HomePage_Banner
HomePage_Banner

ಹಿರಿಯ ಕಾಂಗ್ರೆಸ್ ಮುಖಂಡ, ಕೊಳ್ತಿಗೆ ಗ್ರಾಪಂ ಮಾಜಿ ಸದಸ್ಯ ಪಾಂಬಾರು ಸುಬ್ಬಣ್ಣ ರೈ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಂಗ್ರೆಸ್ ಕಿಸಾನ್ ಘಟಕದ ಪುತ್ತೂರು ತಾಲೂಕಿನ ಮಾಜಿ ಅಧ್ಯಕ್ಷ, ಕೊಳ್ತಿಗೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೊಳ್ತಿಗೆ ಗ್ರಾಮದ ಪಾಂಬಾರು ಸುಬ್ಬಣ್ಣ ರೈ (70ವ)ರವರು ಹೃದಯಾಘಾತದಿಂದಾಗಿ ಜು.21 ರಂದು ನಿಧನರಾದರು.

ಇವರು ಕೊಳ್ತಿಗೆ ಯುವಕ ಮಂಡಲದ ಅಧ್ಯಕ್ಷರಾಗಿ, ಕೊಳ್ತಿಗೆ ಸಿಎ ಬ್ಯಾಂಕ್‌ನ ಸದಸ್ಯರಾಗಿ, ಪಾಂಬಾರು ಸತ್ಯಪೀಠ ಇದರ ಸ್ಥಾಪಕ ಅಧ್ಯಕ್ಷರಾಗಿ,ಪೆರ್ಲಂಪಾಡಿ ಷಣ್ಮುಖದೇವ ಭಜನಾ ಮಂದಿರದ ಅಧ್ಯಕ್ಷರಾಗಿ ಧಾರ್ಮಿಕ, ಶೈಕ್ಷಣಿಕ,ಸಾಮಾಜಿಕ,ಸಹಕಾರಿ,ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಹೇಮಾವತಿ, ಪುತ್ರರಾದ ಪ್ರದೀಪ್ ಕುಮಾರ್ ರೈ ಪಾಂಬಾರು, ಪ್ರವೀಣ್ ಕುಮಾರ್ ರೈ ಪಾಂಬಾರು ಮತ್ತು ಪ್ರಶಾಂತ್ ಕುಮಾರ್ ರೈ ಪಂಬಾರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.