ಕಡಬ: ಕಳಾರದಲ್ಲಿ ದ್ವಿಚಕ್ರ ವಾಹನ ಅಪಘಾತ: ಠಾಣೆಯಲ್ಲಿ ಕೇಸು ದಾಖಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ಸಮೀಪದ ಕಳಾರದಲ್ಲಿ ಜುಲೈ21ರಂದು ರಸ್ತೆ ಅಪಘಾತಕ್ಕೆ ಕಾರಣವಾದ ಆಟೋ ರಿಕ್ಷಾ ಚಾಲಕನ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ಅನಿಲ್ ವರ್ಗೀಸ್ ಎಂಬವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಿಲ್ ಅವರು ಕಡಬದಿಂದ ತನ್ನ ಮನೆಯತ್ತ ತೆರಳುತ್ತಿರುವ ಸಂದರ್ಭ ಯಾವುದೇ ಸೂಚನೆ ನೀಡದೆ ಆಟೋ ಚಾಲಕ ತನ್ನ ವಾಹನ ತಿರುಗಿಸಿದ್ದು ಈ ವೇಳೆ ಹಿಂಬದಿಯಲ್ಲಿದ್ದ ಸ್ಕೂಟಿ ನಿಯಂತ್ರಣ ಕಳೆದುಕೊಂಡು ಆಟೋ ರಿಕ್ಷಾ ಕ್ಕೆ ಡಿಕ್ಕಿ ಹೊಡೆದು ರಸ್ತೆಯಂಚಿಗೆ ಪಲ್ಟಿಯಾಗಿರುವುದನ್ನು ಗಮನಿಸಿದ್ದಾರೆ.

ಅನಿಲ್ ವರ್ಗೀಸ್ ಅವರು ಕೂಡಲೇ ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟಿ ಸವಾರನನ್ನು ಎತ್ತಿ ಉಪಚರಿಸಿದ್ದು ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ಪ್ರಕಾಶ್ ಕೆ.ವೈ ಎಂದು ತಿಳಿದು ಬಂದಿದೆ. ದೇಹಕ್ಕೆ ಗಾಯದ ವಾದ ಕಾರಣ ಪರಿಚಯಸ್ಥರ ನೆರವಿನೊಂದಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರುಗೆ ಕೊಂಡೊಯ್ಯಲಾಗಿದೆ.

ಅಪಘಾತಕ್ಕೆ ಕಾರಣನಾದ ಆಟೋ ರಿಕ್ಷಾ ಚಾಲಕ ಸಂತೋಷ್ ಎಂದು ತಿಳಿದು ಬಂದಿದ್ದು. ಈ ಬಗ್ಗೆ ಕಡಬ ಠಾಣಾ ಅ.ಕ್ರ 58/2021 . ಕಲಂ 279 337. ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.