ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ನಗರ ಕಾಂಗ್ರೆಸ್ ಖಂಡನೆ | ಕಾರ್ಯಾಚರಣೆ ಸ್ಥಗಿತಗೊಳಿಸದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯಾವುದೇ ಮುನ್ಸೂಚನೆ ನೀಡದೆ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ನಗರ ಸಭೆಯ ಕಾರ್ಯವೈಖರಿಯನ್ನು ನಗರ ಕಾಂಗ್ರೆಸ್ ಘಟಕ ತೀವ್ರವಾಗಿ ಖಂಡಿಸಿದೆ. ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಬಿಜೆಪಿಯ ತುಘಲಕ್ ದರ್ಬಾರ್ ವಿರುದ್ಧ ಬೀದಿ ಬದಿ ವ್ಯಾಪಾರಿಗಳ ಸಂಘದೊಂದಿಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಾಗಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮಮ್ಮದ್ ಆಲಿ ಎಚ್ಚರಿಸಿದ್ದಾರೆ.

ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿ ಬದಿ ಸಂಕಲ್ಪ ಕಾರ್ಯಾಗಾರದ ಲ್ಲಿವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಬೀದಿ ಬದಿ ವ್ಯಾಪಾರಿ ಎಂಬ ಹಣೆ ಪಟ್ಟಿಯಿಂದ ಹೊರಬರಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿಕೆ ನೀಡಿದ ಎರಡೇ ದಿನದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ನಡೆಸಲಾಗಿದೆ. ಈಗಿನ ಅಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಪರವಾನಿಗೆ ನೀಡಲಾಗಿದೆ. ಅಧ್ಯಕ್ಷರಾದ ಬಳಿಕ ವ್ಯವಸ್ಥೆ ಬದಲಾಯಿಸಿರುವುದು ಯಾಕೆ? ಯಾವುದೇ ನೋಟಿಸು, ಮುನ್ಸೂಚನೆ ಇಲ್ಲದೆ ತೆರವುಗೊಳಿಸುವ ಅನಿವಾರ್ಯತೆ ಏನಿತ್ತು? ರಸ್ತೆ ಅಗಲೀಕರಣ, ಪ್ರೈಓವರ್ ನಿರ್ಮಾಣವಾಗಲಿದೆಯಾ? ಅಂತಹ ಸಂದರ್ಭಗಳಿದ್ದರೆ ತೆರವುಗೊಳಿಸಬೇಕಿತ್ತು. ಈಗ ಅಂತಹ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.

ಕೊರೋನಾ ಲಾಕ್‌ಡೌನ್‌ನಿಂದ ಎರಡು ತಿಂಗಳ ಕಾಲ ಮನೆಯಲ್ಲಿಯೇ ಇದ್ದ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಮಾಡಿದ ಸಾಲವನ್ನು ತೀರಿಸುವ ಸಂಕಷ್ಟದಲ್ಲಿದ್ದಾರೆ. ಈಗ ಲಾಕ್‌ಡೌನ್ ಬಳಿಕ ಮತ್ತೆ ವ್ಯಾಪಾರ ಪ್ರಾರಂಭಿಸಿ ಬದುಕು ಕಟ್ಟಿಕೊಳ್ಳುವ ಯೋಚಿಸುವ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಕಾನೂನು ಬಾಹಿರವಾಗಿ ತೆರವುಗೊಳಿಸಲಾಗಿದ್ದು ನಿಮಗೆ ಮನುಷ್ಯತ್ವ ಇಲ್ಲವೇ ಎಂದು ಪ್ರಶ್ನಿಸಿದರು. ರಸ್ತೆ ನಿರ್ಮಾಣ, ದೊಡ್ಡ ಯೋಜನೆಗಳಿದ್ದರೆ ಸಮಯ, ಸಂದರ್ಭ ನೋಡಿ ವರಿಗೆ ಕಾಲಾವಕಾಶ ನೀಡಿ, ಮನವರಿಕೆ ಮಾಡಿ ತೆರವುಗೊಳಿಸಬೇಕು. ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೇ ಇದ್ದರೂ ಬಡವರ ಹೊಟ್ಟೆಗೆ ಒಡೆಯುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ. ಒಂದು ಕಡೆ ಬೀದಿ ಬದಿ ವ್ಯಾಪಾರಿಗಳನ್ನು ಕರೆದು ಸಭೆ ನಡೆಸಿ ಅವರಿಗೆ ಬದುಕ ಕಟ್ಟು ಭರವಸೆ ನೀಡುವ ಕಾರ್ಯಕ್ರಮ ಮಾಡಿ, ಬಳಿಕ ಅವರ ಜೀವನಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಶ್ರೀಮಂತರು ಯಾವುದೇ ಸೆಟ್‌ಬ್ಯಾಕ್ ಇಲ್ಲದೆ ಕಟ್ಟಡ ಶೀಟ್ ಅಳವಡಿಸಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಕಾನೂನು ಅನ್ವಯವಾಗುವುದಿಲ್ಲ. ಅದು ಕಣ್ಣೀಗೆ ಕಾಣುವದಿಲ್ವಾ. ಬೀದಿ ಬದಿ ವ್ಯಾಪಾರಿಗಳು ನಿಮ್ಮ ಎದೆ ಮೇಲೆ ಕಾಲಿಟ್ಟಿದ್ದಾರಾ ಎಂದು ಪ್ರಶ್ನಿಸಿದರು. ಯುಪಿಎ ಸರಕಾರದ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ಮಾಡಿದ ಕಾನೂನುನ್ನು ಈಗ ಉಲ್ಲಂಘನೆ ಮಾಡಲಾಗುತ್ತಿದೆ. ಅವರ ಬದುಕನ್ನು ಮೂರಾ ಬಟ್ಟೆ ಮಾಡುವ ಮೂಲಕ ತುಘಲಕ್ ದರ್ಬಾರ್ ಮಾಡುತ್ತಿರುವ ನಿಮ್ಮನ್ನು ಪುತ್ತೂರಿನ ದೇವರು ಮೆಚ್ಚುವರಾ ಎಂದು ಪ್ರಶ್ನಿಸಿದರು.

ಅನಧಿಕೃತ ಕಟ್ಟಡಗಳ ವಿರುದ್ಧ ಸಾವಿರಾರು ದೂರುಗಳಿದ್ದರೂ ಅದನ್ನು ತೆರವುಗೊಳಿಸಲ್ಲ.
ಲೋಕಾಯುಕ್ತ ಕೇಸುಗಳಿದ್ದರೂ ಕ್ರಮಕೈಗೊಳ್ಳಲು ತಾಕತ್ತು ಇಲ್ಲದೇ ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಪರವಾನಿಗೆ ನವೀಕರಣಕ್ಕಾಗಿ ಪೆಬ್ರವರಿಯಲ್ಲಿ ಅರ್ಜಿ ಕೊಟ್ಟ ಈ ತನಕ ನವೀಕರಣ ಮಾಡಿಲ್ಲ. ಕಾನೂನು ಪ್ರಕಾರ ಅರ್ಜಿ ಕೊಟ್ಟರೂ ನವೀಕರಣ ಮಾಡಿಕೊಡಲು ಸಮಯವಿಲ್ಲ. ಅನಧಿಕೃತವಾಘಿರುವವರಿಗೆ ಯಾವಾಗ ಕ್ರಮಕೈಗೊಳ್ಳುತ್ತೀರಿ. ಪಾರ್ಕಿಂಗ್, ಸೆಟ್ ಬ್ಯಾಕ್ ಇಲ್ಲದೆ ಅನಧಿಕೃತ ಕಟ್ಟಡಗಳಿವೆ. ಅದರ ಬ್ಗಗೆ ಯಾವುದೇ ಕ್ರಮಕೈಗೊಳ್ಳದೆ ಆಡಳಿತ ಮಂಡಳಿ ಕೆಲವು ಶ್ರೀಮಂತರ ರಕ್ಷಣೆಗೆ ನಿಂತಿದ್ದಾರೆ. ಮುಂದಿನ ದಿನದಲ್ಲಿ ಯಾರ್‍ಯಾರು ಅನಧಿಕೃತ ಕಟ್ಟಡ ರಚಿಸಿ, ಕಾನೂನು ಬಾಹಿರವಾಗಿ ಕಟ್ಟಡ ನಂಬರ್ ಪಡೆದುಕೊಂಡು ರಾಜಾರೋಷವಾಗಿ ಶ್ರೀಮಂತರ ಪರವಾಗಿ ಶಾಮೀಲಾಗಿರುವ ಪ್ರತಿಯೊಬ್ಬರ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು. ನಗರ ಸಭೆಯಲ್ಲಿ ಯಾವ ರೀತಿಯಲ್ಲಿ ಹಣ ದುರುಪಯೋಗವಾಗುತ್ತಿದೆ, ಯಾವ ರೀತಿ ಪಕ್ಷಪಾತ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಎಲ್ಲಾ ದಾಖಲೆಗಳಿವೆ. ಪ್ರತಿದಿನ ಪತ್ರಿಕಾಗೋಷ್ಟಿ ಮಾಡುವಷ್ಟು ದಾಖಲೆಗಳು ನಮ್ಮ ಬಳಿಯಿದೆ ಎಂದು ಎಚ್ಚರಿಸಿದರು.
ಮಾಜಿ, ಅಧ್ಯಕ್ಷರ ಸಭೆ ನಡೆಸಿ ಅಭಿವೃದ್ಧಿಗೆ ಸಲಹೆ ಕೇಳಿದ ಅಧ್ಯಕ್ಷರು ಬಡವರ ಹೊಟ್ಟೆ ಹೊಡೆಯುವ ಕೆಲಸ ಮಾಡಿದ್ದಾರೆ. ಬಿಜೆಪಿ ಯಾರೆಲ್ಲಾ ನಾಯಕರಲ್ಲಿ ಅನಧಿಕೃತ ಕಟ್ಟಡಗಳಿರುವ ಮಾಹಿತಿ ನಮ್ಮ ಬಳಿಯಿದೆ. ಇನ್ನು ಬಡವರಿಗೆ ತೊಂದರೆ ಕೊಟ್ಟೆರೆ ಎಲ್ಲಾ ಬಣ್ಣ ಬಯಲು ಮಾಡಲಾಗುವುದು. ಅನಧಿಕೃತ ಕಟ್ಟಡಗಳ ಬಗ್ಗೆ ಯಾವುದೇ ರಾಜಿಯಿಲ್ಲ ಎಂದು ಹೇಳುವ ಶಾಸಕರು ಅನಧಿಕೃತ ಕಟ್ಟಡದ ಉದ್ಘಾಟನೆಗೆ ಹೋಗಿದ್ದಾರೆ. ಬಿಜೆಪಿಯ ದ್ವಂದ್ವ ನೀತಿಯನ್ನು ಜನರಿಗೆ ಮನವರಿಕೆ ಮಾಡಲಾಗುವುದು. ಮಿನಿ ವಿಧಾನ ಸೌಧ ಬಳಿಯಲ್ಲಿ ಶಾಸಕರ ಅಭಯ ಹಸ್ತದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಅನುಮತಿ ಇದೆಯಾ? ಬಿಎಂಎಸ್ ರಿಕ್ಷಾ ಯೂನಿಯನ್ ಕಟ್ಟಡ ಅಧಿಕೃತವಾಗಿದೆಯಾ? ನಗರ ಸಭೆಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಯಾವ ರೀತಿ ಕಟ್ಟಡ ಕಟ್ಟಿದ್ದಾರೆ ಎಂಬ ಮಾಹಿತಿಯಿದೆ. ನಗರದಲ್ಲಿರುವ ಬೀದ ಬದಿ ವ್ಯಾಪಾರಿಗಳಿ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಾಲ ನೀಡುವ ಕಾರ್ಯಕ್ರಮ ಮಾಡಿ ಇನ್ನೊಂದು ಕಡೆ ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದಾರೆ. ಅನಧಿಕೃತ ಕಟ್ಟಡಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಎಲ್ಲರ ಹಣೆ ಬರಹಗಳ ಬಗ್ಗೆ ದಾಖಲೆ ಸಂಗ್ರಹವಾಗಿದೆ ಎಂದು ಆರೋಪಿಸಿದರು.

ತೆರವು ಕಾರ್ಯಾಚರಣೆಯ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯಕೈಗೊಳ್ಳಬೇಕು. ಬಳಿಕ ನೋಟೀಸು ನೀಡಿ ಕಾಲಾವಕಾಶ ನೀಡಿಯೂ ತೆರವು ಗೊಳಿಸದಿದ್ದರೆ ಕ್ರಮಕೈಗೊಳ್ಳಬೇಕು. ಆದರೆ ಅದಯಾವುದನ್ನು ಮಾಡದೆ ಪೌರಾಯುಕ್ತರು ಪತ್ರಿಕಾ ಹೇಳಿಕೆ ನೀಡಿ ತೆರವುಗೊಳಿಸುವ ಕಾನೂನು ಬಾಹಿರ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ರೀತಿ ಮಾಡಿದ ಕಾನೂನು ಬಾಹಿರವಾಗಿ ಬಡವರ ಜೀವಕ್ಕೆ ಕೊಳ್ಳಿ ಇಡುವ ಕೆಲಸದ ವಿರುದ್ದ ಪ್ರತಿಭಟನೆ ನಡೆಸಲಾಗವುದು. ಬಡವರ ವಿರುದ್ದ ಮಾಡುವ ಕಾರ್ಯಚರಣೆಯನ್ನು ನಿಲ್ಲಿಸಿ ಇಲ್ಲದಿದ್ದರೆ ಅದಕ್ಕೆ ಸರಿಯಾದ ಇಂಜೆಕ್ಷನ್ ನೀಡಲು ನಾವು ಸಿದ್ದರಿರುವುದಾಗಿ ಎಚ್ಚರಿಸಿದರು.

ಪುತ್ತೂರಿಗೆ ಮಾತ್ರ ಅನ್ವಯವೇ?
ಜಿಲ್ಲೆಯಲ್ಲಿ ಎಲ್ಲಿಯೂ ನಡೆಯುತ್ತಿಲ್ಲ. ಸಂಜೀವ ಮಠಂದೂರು ಶಾಸಕರಾದ ಬಳಿಕ ಬೀದಿ ಬದಿ ವ್ಯಾಪಾರಿಗಳು ಕೆಂಗಣ್ಣಿಗೆ ಗುರಿಯಾಗಿರುವುದು ಯಾಕೆ, ಆರ್ಯಾಪು ನರಿಮೊಗರಿನ ವ್ಯಾಪಾರಿಗಳು ಏನು ಅನ್ಯಾಯ ಮಾಡಿದ್ದಾರೆ. ಅವರು ಶಾಪ ಹಾಕುತ್ತಿದದಾರೆ. ಪುತ್ತೂರು ತಾಲೂಕು ಹೊರತು ಬೇರೆ ಯಾವ ತಾಲೂಕುಗಳಲ್ಲಿಯೂ ಕಾರ್ಯಾಚರಣೆ ನಡೆಯುತ್ತಿಲ್ಲ. ಶಾಸಕ ಸಂಜೀವ ಮಠಂದೂರು ಅವರಿಗೆ ಬೀದಿ ಬದಿ ವ್ಯಾಪಾರಿಗಳು ಅನ್ಯಾಯ ಮಾಡಿದ್ದಾರ, ಅವರ ಮೇಲೆ ಯಾಕೆ ಕಣ್ಣು ಅನಧಿಕೃತ ಕಟ್ಟಡದವರ ಮೇಲೆ ಏಕೆ ಕ್ರಮವಿಲ್ಲ. ಅನಧಿಕೃತ ಕಟ್ಟಡದ ಬಗ್ಗೆ ನಾನೇ ದೂರು ಕೊಟ್ಟರೂ ಈ ತನಕ ಕ್ರಮಕೈಗೊಂಡಿಲ್ಲ. ದೇಶದಲ್ಲಿ ಬಡವರು ಬದುಕಬಾರದು, ಶ್ರೀಮಂತರು ಮಾತ್ರ ಬದುಕಬೇಕೆಂಬ ದೋರಣೆಯನ್ನು ದೇಶದಾದ್ಯಂತ ಅನುಸರಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಶಾಪ ನಿಮಗೆ ತಟ್ಟಲಿದೆ ಎಂದರು ಎಚ್ಚರಿಸಿದರು.
ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.