HomePage_Banner
HomePage_Banner

ಅಂಚೆ ಇಲಾಖೆಯಿಂದ ಆಧಾರ್ ಮೊಬೈಲ್ ಜೋಡಣೆ ಸೇವೆ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಆಧಾರ್ ಮೊಬೈಲ್ ಜೋಡಣೆಯ ಸೇವೆಯನ್ನು ಇಂಡಿಯಾ ಪೇಮೆಂಟ್ಸ್ ಬ್ಯಾಂಕ್ ಮತ್ತು UIDAI ಸಹಾಯದೊಂದಿಗೆ ಅಂಚೆ ಇಲಾಖೆಯು ಪೋಸ್ಟ್‌ಮ್ಯಾನ್ ಸಿಬಂದಿಗಳ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಹೊಸ ಯೋಜನೆಯನ್ನು ರೂಪಿಸಿದೆ. ದ.ಕ.ಜಿಲ್ಲೆಯಲ್ಲಿ ಈ ಯೋಜನೆಯನ್ನು ಜು.15ರಿಂದ ಪ್ರಾರಂಭಿಸಲಾಗಿದೆ.

ಅಂಚೆ ಇಲಾಖೆಯ ಸಿಬ್ಬಂದಿಯ ಬಳಿ ಇರುವ ಮೊಬೈಲ್ ಮೂಲಕ ಆಧಾರ್ ಸೇವೆಯನ್ನು ನೀಡಲು ಆರಂಭಿಸಲಾಗಿದ್ದು ಆಧಾರ್‌ಗೆ ಮೊಬೈಲ್ ನಂಬರ್ ಜೋಡಿಸು ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸೇವೆಯ ಶುಲ್ಕ ಕೇವಲ ರೂ.೫೦. ಆಗಿರುತ್ತದೆ. ಮುಂದಿನ ದಿನಗಳಲ್ಲಿ ೫ ವರ್ಷದೊಳಗಿನ ಮಕ್ಕಳ ಹೊಸ ಆಧಾರ್ ನೋಂದಣೆ ಕೂಡ ಪ್ರಾರಂಭಿಸಲಾಗುತ್ತದೆ. ಗ್ರಾಹಕರು ಅಂಚೆ ಬಟಾವಡೆಗೆ ಬರುವ ನೌಕರರನ್ನು ಅಥವಾ ಹತ್ತಿರದ ಕಛೇರಿಗೆ ಸಂಪರ್ಕಿಸಿ ಸೇವೆಯನ್ನು ಪಡೆಯಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.