ನಮ್ಮ ಭಾಷಾ ಶುದ್ಧಿಗೆ ಪಂಡಿತ ಪರಂಪರೆಯ ಕೊಡುಗೆ ಅನನ್ಯ – ಡಾ. ಪಾದೇಕಲ್ಲು ವಿಷ್ಣು ಭಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಜನರ ಕನ್ನಡ ಮಾತು ಮತ್ತು ಬರಹಗಳು ಹೆಚ್ಚು ಸ್ಪಷ್ಟವಾಗಿರುವುದರ ಹಿಂದೆ ಇಲ್ಲಿ ಶಾಲಾ ಹಂತದಲ್ಲಿ ಕನ್ನಡವನ್ನು ಬೋಧಿಸುತ್ತಿದ್ದ ಕನ್ನಡ ಪಂಡಿತರ ಕೊಡುಗೆ ದೊಡ್ಡದು ಎಂದು ಹಿರಿಯ ವಿದ್ವಾಂಸರೂ ವಿಶ್ರಾಂತ ಪ್ರಾಂಶುಪಾಲ  ಉಡುಪಿಯ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯಪೂರ್ವದಲ್ಲೇ ನೀರ್ಚಾಲಿನಂತಹ ಪುಟ್ಟ ಗ್ರಾಮದ ಕನ್ನಡ ಶಾಲೆಯಲ್ಲಿ ಮದ್ರಾಸ್ ಸರ್ಕಾರದ ಕನ್ನಡ ವಿದ್ವಾನ್ ಪದವಿ ಪಡೆಯುವ ಅವಕಾಶವಿದ್ದು ಹಿರಿಯ ತಲೆಮಾರಿನ ಅನೇಕ ಕನ್ನಡ ಪಂಡಿತರು ಅಲ್ಲಿ ಸೃಷ್ಟಿಯಾಗಿದ್ದರು. ಅವರು ಮುಂದೆ ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ ಮುಂತಾದ ಮದ್ರಾಸ್ ಪ್ರೆಸಿಡೆನ್ಸಿ ಪ್ರದೇಶದ ಪೌಢಶಾಲೆಗಳಲ್ಲಿ ಕನ್ನಡವನ್ನು ಬೋಧಿಸುವಂತಾದರು. ಅಂತಹವರಿಂದ ನಮಗೆ ಶುದ್ಧ ಕನ್ನಡದ ಪರಿಜ್ಞಾನ ಬೆಳೆಯಿತು ಎಂದು ಅವರು ವಿವರಿಸಿದರು. ಅವರು ಬೆಟ್ಟಂಪಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಧರ್ಬೆ ಶಂಕರ ಭಟ್ಟ ಸಂಸ್ಮರಣಗ್ರಂಥ ದೇವಮಣಿಯನ್ನು ಅನಾವರಣಗೊಳಿಸಿ ಕರಾವಳಿಯ ಪಂಡಿತ ಪರಂಪರೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಹಿರಿಯ ಕನ್ನಡ ಪಂಡಿತರೂ, ಯಕ್ಷಗಾನ ಕವಿಗಳೂ ಆದ ಡಾ. ಡಿ. ಸದಾಶಿವ ಭಟ್ ಅವರು ಬೆಟ್ಟಂಪಾಡಿಯ ಹಿರಿಯ ಸಾಧಕರೂ ಕವಿಗಳೂ ಆದ ಧರ್ಬೆ ಶಂಕರ ಭಟ್ ಅವರ ಸಂಸ್ಮರಣೆಯನ್ನು ಮಾಡಿದರು.

ಹಿರಿಯ ಪ್ರಾಧ್ಯಾಪಕರೂ ಸಾಹಿತಿಗಳೂ ಆದ ಪ್ರೊ. ವಿ. ಬಿ. ಅರ್ತಿಕಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಜುಳಗಿರಿ ವೆಂಕಟರಮಣ ಭಟ್ ಶುಭಹಾರೈಸಿದರು. ಕೃತಿಯ ಸಂಪಾದಕರೂ ಕಾಲೇಜಿನ ಪ್ರಾಂಶುಪಾಲರೂ ಆದ ಡಾ. ವರದರಾಜ ಚಂದ್ರಗಿರಿ ಅವರು ಸ್ವಾಗತಿಸಿದರು. ಕೃತಿಯ ಪ್ರಕಾಶಕರೂ ದರ್ಭೆ ಶಂಕರ ಭಟ್ಟರ ಸುಪುತ್ರರೂ ಕೆಎಎಸ್ ಅಧಿಕಾರಿಯೂ ಆದ  ದರ್ಬೆ ಶಂಭು ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಡ್ವಕೇಟ್ ಶಂಭು ಭಟ್ ಅವರು ವಂದಿಸಿದರು. ಲಕ್ಷ್ಮೀ ಪ್ರಾರ್ಥನಾ ಗೀತೆ ಹಾಡಿದರು.  ಹರಿಪ್ರಸಾದ್ ಎಸ್ ಅವರು ನಿರೂಪಿಸಿದರು. ದರ್ಬೆ ರಾಮಕೃಷ್ಣ ಭಟ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.