HomePage_Banner
HomePage_Banner

ಶಿರಾಡಿ: ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಟಾಸ್ಕ್‌ಫೋರ್ಸ್ ಸಹಕಾರದೊಂದಿಗೆ ಕೋವಿಡ್ ಸಂದರ್ಭದಲ್ಲಿ ನಡೆಯುವ ನೊಂದ ಜನರ ಸೇವೆಯು ಶ್ಲಾಘನೀಯ ಎಂದು ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್‌ರವರು ಹೇಳಿದರು.

ಅವರು ಡಿ.ಕೆ.ಆರ್.ಡಿ.ಎಸ್. ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿವಿಧ ಸಂಘಟನೆಗಳ ಆಶ್ರಯದೊಂದಿಗೆ ಕ್ಯಾಥೋಲಿಕ್ ನಿಯರ್ ಈಸ್ಟ್ ವೆಲ್ಫೇರ್ ಅಸೋಸಿಯೇಷನ್, ಸ್ನೇಹ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಆರ್ಥಿಕ ನೆರವಿನೊಂದಿಗೆ ಶಿರಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೈಂಟ್ ಥೋಮಸ್ ಚರ್ಚ್ ಉದನೆ, ಸೈಂಟ್ ಸೆಬಾಸ್ಟಿಯನ್ ಚರ್ಚ್ ಶಿರಾಡಿ, ಪೆರುಮಜಲು ಅಂಗನವಾಡಿ, ಸೈಂಟ್ ಜೋಸೆಫ್ ಚರ್ಚ್ ಅಡ್ಡಹೊಳೆಯಲ್ಲಿ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಉದನೆ ವಲಯದ ಟಾಸ್ಕ್ ಫೋರ್ಸ್ ವಲಯದ ಸಂಯೋಜಕ ಫಾ. ತೋಮಸ್ ಪನಚಿಕಲ್ ಇವರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಿಸಲಾಯಿತು. ಶಿರಾಡಿ ಗ್ರಾಮದ ೧೨೫ ಬಡ ಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ನೀಡಲಾಯಿತು.

ಶಿರಾಡಿ ಗ್ರಾ.ಪಂ. ಉಪಾಧ್ಯಕ್ಷ ಕಾರ್ತಿಕೇಯನ್, ಪಿಡಿಒ ಪಿ.ವೆಂಕಟೇಶ್, ಪಂಚಾಯತ್ ಸದಸ್ಯರು, ಶಿರಾಡಿ ಗ್ರಾಮ ಪಂಚಾಯತ್ ಮಟ್ಟದ ಟಾಸ್ಕ್ ಫೋರ್ಸ್ ಮುಖಂಡರಾದ ಫಾ.ಹನಿ ಜೇಕಬ್, ಶಿರಾಡಿ ಧರ್ಮ ಕೇಂದ್ರದ ಧರ್ಮಗುರುಗಳಾದ ಫಾ.ರೋಬಿನ್ ಕೆಳಪರಂಬಿಲ್, ಫಾ.ಜೋಸೆಫ್ ಪಾಂಬೆಕಲ್, ಫಾ.ಜೋಸೆಫ್ ಚೀರನ್, ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಸೆಬಾಸ್ಟಿನ್ ಕೆ.ಕೆ, ಬ್ರ. ಇಮ್ಯಾನುವೆಲ್ ಉಪಸ್ಥಿತರಿದ್ದರು. ಚರ್ಚ್ ಆಡಳಿತ ಮಂಡಳಿ ಸದಸ್ಯರು ಹಾಗೂ ಎಸ್.ಎಂ.ವೈ.ಎಂ ಸದಸ್ಯರು ಸಹಕರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ. ಪ್ರಾಸ್ತಾವಿಸಿ, ತೋಮಸ್ ಪನಚಿಕಲ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.