ಬಿಜೆಪಿಯವರಿಗೆ ದೇಶ ಪ್ರೇಮಿ ಯಾವುದು, ದೇಶ ದ್ರೋಹಿ ಯಾವುದು ಎಂಬುದರ ಅರಿವಿಲ್ಲ – ಪಕ್ಷದ ವಿರುದ್ದ ದೇಶ ದ್ರೋಹದ ಆರೋಪ ಮಾಡಿದ ಬಿಜೆಪಿ ವಿರುದ್ಧ ಪೊಲೀಸರಿಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಸಿಕೆ ವಿತರಣೆಯ ಬಗ್ಗೆ ಮಾಡಿದ ಆರೋಪಕ್ಕೆ ಕಾಂಗ್ರೆಸ್ ಮೇಲೆ ದೇಶದ್ರೋಹದ ಆರೋಪ ಮಾಡಿರುವ ಬಿಜೆಪಿಯವರಿಗೆ ದೇಶ ಪ್ರೇಮ ಯಾವುದು, ದೇಶ ದ್ರೋಹ ಯಾವುದು ಎಂಬುದರ ಅರಿವಿಲ್ಲ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ದೇಶದ್ರೋಹದ ಕೆಲಸವೆಂದು ಆರೋಪ ಮಾಡಿದ ಬಿಜೆಪಿಯವರ ವಿರುದ್ದ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ತಿಳಿಸಿದರು.

ಎಪಿಎಂಸಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷ ತಪ್ಪ ಹೆಜ್ಜೆಗಳನ್ನು ಇಟ್ಟಾಗ, ಜನ ವಿರೋಧಿ ರೀತಿಯಲ್ಲಿ ಆಡಳಿತ ನಡೆಸುವಾಗ, ಜನರಿಗೆ ಆರೋಗ್ಯ ರಕ್ಷಣೆ ನೀಡದೆ, ಮೂಲಭೂತ ಸೌಕರ್ಯಗಳನ್ನು ಇರುವಾಗ ಜನರ ಮುಂದೆ ಇಡುವುದು ಮತ್ತು ಆಡಳಿತ ಪಕ್ಷ ತಪ್ಪು ನಿರ್ಣಯಗಳನ್ನು ಬೊಟ್ಟು ಮಾಡುವುದು ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ ಕರ್ತವ್ಯ ಹಾಗೂ ಜವಾಬ್ದಾರಿಯಾಗಿರುತ್ತದೆ. ಇದನ್ನೇ ಆಡಳಿತ ನಡೆಸುವ ಪಕ್ಷವು ದೇಶ ದ್ರೋಹದ ಕೆಲಸವೆಂದು ನಿರ್ಣಯ ಕೈಗೊಂಡು ಟೀಕಿಸುವುದು ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ, ಕಾರ್ಯಕರ್ತರಿಗೆ ಹಾಗೂ ಸಂವಿಧಾನಕ್ಕೆ ಮಾಡುವ ಅಪಚಾರ ಮತ್ತು ಮಾನಹಾನಿಯ ದುಷ್ಕೃತ್ಯವಾಗಿದೆ.

ಲಸಿಕೆ ಪ್ರಾರಂಭದಲ್ಲಿಯೇ ಅನುಮಾನ ಸೃಷ್ಠಿಸಿದ್ದಾರೆ. ಲಸಿಕೆ ವಿತರಣೆಯಲ್ಲಿ ಅವ್ಯಹಾರ ಆಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವ ಲಸಿಕೆ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವುದಿಲ್ಲ. ಬಿಜೆಪಿಯವರ ಅವರದ್ದೇ ಜನರಿಗೆ ನೀಡಿದ್ದಾರೆ. ಟೋಕನ್ ಪಡೆದು ಕಾದವರು ಕಾದೇ ಬಾಕಿಯಾಗುತ್ತಾರೆ. ಜನ ಸಂಖ್ಯೆಗೆ ಅನುಗುಣವಾಗಿ ಪೂರೈಕೆ ಮಾಡುತ್ತಿಲ್ಲ. ಎರಡನೇ ಲಸಿಕೆಗೆ ಪ್ರಾರಂಭದಲ್ಲಿ ೨೧ ದಿನಗಳ ಅಂತರವಿದ್ದು ನಂತರದ ದಿನಗಳಲ್ಲಿ ೮೧ ದಿನಕ್ಕೆ ವಿಸ್ತರಣೆಯಾಗಿತ್ತು. ಇದರಲ್ಲಿ ಅನುಮಾನ ಮೂಡಿದೆ. ಲಸಿಕೆ ವಿತರಣೆಯಲ್ಲಿನ ಗೊಂದಲಗಳನ್ನು, ಜನರ ಸಂಕಷ್ಟಗಳನ್ನು ಕೇಳಿದರೆ ದೇಶ ದ್ರೋಹವಾಗುತ್ತದೆ. ಹಾಗಾದರೆ ದೇಶ ಪ್ರೇಮ ಯಾವುದು? ದೇಶ ದ್ರೋಹ ಯಾವುದು? ಮಹಾತ್ಮ ಗಾಂಧಿಜಿಯವರನ್ನು ಕೊಂದ ಗೂಡ್ಸೆ ದೇಶ ಪ್ರೇಮಿಯಾದರೆ ದೇಶ ದ್ರೋಹಿಗಳು ಯಾರು? ಗಾಂಧಿ ಕುಟುಂಬ, ನೆಹರು ಕುಟುಂಬದ ಬಗ್ಗೆ ಮಾತನಾಡುವವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಿಲ್ಲ. ಅವರು ಬ್ರಿಟೀಷರ ಪರವಾಗಿದ್ದರೇ ಹೊರತು ಹೋರಾಟ ಮಾಡಿಲ್ಲ. ಹಿಂದಿನ ಚಿತ್ರಣ ಬೇಡ ನೆಹರು ನಂತರ ಚಿತ್ರಣ ಮಾತ್ರ ಬೇಕಾಗಿದೆ. ನೆಹರೂಗು-ಮೋದಿಗೆ ಹೊಂದಾಣಿಕೆ ಸಾಧ್ಯವಿಲ್ಲ. ನೆಹರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ವಿದ್ಯಾವಂತರಾಗಿ, ದೇಶದ ದೂರದೃಷ್ಠಿತ್ವ ಹೊಂದಿದ್ದರು. ಅವರ ದೂರದೃಷ್ಠಿಯಿಂದ ದೇಶದಲ್ಲಿ ಕೃಷಿ, ಕೈಗಾರಿಕೆ, ಸೈನ್ಯದಲ್ಲಿ ಅಭಿವೃದ್ಧಿ ಕಂಡಿದೆ. ಇಂದಿರಾಗಾಂಧಿ ಉಳುವವನೇ ಹೊಲದ ಒಡೆಯ ಮಾಡಿದ್ದಾರೆ. ಆದರೆ ಆಸಂದರ್ಭದಲ್ಲಿ ಮೋದಿಯಿರುತ್ತಿದ್ದರೆ ಹೊಲ ಕಾರ್ಪೋರೇಟ್ ಕಂಪನಿಗಳಿಗೆ ಹೂಗುತ್ತಿತ್ತು. ರೈತ ಬೀದಿಗೆ ಬರುತ್ತಿದ್ದ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಅಮಳ ಹಾಗೂ ಉಪಾಧ್ಯಕ್ಷ ವಿಎಚ್‌ಎ ಶಕೂರ್ ಹಾಜಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.