ಕವನ: ಮುಂಗಾರಿನ ಸೊಬಗು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮುಂಗಾರಿನ ತಂಗಾಳಿಗೆ
ಮುಂಜಾವಿನ ಮಂಪರಿಗೆ
ಮುದದಿಂದ ಮನ ತುಂಬಿ ಮೈಮರೆತು
ಹಸೆಮನೆಯಿಂದ ಹೊಸಬಾಳಿನ ಕನಸು –
ಹೊತ್ತ ಹೊಸಜೋಡಿಗೆ ನಿಸರ್ಗ
ನೀಡಿತು ಕಾಣಿಕೆ

ಇಳೆಗೆ ಇಳಿದುಬಂದ ಮುಂಗಾರುಮಳೆಯ ಸಿಂಚನ
ರಸ ನಿಮಿಷಗಳ ಸ್ವಪ್ನಲೋಕಕೆ ಸಪ್ತರಸದ ರೋಮಾಂಚನ
ಜತೆಗೆ ವನಸಿರಿಯ ಸ್ವಾಗತದಿ ಹಾಸಿದೆ
ಹಸಿರುತೋರಣ

ನಸುಕಿನಲಿ ಹೊಸತನ ಸೂಸಿ ಮೆರೆಯುವ
ಮಂಜು ಮುಸುಕಿದ ಮಾಮರಗಳು
ತೆರೆಮರೆಯಲಿ ಮಂಜುಳಗಾನವ
ನುಡಿಸುತ ಹಾಡುತಿವೆ ಕೋಗಿಲೆಗಳು

ಮಂದಹಾಸದಿ ಮೈತುಂಬಿ
ನಲಿದಾಡುತಿವೆ ವರ್ಣರಂಜಿತ ನವಿಲುಗಳು
ಬಿರಿದ ಸುಮಗಳ ಕೆಣಕಿಸಿ ಅಣಕವಾಡುತಿವೆ
ರಂಗು ರಂಗಿನ ನಾನಾ ಪತಂಗಗಳು

ನಳನಳಿಸಿ ನಾಚುವಂತಿವೆ,ನೈಜವರ್ಣದ ನೈದಿಲೆಗಳು
ಕಾನನದ ಕಣಿವೆಯಂಚಿನಲಿ, ಮುಂಗಾರಿಗೆ ಮೈಯೊಡ್ಡಿ
ಕುಳಿರುಬಾಚುತ ಸಮಯ ಕಳೆಯುವ ತಳಿರುಗಳು
ಬಿದಿರು ಕಳೆಗಳ ಮದ್ಯೆ ಚಿಗುರೊಡೆದು ನಿಂತಿವೆ
ಕಾಡುಕನ್ನಿಕೆ ‘ಕಣಿಲೆ’ಯೆಂಬ ಲಲನಾಮಣಿಗಳು

ಬಾನಲ್ಲಿ ನೇಸರವು ಮೋಡಗಳೊಂದಿಗೆ
ಕಣ್ಣುಮುಚ್ಚಾಲೆಯನು ಆಡುತಿವೆ
ಹಸಿರು ಪರಿಸರವು ಸಿಂಗಾರಗೊಂಡು
ಮುಂಗಾರಿನ ಸಿರಿಗೆ ನವ ಚೇತನವನು ಮೂಡಿಸಿದೆ.

ಅಬ್ದುಲ್ ಸಮದ್ ಬಾವಾ
ಪುತ್ತೂರು ದ ಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.