HomePage_Banner
HomePage_Banner

ವಿಟ್ಲದೆಲ್ಲೆಡೆ ಸಂಭ್ರಮದ ಬಕ್ರಿದ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಅಝ್ ಹಾ  (ಬಕ್ರಿದ್ )ಹಬ್ಬವನ್ನು ಸರಕಾರದ ಕೋವಿಡ್ ನಿಯಮದಂತೆ  ಸರಳ ರೀತಿಯಲ್ಲಿ ಆಚರಿಸಲಾಯಿತು. ಮಸೀದಿ ಖತೀಬು ಮಹಮ್ಮದಾಲಿ ಫೈಝಿ ಇರ್ಫಾನಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಈದ್ ಸಂದೇಶ ನೀಡಿದರು.   ಇಬ್ರಾಹಿಂ ನಬಿ ಮತ್ತು ಇಸ್ಮಾಯಿಲ್ ನಬಿಯವರ ತ್ಯಾಗ ಹಾಗೂ ಬಲಿದಾನ   ಹಾಜರಾ ಬಿಯವರ ಸಹನೆಯ ಸಂಕೇತವಾದ ಈದುಲ್ ಅಝ್ ಹಾ   ವನ್ನು ವಿಶ್ವದಲ್ಲೆಡೆ ಆಚರಿಸುವ ಈ ಸಂದರ್ಭದಲ್ಲಿ ನಾವು ಐಕ್ಯತೆ ಮತ್ತು ಸಹೋದರತ್ವ ಹಾಗೂ ಕುಟುಂಬ ಸಂಬಂಧವನ್ನು ಬೆಳೆಸುವುದು ಆಚರಣೆಯ ಪ್ರಮುಖ ಭಾಗವಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು  ಈದ್ ಆಚರಿಸಬೇಕು  ಎಂದು ಹೇಳಿದರು.

ವಿಟ್ಲ ಟೌನ್ ಮಸೀದಿಯಲ್ಲಿ ಈದುಲ್ ಅಝ್ ಹಾ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಈದ್ ಸಂದೇಶ ನೀಡಿ ಮಾತನಾಡಿ ಸಹೋದರತ್ವ ಮತ್ತು ಕುಟುಂಬ ಸಂಬಂಧವನ್ನು ಬಲಗೊಳಿಸುವುದು ಬಕ್ರೀದ್ ಆಚರಣೆಯ ಉದ್ದೇಶವಾಗಿದೆ ಎಂದರು. ಬಳಿಕ ಮುಸ್ಲಿಂ ಬಾಂಧವರು  ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.