಳಿ ಕಡಬ ಶ್ರೀ ಗಣೇಶ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದಾರೆ. ಸೊಸೆ ಸುಮಿತ್ರಾ ಅವರು ಉದ್ಯಮ ಕ್ಷೆತ್ರದಲ್ಲಿ ತೊಡಗಿಸಿಕೊಂಡಿದ್ದು ಶ್ರೀ ಗಣೇಶ್ ಸ್ಟೀಲ್ ಇಂಡಸ್ಟ್ರೀಸ್‌ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಮೊಮ್ಮಕ್ಕಳಾದ ದೀಕ್ಷಿ, ಚಾರ್ವಿ, ಶಾರ್ವಿಕ್, ಕಲ್ಪಕ್ ಅರೊಂದಿಗೆ ಸುಂದರ ಗೌಡರು ಸುಖೀ ಸಂಸಾರ ನಡೆಸುತ್ತಿದ್ದಾರೆ.
ಸುಂದರ ಗೌಡ ಮಂಡೆಕರ ಅವರ ಸಾಧನೆಯ ಹಾದಿಯಲ್ಲಿ ಉನ್ನತ ಸ್ಥಾನಕ್ಕೆರಿ ಸಮುದಾಯದ ಜನ ಹೆಮ್ಮೆ ಪಡುವ ರೀತಿಯಲ್ಲಿ ಬೆಳೆದು ಬಂದು ಇದೀಗ 60 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಮ್ಮ ಮುಂದಿನ ಜೀವನವು ಇನ್ನಷ್ಟು ಉಜ್ವಲವಾಗುವುದರೊಂದಿಗೆ ನಿಮ್ಮ ಸಮಾಜಮುಖಿ ಕಾರ್ಯಗಳು ಮುಂದುವರಿಯಲು ಭಗವಂತನು ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಉನ್ನತ ಸಾಧನೆ ಮಾಡಲು ಆಶೀರ್ವದಿಸಲಿ ಎಂಬ ಹಾರೈಕೆಗಳೊಂದಿಗೆ..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.