HomePage_Banner
HomePage_Banner

ಒಕ್ಕಲಿಗ ಸ್ವಸಹಾಯ ಟ್ರಸ್ಟಿನಿಂದ ಬೆಳ್ಯಪ್ಪ ಗೌಡರಿಗೆ ನುಡಿನಮನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ನಿಧನರಾದ ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ ಬೆಳ್ಯಪ್ಪ ಗೌಡ ಕಕ್ವೆ ಅವರಿಗೆ ಟ್ರಸ್ಟ್ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿರುವ ಟ್ರಸ್ಟ್‌ನ ಸಂಸ್ಥೆಯಲ್ಲಿ ನುಡಿನಮನ ಸಲ್ಲಿಸಲಾಯಿತು.

ಟ್ರಸ್ಟಿನ ಸ್ಥಪಕಾಧ್ಯಕ್ಷ ಎ.ವಿ.ನಾರಾಯಣ ಅವರು ಮಾತನಾಡಿ ಟ್ರಸ್ಟಿನೊಂದಿಗೆ ಹೊಂದಿದ್ದ ನಿಕಟ ಸಂಪರ್ಕ ಹಾಗೂ ಅವರು ಟ್ರಸ್ಟಿನ ಏಳಿಗೆಗಾಗಿ ಬೆಳ್ಯಪ್ಪ ಗೌಡ ಅವರು ನೀಡಿದ ಅತ್ಯಮೂಲ್ಯ ಸಲಹೆಗಳನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಿ ಒಂದು ನಿಮಿಷದ ಪ್ರಾರ್ಥನೆ ಸಲ್ಲಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಡಿ.ವಿ.ಮನೋಹರ್, ಸಲಹಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ ಮಳವೇಲು, ವೆಂಕಪ್ಪ ಗೌಡ ಚಾಕೊಟೆ, ಮನೇಜರ್ ಗಿರಿಧರ್ ಅಂಬೆಕಲ್ಲು, ಮೇಲ್ವಿಚಾರಕ ವಿಜಯಕುಮಾರ್, ಸಿಬ್ಬಂದಿಗಳಾದ ಪ್ರತಿಭಾ, ಸುಜಾತ, ನಮಿತ, ತಾರಾನಾಥ, ದೀಕ್ಷಿತ್, ಲಲಿತ ಹಾಗೂ ಉದಯ ಕುಮಾರ್ ರವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.