ಸರ್ವೆ: ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗದ್ದೆ ಕೃಷಿ ಕ್ಷೇತ್ರದಲ್ಲಿ ನೇಜಿ ನಾಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭತ್ತ ಬೆಳೆಯೋಣ- ಬಾ ಗದ್ದೆಗಿಳಿಯೋಣ ಪರಿಕಲ್ಪನೆಯಡಿಯಲ್ಲಿ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯ ಎಂಬಲ್ಲಿ ಈಗಾಗಲೇ ಜೀರ್ಣೋದ್ಧಾರ ಗೊಳ್ಳುತ್ತಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಈ ಸಾರಿ ಎಲಿಯ ಗದ್ದೆ ಕೃಷಿ ಕ್ಷೇತ್ರ ಎಂಬ ಹೆಸರಿನಲ್ಲಿ ಗ್ರಾಮದ ಕೆಲವು ಸಮಾನ ಮನಸ್ಕರು ಕೂಡಿಕೊಂಡು ಹಾಗೂ ವೆಂಕಪ್ಪ ನಾಯ್ಕ ಎಲಿಯ, ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ, ಕೂಡುರಸ್ತೆ ಅಬೂಬಕ್ಕರ್ ಮಜಲುಗದ್ದೆ ನಾಲ್ಕು ಮನೆಯವರು ಸೇರಿಕೊಂಡು ಒಟ್ಟು ಮೂರುವರೆ ಎಕ್ರೆ ಹಡೀಲು ಇದ್ದ ಗದ್ದೆಯನ್ನು ದೇವಳದ ವತಿಯಿಂದ ಗದ್ದೆ ಕೃಷಿ ಮಾಡುತ್ತಿದ್ದಾರೆ.

ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ, ಶಾಸಕರಾದ ಸಂಜೀವ ಮಠಂದರೂ ಅವರ ಸಹಕಾರದೊಂದಿಗೆ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರಿಂದ ಕೃಷಿಗೆ ಬೇಕಾದ ಸಂಪೂರ್ಣ ಬಿತ್ತನೆ ಬೀಜ ಕೊಡುಗೆಯಿಂದ, ಹಾಗೂ ಊರ-ಪರವೂರ ಕೃಷಿ ಅಭಿಮಾನಿಗಳ ಶ್ರಮದಾನದಿಂದ ನೇಜಿ ನೆಡುವ ಕೆಲಸವು ನಡೆಯಿತು. ಎಲಿಯ ಗ್ರಾಮದ ಭಕ್ತಾಧಿಗಳು ಹಾಗೂ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶ್ರೀ ಸದಾಶಿವೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀಧರ ರಾವ್ ಕೆ. ಮೇಧಿನಿ ಫಾಮ್ಸ್ ರವರು ಹಾಗೂ ಅವರ ೧೫ ಜನ ತಂಡದವರು ಸೇರಿದ್ದರು. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಗಿರೀಶ್ ಗೌಡರವರು ಸುಮಾರು ೮೦೦ ಕ್ಕೂ ಹೆಚ್ಚು ನೇಜಿ ಸೂಡಿಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಎಲಿಯ ದೇವಳದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಸಮಿತಿಯ ಆರ್ಥಿಕ ಸಮಿತಿ ಸಂಚಾಲಕ ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯ-ಕೆದ್ಲಾಯಾಮೂಲೆ, ಆರ್ಥಿಕ ಸಮಿತಿಯ ಸದಸ್ಯರಾದ ಎನ್. ರವಿನಾರಾಯಣ ಭಟ್ ಮಚ್ಚಿಮಲೆ, ಜೀರ್ಣೋದ್ಧಾರ ಸಮಿತಿಯ ಸದಸ್ಯ ಉದಯಕುಮಾರ್ ರೈ ಬಾಕುಡರವರು ಸ್ವತಃ ಗದ್ದೆಗಿಳಿದು ನೇಜಿ ನೆಡುವಲ್ಲಿ ಸಹಕಾರ ನೀಡಿದರು. ಸರ್ವೆ, ಕೆದಂಬಾಡಿ ಗ್ರಾಮದ ಹಲವಾರು ಭಕ್ತಾಧಿಗಳು ನೇಜಿ ನೆಡುವ ಕೆಲಸದಲ್ಲಿ ಭಾಗವಹಿಸಿದ್ದರು. ಆನಂದ್ ರೈ ಮಠ, ಎಲಿಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆಶೋಕ್ ರೈ ಸೊರಕೆ, ಸುಮಿತ್ರ ತಿಂಗಳಾಡಿ, ಕಮಲ ತಿಂಗಳಾಡಿ, ಕಾರ್ತಿಕ್ ಗೌಡ ಮಜಲುಗದ್ದೆ, ಶಿವಪ್ಪ ಗೌಡ ಮಜಲುಗದ್ದೆ, ಎಲಿಯ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಲಲಿತಾ ಶಿವಪ್ಪ ಮಜಲುಗದ್ದೆ, ವೆಂಕಪ್ಪ ನಾಯ್ಕ ಎಲಿಯ, ಉಮಾವತಿ ವೆಂಕಪ್ಪ ನಾಯ್ಕ ಎಲಿಯ, ನಿಶಾಂತ್ ನಾಯ್ಕ್ ಎಲಿಯ, ಜಯಲಕ್ಷ್ಮೀ ವಸಂತ ನಾಯ್ಕ ಎಲಿಯ, ಮಿಥಾಲಿ ರೈ ಮಜಲುಗದ್ದೆ, ತನೀಷ್ ರೈ ಬಾಕುಡ, ಪೂವಪ್ಪ ನಾಯ್ಕ ನೆಕ್ಕಿಲು, ಕಮಲಾ ವೆಂಕಪ್ಪ ನಾಯ್ಕ ಬಾಳಯ, ಗಿರೀಶ್ ಮೇಸ್ತ್ರಿ ಸೊರಕೆ, ಸತ್ತಾರ್ ಮಜಲುಗದ್ದೆ, ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ, ಎಲಿಯ ದೇವಳದ ಅಡುಗೆ ಭಟ್ಟರಾದ ಕೇಶವ ಭಟ್ ಮಾಡಾವುಕಟ್ಟೆ, ಉದಯ ಭಟ್ ಪೆರುವಾಜೆ, ಇತರರು ನೇಜಿ ನೆಡುವ ಕೆಲಸದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.