HomePage_Banner
HomePage_Banner

ವಿಟ್ಲದಲ್ಲಿ ಭಯಾತಂಕದ ನಡುವೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ವಿಟ್ಲ: ರಾಜ್ಯಾದ್ಯಂತ  ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು, ದ.ಕ ಜಿಲ್ಲೆಯಲ್ಲಿಯೂ ವಿದ್ಯಾರ್ಥಿಗಳು ಭಯಾತಂಕದ ನಡುವೆ  ಪರೀಕ್ಷೆ ಬರೆದರು. ಪ್ರಥಮ ದಿನವಾದ ಜು.19ರಂದು ವಿಟ್ಲದಲ್ಲಿ ತೆರೆಯಲಾಗಿರುವ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 750 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ವಿಟ್ಲ ವಿಠಲ ಪ್ರೌಢ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು, ಸೈಂಟ್ ರೀಟಾ ಶಾಲೆಗಳಲ್ಲಿ ಮೂರು ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವಿಟ್ಲ ಮಾದರಿ ಶಾಲೆಯನ್ನು ಉಪ ಕೇಂದ್ರ ಮಾಡಲಾಗಿತ್ತು. ವಿಠಲ ಪ್ರೌಢ ಶಾಲೆಯಲ್ಲಿ 286, ಸೈಂಟ್ ರೀಟಾ ಶಾಲೆಯಲ್ಲಿ 131, ಮತ್ತು ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ 333 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 750 ವಿದ್ಯಾರ್ಥಿಗಳಿಗೆ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ವಿಠಲ ಪ್ರೌಢ ಶಾಲೆ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಸೈಂಟ್ ರೀಟಾ, ಗುಣಶ್ರೀ ಕುಂಡಡ್ಕ, ಹೊರೈಝನ್ ವಿಟ್ಲ, ಬೊಳಂತಿಮೊಗರು ಶಾಲೆ, ಶ್ರೀದೇವಿ ಪ್ರೌಢ ಶಾಲೆ ಪುಣಚ, ಸರ್ಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಶಾಲಾ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು.

ಒಂದು ಬೆಂಚ್ ನಲ್ಲಿ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ ತಲಾ 12 ಮಂದಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸಲಾಗಿದೆ. ವಿಟ್ಲ ಆರೋಗ್ಯ ಇಲಾಖೆ, ಸೌಟ್ ಗೈಡ್ಸ್, ಆಶಾಕಾರ್ಯಕರ್ತೆಯರು ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡಿ ತಪಾಸಣೆ ಮಾಡಿ  ಮಾಸ್ಕ್ ವಿತರಿಸಿದರು. ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ವಿಟ್ಲ ರೋಟರಿ ಕ್ಲಬ್ ವತಿಯಿಂದ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.