HomePage_Banner
HomePage_Banner

ದ್ವಿತೀಯ ಪಿಯುಸಿ: ರಾಮಕುಂಜ ಪ.ಪೂ.ಕಾಲೇಜಿಗೆ 49 ಡಿಸ್ಟಿಂಕ್ಷನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಒಟ್ಟು ೪೯ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ೧೮೩ ಮಂದಿ ಪ್ರಥಮ ಶ್ರೇಣಿ ಹಾಗೂ ೪೧ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ೨೦೨೦-೨೧ನೇ ಸಾಲಿನಲ್ಲಿ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು ೨೭೩ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರು.

 

ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದಲ್ಲಿನ ೭೪ ವಿದ್ಯಾರ್ಥಿಗಳ ಪೈಕಿ ೨೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೪೮ ವಿದ್ಯಾರ್ಥಿಗಳು ಪ್ರಥಮ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಶ್ರೇಯಾ ಕೆ.ಆರ್. ೫೮೩, ಸ್ಮಿತಾ ಎಸ್ ೫೮೧, ಅಥಿತ್ ಶೆಟ್ಟಿ ಕೆ ೫೭೬, ಸುಸ್ಮಿತಾ ಟಿ ೫೭೧, ಪ್ರಭವ್ ಗೊಗಟೆ ೫೭೧, ಪ್ರಥ್ವಿ ಕೆ.ವಿ. ೫೬೫, ಭರತ್ ಪಿ ೫೬೧, ಅಭಿಷೇಕ್ ವಿ ೫೬೧, ದಿವ್ಯಶ್ರೀ ೫೬೦, ಸೌಜನ್ಯ ರಾವ್ ೫೫೫, ಸನತ್ ಎಸ್ ಶೆಟ್ಟಿ ೫೫೦, ರಕ್ಷಿತಾ ಎನ್ ೫೪೯, ಜೇಷ್ಮಾ ಎಂ.ಪಿ.೫೪೮, ಶ್ರಥಾ ೫೪೭, ಅನ್ವಿತ ಎ ೫೪೪, ಶ್ರೇಯಾ ಜಿ.ಎಸ್.೫೩೯, ಚರಣ್ಯ ೫೩೦, ಸುಮಂತ್ ಕೆ ೫೨೮, ಮನೀಶ್ ಬಿ ೫೨೫, ಸೌಜನ್ಯ ೫೨೪, ಶ್ರವಣ್‌ದೀಪ್ ೫೨೧, ರಚನ್ ಕೆ ೫೧೯, ವೀಕ್ಷನ್ ಕೆ ೫೧೮, ಶ್ರುತಿ ೫೧೬, ದರ್ಶನ್ ರೈ ೫೧೪ ಅಂಕ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿನ ೧೬೫ ವಿದ್ಯಾರ್ಥಿಗಳ ಪೈಕಿ ೨೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ೧೧೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ೨೬ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರಾಮ್‌ಶರಣ್ ಕೆ ೫೯೫, ಅನಿರುದ್ಧ ಇ ೫೯೧, ಶಿವಪ್ರಸಾದ್ ಕೆ ೫೮೬, ಶ್ರದ್ಧಾ ಯು.ಎಸ್.೫೮೫, ಚೇತನಾ ಬಿ ೫೭೩, ಸ್ಪೂರ್ತಿ ಎಸ್ ೫೭೧, ಅಲ್ಫೋನ್ಸಾ ಪ್ರಿಯಾ ೫೬೭, ತೇಜಸ್ವಿರಾಜ್ ೫೫೭, ಭರತ್ ಕುಮಾರ್ ಕೆ.ಆರ್. ೫೫೨, ಸಮೀಕ್ಷಾ ೫೫೦, ಕೃಷ್ಣಪ್ರಸಾದ್ ಪಿ ೫೫೦, ಚೈತ್ರಾ ಎಸ್ ೫೪೯, ಸುಸ್ಮಿತಾ ಕೆ ೫೪೭, ಗೌತಮ್ ಬಿ ೫೪೪, ಶ್ರೇಯಾ ಕೆ.ಎಸ್. ೫೩೯, ಹರೀಶ್ ಪಿ ಶೆಟ್ಟಿ ೫೩೭, ಶ್ವೇತಾ ೫೩೩, ಪ್ರಮೋದ್ ಟಿ ೫೨೪, ಸ್ವಾತಿ ಡಿ.ಪಿ. ೫೨೩, ಸುಮಂತ್ ೫೧೯, ಅನುಶ್ರೀ ಕೆ ೫೧೭, ದೀಕ್ಷಾ ಕೆ ೫೧೨ ಹಾಗೂ ರಂಜನ್ ಬಿ ೫೧೦ ಅಂಕ ಪಡೆದುಕೊಂಡಿದ್ದಾರೆ.

ಕಲಾ ವಿಭಾಗ:
ಕಲಾ ವಿಭಾಗದಲ್ಲಿನ ೩೪ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ೧೯ ವಿದ್ಯಾರ್ಥಿಗಳು ಪ್ರಥಮ ಹಾಗೂ ೧೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅಪೂರ್ವ ಲಕ್ಷ್ಮೀ ಪಿ ೫೨೬ ಅಂಕ ಪಡೆದುಕೊಂಡಿದ್ದಾರೆ. ಅಮೀರಾ ಬಾನು ಎನ್ ೫೦೫, ಫಾತಿಮತ್ ಸಫ್ರೀನಾ ವಿ.ಕೆ. ೫೦೦ ಅಂಕ ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.