HomePage_Banner
HomePage_Banner

ಕುಕ್ಕಾಜೆ ಕ್ಷೇತ್ರದಲ್ಲಿ ಧರ್ಮದರ್ಶಿಯವರ ಹುಟ್ಟು ಹಬ್ಬದ ಪ್ರಯುಕ್ತ ವಸ್ತ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಧರ್ಮವಿದ್ದ ಕಡೆ ದೇವರಿರುತ್ತಾರೆ: ಶ್ರೀ ಶ್ರೀಕೃಷ್ಣ ಗುರೂಜಿ

ವಿಟ್ಲ: ಎಲ್ಲಿ ಧರ್ಮವಿದೆಯೋ ಅಲ್ಲಿ ದೇವರಿದ್ಧಾನೆ. ಅಧರ್ಮವಿದ್ದ ಕಡೆ ದೇವರಿರಲು ಸಾಧ್ಯವಿಲ್ಲ.  ಎಲ್ಲರೂ ನಮ್ಮರೆಂದು ಅರಿತು  ಪ್ರೀತಿ‌ವಿಶ್ವಾಸದಿಂದ ಬಾಳುವ ಬಾಳ್ವೆ ನಮ್ಮದಾಗಲಿ.

 ಪರಿಪೂರ್ಣವಾದ ಮನಸ್ಸಿನಿಂದ ಮಾಡಿದ ಕೆಲಸಗಳಿಗೆ ಸದಾ ದೇವರ ದಯೆಯಿದೆ ಎಂದು  ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿಯವರು ಹೇಳಿದರು.

ಅವರು ಜು.21ರಂದು  ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಸಭಾಂಗಣದಲ್ಲಿ ತನ್ನ ೪೮ನೇ ವರುಷದ ಹುಟ್ಟುಹಬ್ಬದ ಪ್ರಯುಕ್ತ ಭಕ್ತರಿಗೆ ವಸ್ತ್ರದಾನ ಮಾಡಿ‌ ಆಶೀರ್ವಚನ ನೀಡಿದರು.

ಶ್ರೀಕ್ಷೇತ್ರದಲ್ಲಿ ದಾನ ಧರ್ಮಾದಿಗಳು ನಿರಂತರವಾಗಿ ನಡೆಯುತ್ತಾ ಬಂದಿದೆ‌.ಹುಟ್ಟಿದ‌ ಮನುಷ್ಯನಿಗೆ ಸಾವು ನಿಶ್ವಿತ. ಆದರೆ ಹುಟ್ಟು ಸಾವಿನ ನಡುವಿನ ದಿನ ಮನುಷ್ಯರಿಗೆ ಅತೀ ಅಮೂಲ್ಯವಾದುದು. ಹಣ, ಅಂತಸ್ಥಿನಿಂದ ಏನನ್ನೂ ಸಾಧಿಸಲು  ಸಾಧ್ಯವಿಲ್ಲ. ನಿಷ್ಕಲ್ಮಶ ಪ್ರೀತಿಯಿಯಿಂದ ಎಲ್ಲವನ್ನು ಸಾಧಿಸಲು ಸಾಧ್ಯ. ಇನ್ನೊಬ್ಬರ ಬಗ್ಗೆ ಕೊಂಕು ಮಾತನಾಡದೆ, ಇನ್ನೊಬ್ಬ ರನ್ನು ಹೀಯಾಳಿಸದೆ ಸತ್ಯ ಧರ್ಮ ನಿಷ್ಠೆಯಿಂದ ನಡೆಯುವ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕ್ಷೇತ್ರದ ಮೊಕ್ತೇಸರರಾದ ಎಂ.ಕೆ. ಕುಕ್ಕಾಜೆ, ಅವರ ಪತ್ನಿ ಉಮಾವತಿ ಎಂ.ಕೆ. ಕುಕ್ಕಾಜೆ, ಶ್ರೀ ಶ್ರೀಕೃಷ್ಣ ಗುರೂಜಿಯವರ ಪತ್ನಿ  ಜಲಜಾಕ್ಷಿ, ಮೋನಪ್ಪ ಪರ್ನಾರ್, ಮುತ್ತಮ್ಮ, ರಮಾನಾಥ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.

ಇದೇ‌ ಸಂದರ್ಭದಲ್ಲಿ ಕ್ಷೇತ್ರದ ಮಹಿಳಾ ಸಮಿತಿ ಸದಸ್ಯರು ಗುರೂಜಿಗೆ ಫಲಪುಷ್ಪ ಸಮರ್ಪಿಸಿದರು. ಬಳಿಕ  ಆಗಮಿಸಿದ ಭಕ್ತರಿಗೆ ಗುರೂಜಿಯವರು ವಸ್ತ್ರಧಾನ ಮಾಡಿದರು.   ಕ್ಷೇತ್ರದಲ್ಲಿ ಶ್ರೀ ದೇವರಿಗೆ‌ ವಿಶೇಷ ಪೂಜೆ‌ ನಡೆಸಲಾಯಿತು. ಹರೀಶ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರವಿ ಎಸ್.ಎಂ. ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.