HomePage_Banner
HomePage_Banner

ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಾಗಿ ಸತ್ಯಜಿತ್‌ ಉಪಾಧ್ಯಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆಡಳಿತಾಧಿಕಾರಿಯಾಗಿ ಗಣೇಶ್ ಪ್ರಸಾದ್ ಹಾಗೂ ಪಿಆರ್‌ಒ ಆಗಿ ರಾಕೇಶ್‌ ಕಮ್ಮಜೆ ಆಯ್ಕೆ

ಪುತ್ತೂರು :ಇಲ್ಲಿನ ನಟ್ಟೋಜ ಫೌಂಡೇಶನ್‌ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನಪ್ರಾಂಶುಪಾಲರಾಗಿ ಎಂ.ಸತ್ಯಜಿತ್‌ಉಪಾಧ್ಯಾಯ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಗಣೇಶ್ ಪ್ರಸಾದ್ ಎ ಮತ್ತು ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರಾಕೇಶ್‌ಕುಮಾರ್‌ಕಮ್ಮಜೆ ನಿಯುಕ್ತಿಗೊಂಡಿದ್ದಾರೆ. ಈ ಸಂಬಂಧವಾಗಿ ನಟ್ಟೋಜ ಫೌಂಡೇಶನ್‌ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಪ್ರಕಟಣೆ ನೀಡಿದ್ದಾರೆ.

ಸತ್ಯಜಿತ್‌ಉಪಾಧ್ಯಾಯ:ಸುಮಾರು ಹತ್ತು ವರ್ಷಗಳ ಬೋಧನಾನುಭವ ಹೊಂದಿರುವಇವರು ಕಳೆದ ಏಳು ವರ್ಷಗಳಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಭೌತಶಾಸ್ತ್ರಉಪನ್ಯಾಸಕರಾಗಿ ಹಾಗೂ ೨೦೧೬ರಿಂದ ಸಂಸ್ಥೆಯಉಪಪ್ರಾಂಶುಪಾಲರಾಗಿಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೂಲತಃ ಸುಳ್ಯದ ನೆಲ್ಲೂರುಕೆಮ್ರಾಜೆಗ್ರಾಮದಅಡಿಕೆಹಿತ್ತಿಲಿನವರಾದಇವರು ೨೦೧೨ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಅಧ್ಯಾಪನ, ಪ್ರವಾಸ, ಕ್ವಿಝ್‌ಆಯೋಜನೆಯೇ ಮೊದಲಾದ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಅಂತೆಯೇ ವಿದ್ಯಾರ್ಥಿಗಳನ್ನು ಜೆಇಇ, ನೀಟ್, ಸಿಇಟಿ ಮೊದಲಾದ ಪರೀಕ್ಷೆಗಳಿಗೆ ಸಿದ್ಧಪಡಿಸುವುದರಲ್ಲಿಯೂ ಇವರು ಮೂಂಚೂಣಿಯಉಪನ್ಯಾಸಕರಾಗಿ ಗುರುತಿಸಿಕೊಂಡಿದ್ದಾರೆ.ಅಡಿಕೆಹಿತ್ತಿಲಿನಲ್ಲಿಕೃಷಿಕರಾಗಿರುವ ಎಂ.ಶಂಕರನಾರಾಯಣಉಪಾಧ್ಯಾಯ ಹಾಗೂ ಜಯಲಕ್ಷ್ಮೀಎಸ್‌ಉಪಾಧ್ಯಾಯದಂಪತಿಇವರ ಹೆತ್ತವರು.

ಗಣೇಶ್ ಪ್ರಸಾದ್‌ಎ : ಅಂಬಿಕಾ ಪದವಿ ಮಹಾವಿದ್ಯಾಲಯದಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವಇವರು ಹದಿಮೂರು ವರ್ಷಗಳ ಬೋಧನಾನುಭವ ಹೊಂದಿದವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ೨೦೦೮ರಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.ಕಳೆದ ಆರು ತಿಂಗಳುಗಳಿಂದ ಅಂಬಿಕಾ ಪದವಿ ಕಾಲೇಜಿನಲ್ಲಿಕಾರ್ಯನಿರ್ವಹಿಸುತ್ತಿರುವಇವರು ಆಡಳಿತ ನಿರ್ವಹಣೆಯಲ್ಲೂಅಪಾರಅನುಭವ ಹೊಂದಿದ್ದಾರೆ.ಪದವಿ ಕಾಲೇಜಿನ ಅಗತ್ಯತೆಗಳಾದ ನ್ಯಾಕ್‌ಗೆ ಸಂಬಂಧಿಸಿದ ತಯಾರಿ, ವಿಶ್ವವಿದ್ಯಾನಿಲಯ ಸಂಬಂಧಿ ಕಾರ್ಯಗಳು ಮಾತ್ರವಲ್ಲದೆಕಛೇರಿ ನಿರ್ವಹಣೆ ಮೊದಲಾದ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ.

ಅತ್ಯುತ್ತಮಇಂಗ್ಲಿಷ್‌ಉಪನ್ಯಾಸಕರಾಗಿ ಗುರುತಿಸಿಕೊಂಡಿರುವ ಇವರು ಅನೇಕ ಮಂದಿ ವಿದ್ಯಾರ್ಥಿಗಳು ಕಷ್ಟವೆಂದುಕೊಳ್ಳುವ ಇಂಗ್ಲಿಷ್ ಪಠ್ಯವನ್ನು ಸುಲಭವೆನಿಸುವಂತೆ ತೋರಿಸಿಕೊಟ್ಟಿದ್ದಾರೆ.ಪ್ರಯೋಗಶೀಲ ಪಠ್ಯ, ಸೃಜನಶೀಲ ಚಟುವಟಿಕೆಗಳಲ್ಲಿ ತನ್ನನ್ನುತಾನು ತೊಡಗಿಸಿಕೊಂಡಿದ್ದಾರೆ.ಪತ್ರಿಕೋದ್ಯಮದಲ್ಲೂ ವಿಶೇಷ ಆಸಕ್ತಿ ಹೊಂದಿರುವಇವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ೨೦೨೦ರಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.ಪ್ರಸ್ತುತ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದಅಡಿಯಲ್ಲಿಇಂಗ್ಲಿಷ್ ವಿಷಯದಕುರಿತಾಗಿ ಪಿಎಚ್‌ಡಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ.ಇವರುಮೂಲತಃ ಕೇರಳದ ಮಂಜೇಶ್ವರ ಸಮೀಪದ ಕೋಳ್ಯೂರಿನ ಎಡಕೋಡ್ಲು ಸದಾಶಿವ ಭಟ್ ಹಾಗೂ ಸೀತಾಲಕ್ಷ್ಮಿ ದಂಪತಿಯ ಪ್ರಥಮ ಪುತ್ರ.

ರಾಕೇಶ್‌ಕುಮಾರ್‌ಕಮ್ಮಜೆ : ಅಂಬಿಕಾ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವಇವರು ಹನ್ನೆರಡು ವರ್ಷಗಳ ಬೋಧನಾನುಭವ ಹೊಂದಿದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ೨೦೦೯ರಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಮೊದಲ ರ್‍ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.ಕಳೆದ ಎಂಟು ತಿಂಗಳುಗಳಿಂದ ಅಂಬಿಕಾ ಪದವಿ ಕಾಲೇಜಿನಲ್ಲಿಕಾರ್ಯನಿರ್ವಹಿಸುತ್ತಿರುವಇವರು ಈ ಹಿಂದೆ ಪದವಿ ಹಾಗೂ ಸ್ನಾತಕೋತ್ತರ ಪದವಿಗಳೆರಡನ್ನೂ ಮುಖ್ಯಸ್ಥನಾಗಿ ನಿರ್ವಹಿಸಿದ ಅನುಭವ ಹೊಂದಿದವರು.ಅನೇಕ ಮಂದಿ ಉತ್ಕಷ್ಟ ಪತ್ರಕರ್ತರನ್ನು ರೂಪಿಸಿ ಮಾಧ್ಯಮವಲಯಕ್ಕೆ ನೀಡಿದಕೀರ್ತಿಇವರದ್ದು.

ಸೃಜನಶೀಲ ಯೋಚನೆ, ಕಾರ್ಯಕ್ರಮಗಳ ಮೂಲಕ ಪುತ್ತೂರಿನಲ್ಲಿಪತ್ರಿಕೋದ್ಯಮ ಶಿಕ್ಷಣವನ್ನು ಬೆಳೆಸಿದ ಅನುಭವ ಹೊಂದಿರುವಇವರುಉಜಿರೆಯಎಸ್‌ಡಿಎಂಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿರಾಜ್ಯಮಟ್ಟದ ಪತ್ರಿಕೆಯೊಂದಕ್ಕೆಉಜಿರೆ- ಧರ್ಮಸ್ಥಳ ವ್ಯಾಪ್ತಿಯಲ್ಲಿ ವರದಿಗಾರನಾಗಿಯೂಕಾರ್ಯನಿರ್ವಹಿಸಿದ್ದಾರೆ.ಬರವಣಿಗೆ, ಭಾಷಣ, ಯಕ್ಷಗಾನ, ಕೃಷಿ, ಹಾಸ್ಯ ಮಾತು ಮೊದಲಾದ ಹಲವು ವಿಷಯಗಳಲ್ಲಿ ತನ್ನನ್ನುತಾನು ತೊಡಗಿಸಿಕೊಂಡಿದ್ದಾರೆ.ಕನ್ನಡ ಸಾಹಿತ್ಯದಕುರಿತಾಗಿಅಪಾರ ಆಸಕ್ತಿ ಹೊಂದಿದ್ದು, ೨೦೨೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕೇಂದ್ರದಿಂದಕನ್ನಡ ಎಂ.ಎ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಇವರು ಮೂಲತಃ ಬಂಟ್ವಾಳ ತಾಲೂಕಿನಕನ್ಯಾನಗ್ರಾಮದ ದಿ.ಚಂದ್ರಶೇಖರ ಭಟ್ ಹಾಗೂ ಜ್ಯೋತಿಲಕ್ಷ್ಮೀದಂಪತಿಯ ದ್ವಿತೀಯ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.