ಕುಂಬ್ರದಲ್ಲಿ ಹೆಚ್ಚಿದ ಎಟಿಎಂ ಕೇಂದ್ರದ ಬೇಡಿಕೆ | ಈಡೇರಿಸುವಂತೆ ಗ್ರಾಮಸ್ಥರ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ- ಮೈಸೂರು ರಾ. ಹೆದ್ದಾರಿಯಲ್ಲಿ ಪುತ್ತೂರು ದಾಟಿದರೆ ಬಳಿಕ ಸಿಗುವ ಎರಡನೇ ಗ್ರಾಮೀಣ ಪಟ್ಟಣ ಕೇಂದ್ರ ಒಳಮೊಗ್ರು ಗ್ರಾಮದ ಕುಂಬ್ರ. ಕುಂಬ್ರ ಕೆದಂಬಾಡಿ ಮತ್ತು ಒಳಮೊಗ್ರು ಗ್ರಾಮದ ಪ್ರಮುಖ ವ್ಯವಹಾರ ಕೇಂದ್ರವೂ ಆಗಿದೆ. ಕುಂಬ್ರವನ್ನು ಕೇಂದ್ರೀಕರಿಸಿ ಬಹುತೇಕ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಗ್ರಾಮಪಂಚಾಯತ್ ಕೇಂದ್ರ, ಸಹಕಾರಿ ಸಂಘಗಳು, ಬ್ಯಾಂಕ್ ಸೇರಿದಂತೆ ಬಹುತೇಕ ಸಾರ್ವಜನಿಕ ಸೇವಾ ಕೇಂದ್ರಗಳಿವೆ. ಸುತ್ತಮುತ್ತಲ ಗ್ರಾಮದವರು ಕುಂಬ್ರದಲ್ಲಿಯೇ ತಮ್ಮ ವ್ಯವಹಾರವನ್ನು ಮಾಡಿ ತೆರಳುವವರೂ ಇದ್ದಾರೆ. ಎಲ್ಲವೂ ಇರುವ ಕುಂಬ್ರ ಪೇಟೆಗೆ ಎಟಿಎಂ ಕೇಂದ್ರದ ಕೊರತೆ ಇದೆ.

ಕುಂಬ್ರದಲ್ಲಿ ಎಟಿಎಂ ಇಲ್ಲ ಅಂದ್ರೆ ತಪ್ಪಾಗ್ತದೆ. ಇರುವ ಒಂದು ಎಟಿಎಂ ಕೇಂದ್ರ ಜನರ ಸೇವೆಗೆ ಸದಾ ಲಭ್ಯವಿಲ್ಲ. ವಾರದ ಬಹುತೇಕ ದಿನ ಈ ಎಟಿಎಂ ನೆಟ್ ವರ್ಕ್ ಸಂಪರ್ಕ ಕಳೆದುಕೊಳ್ಳುತ್ತದೆ. ನೆಟ್ ವರ್ಕ್ ಇರುವ ದಿನ ಎಟಿಎಂ ನಲ್ಲಿ ಹಣ ಇರುವುದಿಲ್ಲ. ಇದು ಗ್ರಾಹಕರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.

ರಾತ್ರಿ ಬಂದ್
ಕುಂಬ್ರದಲ್ಲಿರುವ ಬರೋಡಾ ಬ್ಯಾಂಕಿನ ಎಟಿಎಂ ರಾತ್ರಿ ಹತ್ತು ಗಂಟೆಯಾಗುತ್ತಲೇ ಬೀಗ ಹಾಕಲಾಗುತ್ತದೆ. ಮಾರನೇ ದಿನ ೮ ಗಂಟೆಗೆ ಮತ್ತೆ ಬಾಗಿಲು ತೆರೆಯುತ್ತದೆ. ಎಟಿಎಂ ಮೂಲಕ ವ್ಯವಹಾರ ಮಾಡುವ ನೂರಾರು ಗ್ರಾಹಕರು ಇಲ್ಲಿಗೆ ಬರುತ್ತಾರೆ ಆದರೆ ಎಟಿಎಂ ಕೇಂದ್ರದ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಪ್ರತೀ ದಿನವೂ ಜನ ಹಿಡಿ ಶಾಪ ಹಾಕುತ್ತಲೇ ಎಟಿಎಂನಿಂದ ತೆರಳುವ ದೃಶ್ಯ ಮಾಮೂಲಿಯಾಗುತ್ತಿದೆ.

ಹೊಸ ಎಟಿಎಂ ಕೇಂದ್ರ ತೆರೆಯಬೇಕು
ಕುಂಬ್ರದಲ್ಲಿ ಹೊಸ ಎಟಿಎಂ ಕೇಂದ್ರವನ್ನು ಆರಂಭಿಸಬೇಕು ಎಂಬುದು ಇಲ್ಲಿನ ಗ್ರಾಹಕರ ಬಹುಕಾಲದ ಬೇಡಿಕೆಯಾಗಿದೆ. ದಿನದ ೨೪ ಗಂಟೆಯೂ ಚಾಲ್ತಿಯಲ್ಲಿರುವ ಮತ್ತು ವಾರದಲ್ಲಿ ಗರಿಷ್ಠ ದಿನ ಹಣ ಡ್ರಾ ಮಾಡಲು ಅಥವಾ ಹಣ ಇರುವ ಎಟಿಎಂ ಕೇಂದ್ರ ಆರಂಭವಾಗಬೇಕಿದೆ. ಬೆಳೆಯುತ್ತಿರುವ ಕುಂಬ್ರದಲ್ಲಿ ದಿನದಿಂದ ದಿನಕ್ಕೆ ವ್ಯವಹಾರದ ಜೊತೆಗೆ ಜನ ಸಂಖ್ಯೆಯೂ ಅಧಿಕವಾಗುತ್ತಲೇ ಇದೆ. ಹೈವೇ ಬದಿಯಲ್ಲಿರುವ ಕಾರಣ ದೂರದ ಪ್ರಯಾಣಿಕರು ಇಲ್ಲಿನ ಎಟಿಎಂ ಬಳಸುವ ಕಾರಣ ಬೇಡಿಕೆ ಕೂಗು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಬೆಳೆಯುತ್ತಿರುವ ಕುಂಬ್ರಕ್ಕೆ ವ್ಯವಸ್ಥಿತ ಎಟಿಎಂ ಕೇಂದ್ರದ ಅಗತ್ಯವಿದೆ. ಗ್ರಾಮೀಣ ಭಾಗದ ಜನರು ಹಣ ಡ್ರಾ ಮಾಡಬೇಕಾದರೆ ಪುತ್ತೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಎಟಿಎಂ ಅಂದ್ರೆ ಅದು ೨೪ ಗಂಟೆಯೂ ಗ್ರಹಕರಿಗೆ ಸೇವೆ ನೀಡುವಂತಾಗಬೇಕು.
ಸವಾದ್ ಬದ್ರಿಯಾ ನಗರ, ಇಂಜಿನಿಯರ್

ಇದು ಬಹಳ ದಿನಗಳ ಬೇಡಿಕೆಯಾಗಿದೆ. ಕುಂಬ್ರ ಪೇಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಮತ್ತು ಗ್ರಾಹಕರಿಗೆ ಸದಾ ಸೇವೆ ನೀಡುವ ಬ್ಯಾಂಕ್‌ನವರ ಎಟಿಎಂ ಕೇಂದ್ರ ಆರಂಭಿಸಬೇಕು. ಇದು ಗ್ರಾಮೀಣ ಜನರಿಗೆ ತುಂಬಾ ಪ್ರಯೋಜನವೂ ಆಗಲಿದೆ.
ಅಶೋಕ್ ಬೊಳ್ಳಾಡಿ, ಉದ್ಯಮಿಗಳು , ಕುಂಬ್ರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.