ಬೆಳ್ತಂಗಡಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣ: ಬೈಕ್ ಸವಾರ ಸುಚಿನ್ ಹೆಗ್ಡೆ ಸಾವಿಗೆ ಕಾರಣರಾದ ಆರೋಪಿ ಕಡಬದ ಶ್ರೀನಾಥ್ ಗೆ ಜೈಲು ಶಿಕ್ಷೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ನಾರಾವಿ-ಗುರುವಾಯನಕೆರೆ ಸಂಪರ್ಕ ರಸ್ತೆಯ ಆಲಡ್ಕದಲ್ಲಿ 2018ನೇ ಮಾರ್ಚ್ 19 ರಂದು ಕಾರು ಮತ್ತು ಬೈಕಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸುಚಿನ್ ಹೆಗ್ಡೆ ಎಂಬವರು ಮೃತಪಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾರು ಚಾಲಕ ಶ್ರೀನಾಥ್ ಬಿ.ರವರಿಗೆ ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನೆಯ ವಿವರ:
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಶ್ರೀನಾಥ ಬಿ.ರವರು ಚಲಾಯಿಸುತ್ತಿದ್ದ ಕಾರು ತೆಂಕಕಾರಂದೂರು ಗ್ರಾಮದ ಅಲಡ್ಕ ಎಂಬಲ್ಲಿ ನಾರಾವಿ ಕಡೆಯಿಂದ ಬರುತ್ತಿದ್ದ ಸುಚಿನ್ ಹೆಗ್ಡೆ(೧೮.ವ) ಮತ್ತು ಸಹ ಸವಾರ ಜಿತೇಶ್ ಕುಮಾರ್ ಜೈನ್‌ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಿಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದು ಸುಚಿನ್ ಹೆಗ್ಡೆಯವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದರು.

ಅಪಘಾತದ ಬಗ್ಗೆ ಬೆಳ್ತಂಗಡಿ ಆರಕ್ಷಕ ಠಾಣೆಯ ಆಗಿನ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.ರವರು ಕೇಸು ದಾಖಲಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಮೊಕದಮ್ಮೆಯ ವಾದ ಪ್ರತಿವಾದಗಳನ್ನು ಆಲಿಸಿದ ಬೆಳ್ತಂಗಡಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶ ಸತೀಶ ಕೆ.ಜಿ.ಯವರು ಆರೋಪಿ ಶ್ರೀನಾಥ ಬಿ.ರವರ ಅತೀವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಲೇ ಸುಚಿನ್ ಹೆಗ್ಡೆ ಮೃತಪಟ್ಟಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಆರೋಪಿ ಶ್ರೀನಾಥನನ್ನು ದೋಷಿಯೆಂದು ಘೋಷಿಸಿದ್ದಾರೆ.‌ ಅಪರಾಧಿ ಶ್ರೀನಾಥ್ ಗೆ ಐಪಿಸಿ ಕಲಂ 279 ಹಾಗೂ 337ರಡಿ ಅಪರಾಧಕ್ಕಾಗಿ ಪ್ರತ್ಯೇಕ ಪ್ರತ್ಯೇಕವಾಗಿ 1 ತಿಂಗಳು ಜೈಲು ಶಿಕ್ಷೆ ಮತ್ತು 1,000/- ದಂಡ ವಿಧಿಸಿದ್ದಾರೆ.

ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಜೈಲು ಶಿಕ್ಷೆ ಮತ್ತು ಐಪಿಸಿ ಕಲಂ 304(ಎ)ರಡಿಯ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ ೧,೦೦೦/-ದಂಡ, ತೆರಲು ತಪ್ಪಿದ್ದಲ್ಲಿ 1 ತಿಂಗಳ ಜೈಲು ಶಿಕ್ಷೆ ಹಾಗೂ ಸಿಎಂವಿ ರೂಲ್ಸ್ 115 ಜೊತೆಗೆ 190(೨) ಮೋಟಾರು ವಾಹನ ಕಾಯ್ದೆಯಡಿಯ ಅಪರಾಧಕ್ಕಾಗಿ 1,000/- ರೂ ದಂಡ ವಿಧಿಸಲಾಗಿದ್ದು ದಂ.ಪ್ರ.ಸಂ. ಕಲಂ 357(ಎ) ರಡಿಯಲ್ಲಿ ಮೃತನ ವಾರೀಸುದಾರಿಗೆ 50,000/- ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ಬೆಳ್ತಂಗಡಿಯ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ವಾದ ಮಂಡಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.