HomePage_Banner
HomePage_Banner

ರೆಂಜಲಾಡಿ ಮಸೀದಿಯಲ್ಲಿ ಬಕ್ರೀದ್ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತ್ಯಾಗ, ಸಮಾನತೆ ಸಾರುವ ಈದ್ ಸಂದೇಶ ನಮ್ಮೆಲ್ಲರ ದೈನಂದಿನ ಬದುಕಿನಲ್ಲಿ ಅಳವಡಿಕೆಯಾಗಲಿ – ರಫೀಕ್ ಫೈಝಿ ಮಾಡನ್ನೂರು

ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ ಜು.21ರಂದು ನಡೆಯಿತು.ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು,ಮಾಸ್ಕ್ ಧರಿಸಿ ನಮಾಜು ನಿರ್ವಹಿಸಲಾಯಿತು.

ಬಕ್ರೀದ್ ವಿಶೇಷ ನಮಾಜಿಗೆ ನೇತೃತ್ವ ನೀಡಿದ ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ಮಾತನಾಡಿ ತ್ಯಾಗ ಮತ್ತು ಸಮಾನತೆಯ ಸಂದೇಶ ಸಾರುವ ಈದುಲ್ ಅದ್ಹಾ(ಬಕ್ರೀದ್) ಹಬ್ಬ ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತಗೊಳ್ಳದೆ ನಮ್ಮ ನಿತ್ಯ ಬದುಕಿನಲ್ಲೂ ಆ ಸಂದೇಶಗಳು ಅಳವಡಿಕೆಯಾಗಲಿ ಎಂದು ಹೇಳಿದರು.

ಪ್ರವಾದಿ ಇಬ್ರಾಹಿಂರವರ ತ್ಯಾಗೋಜ್ವಲವಾದ ಸಂದೇಶ ಜಗತ್ತಿಗೆ ಮಾದರಿಯಾಗಿದ್ದು ಸೃಷ್ಟಿಕರ್ತನ ಆಜ್ಞೆಯನ್ನು ಪಾಲಿಸುವುದಕ್ಕಾಗಿ ಅವರು ಮಾಡಿದ್ದ ತ್ಯಾಗ ಮತ್ತು ಪ್ರಾಮಾಣಿಕತೆಯಲ್ಲಿ ನಮಗೆ ನೂರಾರು ಪಾಠಗಳಿವೆ, ನಮ್ಮಲ್ಲಿರುವ ಯಾವುದೇ ಕೆಟ್ಟ ಗುಣಗಳನ್ನು ತ್ಯಜಿಸುವ ನಿರ್ಧಾರವನ್ನು ಬಕ್ರೀದ್ ದಿನ ಪ್ರತಿಯೊಬ್ಬರೂ ಮಾಡಬೇಕಾಗಿದೆ, ನಮ್ಮೊಳಗೆ ಪರಸ್ಪರ ಪ್ರೀತಿ ಹಂಚುವ ಮೂಲಕ ಕುಟುಂಬ ಸಂಬಂಧವನ್ನು ಬೆಸೆಯುವ ಕಾರ್ಯವನ್ನು ನಡೆಸಬೇಕಾಗಿದೆ ಎಂದು ಅವರು ಹೇಳಿದರು.

ಮಸೀದಿಯ ಸದರ್ ಅಬೂಬಕ್ಕರ್ ಮುಸ್ಲಿಯಾರ್, ಜಮಾಅತ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಕಡ್ಯ, ಮಾಜಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಪ್ರ.ಕಾರ್ಯದರ್ಶಿ ಝೈನುದ್ದೀನ್ ಜೆ.ಎಸ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.