HomePage_Banner
HomePage_Banner

ಯಾರಲ್ಲೂ ಹೇಳ್ಬೇಡ..ಹೊಸ ಟೀಮ್ ಮಾಡ್ತೇವೆ ನಳಿನ್ ಕುಮಾರ್ ಅವರದ್ದೆನ್ನಲಾದ ಆಡಿಯೋ ವೈರಲ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಕುರಿತ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇದೇ ವಿಚಾರದಲ್ಲಿ ಮಾತನಾಡಿದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿ ವ್ಯಾಪಕ ಚರ್ಚೆಯಾಗುತ್ತಿದೆ.

 

ತುಳು ಭಾಷೆಯಲ್ಲಿ ಮಾತನಾಡಿರುವ ಈ ಆಡಿಯೋದಲ್ಲಿ’ಯಾರಲ್ಲಿಯೂ ಹೇಳಲಿಕ್ಕೆ ಹೋಗ್ಬೇಡಿ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಮನ್ನು ತೆಗೆಯುತ್ತೇವೆ. ಹೊಸ ಟೀಮ್ ಮಾಡ್ತಾ ಇದ್ದೇವೆ. ಯಾರಲ್ಲೂ ಹೇಳ್ಬೇಡ. ಏನೂ ತೊಂದರೆ ಇಲ್ಲ. ಹೆದರಬೇಡ. ಇನ್ನು ಮುಂದೆ ಎಲ್ಲವೂ ನಮ್ಮ ಕೈಲಿದೆ. ಮೂರು ಜನರ ಹೆಸರು ಲಿಸ್ಟಲ್ಲಿದೆ. ಯಾರೂ ಆಗಬಹುದು. ಇಲ್ಲಿಯವರಿಗ್ಯಾರಿಗೂ ಕೊಡೋದಿಲ್ಲ. ಎಲ್ಲವೂ ಡೆಲ್ಲಿಯಿಂದಲೇ ಆಗುತ್ತದೆ..ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದೆನ್ನಲಾದ ಆಡಿಯೋ ರಾತ್ರೋರಾತ್ರಿ ವೈರಲ್ ಆಗಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ತಮ್ಮ ಆಪ್ತರ ಜೊತೆ ಕುಳಿತು ಮಾತನಾಡಿದ್ದೆನ್ನಲಾದ ಈ ಆಡಿಯೋ ಕುರಿತ ವರದಿ ದೃಶ್ಯ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.