ದಲಿತ ಮುಖಂಡ ಶಿವಪ್ಪ ಅಟ್ಟೋಳೆ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಉಳ್ಳಾಲ ನಗರಸಭೆಯ ಸಿಬ್ಬಂದಿಯಾಗಿದ್ದ ಸವಣೂರಿನ ಅಟ್ಟೋಳೆ ನಿವಾಸಿ ಶಿವಪ್ಪ ಅಟ್ಟೋಳೆ(50ವ.)ರವರು ಜು.23ರಂದು ಸಂಜೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.

 

 

ಈ ಹಿಂದೆ ಪುತ್ತೂರು ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಉಳ್ಳಾಲ ನಗರಸಭೆಗೆ ವರ್ಗಾವಣೆಗೊಂಡಿದ್ದರು.ಈ ನಡುವೆ ಅವರು ದಕ್ಷಿಣ ಕನ್ನಡ ಜಿಲ್ಲಾ ಬಹುಜನ ಸಮಾಜ ಪರಿವರ್ತನ ವೇದಿಕೆಯ ಉಸ್ತುವಾರಿಯಾಗಿದ್ದರು.ಅನಾರೋಗ್ಯ ಪೀಡಿತರಾಗಿ ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ನಿಧನರಾಗಿದ್ದಾರೆ.ಮೃತರು ಪತ್ನಿ ಗೌರಿ,ಇಬ್ಬರು ಪುತ್ರಿಯರು, ಮಾಜಿ ಸೈನಿಕರಾಗಿರುವ ಸಹೋದರ ಶಿವಪ್ರಕಾಶ್ ಸೇರಿದಂತೆ ಮೂವರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.

ಪುತ್ತೂರಿನಲ್ಲಿ ಅಹಿಂದಾದ ಕಾರ್ಯದರ್ಶಿ: ದಲಿತ ಮುಖಂಡರಾಗಿದ್ದ ಶಿವಪ್ಪ ಅಟ್ಟೋಳೆಯವರು ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪುತ್ತೂರಿನಲ್ಲಿ ಅಹಿಂದ ಕಾರ್ಯದರ್ಶಿಯಾಗಿದ್ದರು.ಈ ಸಂದರ್ಭದಲ್ಲಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಅಹಿಂದ ಅಧ್ಯಕ್ಷರಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.