HomePage_Banner
HomePage_Banner

ಹಬ್ಬಗಳು ಮಾನವರನ್ನು ಪರಸ್ಪರ ಬೆಸೆಯುವ ಕೊಂಡಿಯಾಗಲಿ -ಅನಸ್ ತಂಙಳ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ಕರುವೇಲು ಬದ್ರಿಯಾ ಜುಮಾ ಮಸೀದಿ ಯಲ್ಲಿ ಬಕ್ರೀದ್ ಹಬ್ಬದ ಆಚರಣೆಯು ಕೋವಿಡ್ 19 ಮಾರ್ಗ ಸೂಚಿ ಪಾಲಿಸಿ ಸರಳವಾಗಿ ಆಚರಿಸಲಾಯಿತು.

ನಮಾಝ್ ಮತ್ತು ಖುತುಬ ನೇತೃತ್ವವನ್ನು ಸ್ಥಳೀಯ ಖತೀಬರಾದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ವಹಿಸಿದರು. ಈದ್ ಸಂದೇಶ ನೀಡಿ ಮಾತನಾಡಿದ ಅವರು ಜಗತ್ತಿನ ಪ್ರಮುಖ ಧರ್ಮೀಯರಿಂದಲೂ ಪ್ರಕೀರ್ತಿಸಲ್ಪಡುವ ಪರಿತ್ಯಾಗಿಗಳಿಗೆ ಆದರ್ಶಪ್ರಾಯರೂ ಕುಟುಂಬ ಪರಿವಾರಕ್ಕೆ ಮಾದರಿಯುಕ್ತರೂ ,

ಹೋರಾಟಗಾರಿಗೆ ಸ್ಪೂರ್ತಿದಾಯಕರೂ ಆಗಿ ಸ್ಮರಿಸಲ್ಪಡುತ್ತಿರುವ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ ಮತ್ತು ಅವರ ಕುಟುಂಬದ ಪ್ರೌಡ್ವೋಜ್ವಲ ತ್ಯಾಗ ಮತ್ತು ಬಲಿದಾನಗಳ ನೆನಪಿಗಾಗಿ ಆಚರಿಸಲ್ಪಡುತ್ತಿರುವ ಈದುಲ್ ಅಝ್ಹಾ ಜಗತ್ತಿನ ಪ್ರತೀ ಪ್ರಜೆಗಳಿಗೂ ಪ್ರಗತಿಯ ಪ್ರಪುಲ್ಲತೆಯನ್ನು ಪ್ರಧಾನಿಸಲಿ ಮತ್ತು ನಮ್ಮ ಹಬ್ಬಗಳು ಮಾನವರನ್ನು ಪರಸ್ಪರ ಬೆಸೆಯುವ ಕೊಂಡಿಯಾಗ ಬೇಕೇ ಹೊರತು ದ್ವೇಷಾಸೂಯೆ ವೃದ್ದಿಸಿ ಅವರ ಮಧ್ಯೆ ಕಂದಕ ಸೃಷ್ಟಿಗೆ ಹೇತುವಾಗ ಬಾರದು ಶುಭ ಹಾರೈಸಿದರು.

ಜಮಾಅತ್ ಅಧ್ಯಕ್ಷ ಉಮರಬ್ಬ ತೋಜ, ಕಾರ್ಯದರ್ಶಿ ಅಬ್ದುಲ್ ರಝ್ಝಾಕ್, ಕೋಶಾಧಿಕಾರಿ ಮುಹಮ್ಮದ್ ಸೇರಿದಂತೆ ಕಮೀಟಿ ಸದಸ್ಯರು ಮತ್ತು ಜಮಾಅತರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.