ಎಫ್‌ಟಿಕೆ ಬಳಸಿ ಶುದ್ಧ ನೀರು ಪೂರೈಕೆ ಯೋಜನೆ – ಗ್ರಾಮ ಪಂಚಾಯತ್ ಕಛೇರಿಯಲ್ಲಿ ಫೀಲ್ಡ್ ಟೆಸ್ಟ್ ಕಿಟ್ ಬಳಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೋರ್‌ವೇಲ್- ತೆರೆದ ಬಾವಿಯ ನೀರು ಕಿಟ್ ಮೂಲಕ ಪರೀಕ್ಷೆ

ಪುತ್ತೂರು: ತೆರೆದ ಬಾವಿ ಹಾಗೂ ಬೋರ್‌ವೆಲ್‌ನ ನೀರು ಬಳಕೆಗೆ ಯೋಗ್ಯವೇ ಎಂಬುದನ್ನು ಪರೀಕ್ಷಿಸಿ ನೀರು ಪೂರೈಕೆ ಮಾಡುವ ಮಹತ್ತರ ಯೋಜನೆ ಜಾರಿಯಾಗಿದೆ. ಈ ಯೋಜನೆಯನ್ವಯ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ಕಛೇರಿಗಳಿಗೆ ನೀರು ಶುದ್ಧತೆ ಪ್ರಯೋಗ ಮಾಡುವ ಫೀಲ್ಡ್ ಟೆಸ್ಟ್ ಕಿಟ್‌ ನೀಡಲಾಗುತ್ತಿದೆ.

ಪುತ್ತೂರು ಪಟ್ಟಣ ಹಾಗೂ ಗ್ರಾಮಾಂತರ ಭಾಗದ ಬಹುತೇಕ ತೆರೆದ ಬಾವಿ ಹಾಗೂ ಬೋರ್‌ವೆಲ್‌ನ ನೀರು ಕಬ್ಬಿನ ವಾಸನೆ ಬರುತ್ತಿದೆ ಮತ್ತು ನೀರು ಕಲ್ಮಶವಾಗಿದೆ ಎಂದು ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾ.ಪಂ. ಅಧೀನದ ನೀರಿನ ಮೂಲಗಳ ಕಲ್ಮಶಗಳನ್ನು ತೆಗೆದು ಹಾಕಿ ಶುದ್ಧ ಕುಡಿಯುವ ನೀರಿನ ಪರಿವರ್ತನೆಗೆ ಫೀಲ್ಡ್ ಟೆಸ್ಟ್ ಕಿಟ್ (ಎಫ್‌ಟಿಕೆ) ಬಳಸಿಕೊಳ್ಳಲು ಪ್ರಯೋಗ ನಿರತರಾಗುವ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಸರ್ಕಾರದಿಂದ ಕಿಟ್ ವಿತರಿಸಲಾಗುತ್ತಿದೆ.

ಜಿಲ್ಲಾ ಗ್ರಾಮೀಣ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಈ ಎಫ್‌ಟಿಕೆ ಕಿಟ್‌ಗಳನ್ನು ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾ.ಪಂ. ಕಛೇರಿಗಳಿಗೆ ನೀಡಲಾಗುತ್ತಿದೆ. ಈ ಕಿಟ್ ಬಳಕೆ ಮೂಲಕ ಪ್ರತೀ ಗ್ರಾ.ಪಂ.ನ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಮನೆ ಸಹಿತ ಸರ್ಕಾರಿ ಕಟ್ಟಡಗಳಿಗೆ ನೀಡುವ ಕುಡಿಯುವ ನೀರನ್ನು ಫೀಲ್ಡ್ ಟೆಸ್ಟ್ ಕಿಟ್ ಮೂಲಕ ಟೆಸ್ಟ್ ಮಾಡಿಕೊಂಡು ಕುಡಿಯಲು ಬಳಸಬಹುದೇ ಅಥವಾ ಇಲ್ಲವೇ ಎಂದು ಕಂಡು ಹಿಡಿಯಲಿದ್ದಾರೆ.

ಫೀಲ್ಡ್ ಟೇಸ್ಟ್ ಕಿಟ್‌ಗಳ ಮೂಲಕ ನೀರಿನಲ್ಲಿರುವ ಬ್ಯಾಕ್ಟೀರಿಯ ಹಾಗೂ ರಸಾಯನಿಕಗಳನ್ನು ಪತ್ತೆ ಹಚ್ಚ ಬಹುದಾಗಿದೆ. ಈ ಕಿಟ್‌ಗಳನ್ನು ಪ್ರತೀ ಗ್ರಾ.ಪಂ. ಕಛೇರಿಗಳಿಗೆ ನೀಡಲಾಗುತ್ತಿದ್ದು, ಗ್ರಾ.ಪಂ.ಗಳಲ್ಲಿ ಕೇವಲ ಬೇಸಿಕ್ ಹಂತದ ಅಂದರೆ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಗಳನ್ನು ಮಾತ್ರ ಪತ್ತೆ ಹಚ್ಚಬಹುದು. ಹೆಚ್ಚಿನ ಕಂಟೆಂಟ್‌ಗಳಿದ್ದರೆ ಅದನ್ನು ಪತ್ತೆ ಹಚ್ಚಲು ನೀರನ್ನು ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿನ ತಜ್ಞರಿಂದ ಕಂಡು ಹಿಡಿಯಲಾಗುತ್ತದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ಬೋರ್‌ವೆಲ್‌ಗಳಿಂದ ಸ್ವಚ್ಛಗೊಳಿಸಿದ ಬಾಟಲಿಗಳಲ್ಲಿ ನೀರು ಸಂಗ್ರಹಿಸಿ ಗ್ರಾ.ಪಂ. ನೀಡಿರುವ ಕಿಟ್‌ಗಳಲ್ಲಿ ಟೆಸ್ಟ್ ಮಾಡಲಾಗುತ್ತದೆ. ಪ್ರತೀ ಗ್ರಾ.ಪಂ.ಗೆ ತಲಾ ಐದು ಜನರು ಬೋರ್‌ವೆಲ್‌ಗಳಿಂದ ನೀರು ಸಂಗ್ರಹಿಸಿ ಗ್ರಾ.ಪಂ. ಕಛೇರಿಗೆ ತಂದು ಪರೀಕ್ಷಿಸುತ್ತಾರೆ. ಈ ಬಗ್ಗೆ ಈಗಾಗಲೇ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಕಿಟ್ ಬಳಕೆ ಕುರಿತು ತರಬೇತಿ ನೀಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.