ಪುತ್ತೂರು: ಅಡಿಕೆ ತೋಟಕ್ಕೆ ಮದ್ದು ಬಿಡುವುದು ಹಾಗೂ ತೆಂಗಿನಕಾಯಿ ಕೊಯ್ಯುವಂತ ಪುರುಷರಷ್ಟೇ ಸಮನಾಂತರ ಶ್ರಮದಾಯಕವಾದ ಕೃಷಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶೇಖಮಲೆ ಲಕ್ಷ್ಮೀ ಹಾಗೂ ರಾಜೇಶ್ ದಂಪತಿಯನ್ನು ಜು.19ರಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ರೈತ ಮೋರ್ಚಾದಿಂದ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ರೈತ ಮೋರ್ಚಾದ ಪ್ರಭಾರ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಪುನೀತ್ ಮಾಡತ್ತಾರು, ಉಪಾಧ್ಯಕ್ಷ ಬೆಳೆಯಪ್ಪ ಗೌಡ ವೀರಮಂಗಲ ಹಾಗೂ ಕಿಶೋರ್ ಬೇರಿಕೆ ಉಪಸ್ಥಿತರಿದ್ದರು.