ರಾಷ್ಟ್ರಮಟ್ಟದ ಮ್ಯಾರಥಾನ್-2020ರಲ್ಲಿ ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳ ಆವಿಷ್ಕಾರಗಳು ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನೀತಿ(NITI) ಆಯೋಗ ಹಾಗೂ ಅಟಲ್ ಇನ್ನೋವೇಶನ್ ಮಿಷನ್ ಇದರ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಮ್ಯಾರಥಾನ್-2020ರಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಎರಡು ವಿದ್ಯಾರ್ಥಿ ತಂಡಗಳು ಆಯ್ಕೆಯಾಗಿದೆ. ೩೨ ರಾಜ್ಯಗಳಿಂದ ದಾಖಲೆ ಮಟ್ಟದ 7200 ವೈಜ್ಞಾನಿಕ ಆವಿಷ್ಕಾರಗಳು ಭಾಗವಹಿಸಿದ್ದು ಕೊಂಬೆಟ್ಟು ಪ್ರೌಢಶಾಲೆಯ ಎರಡು ವೈಜ್ಞಾನಿಕ ಮಾದರಿಗಳು ಆಯ್ಕೆಯಾಗಿವೆ. ಕೊರೋನಾ ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ವರ್ಚುವಲ್ ಆಗಿ ಫಲಿತಾಂಶವನ್ನು ಘೋಷಿಸಿದ AIM ನ ನಿರ್ದೇಶಕ ಡಾ. ಚಿಂತನ್ ವೈಷ್ಣವ್ ಇನ್ನು ಹನ್ನೊಂದು ತಿಂಗಳಲ್ಲಿ ಬೂಟ್ ಕ್ಯಾಂಪ್ ನಡೆಸಿ ವಿದ್ಯಾರ್ಥಿಗಳ ಆವಿಷ್ಕಾರ ಗಳನ್ನು ಮಾರುಕಟ್ಟೆಗೆ ತರಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿದ್ಯಾರ್ಥಿಗಳಾದ ಅನುಷಾ ಜೇನ್ ಪಾಯ್ಸ್ ಹಾಗೂ ಹರ್ಷಿತಾ ಇವರ ಪೈಪ್ಲೈನ್ ಲಿಕೆಜ್ ಡಿಟೆಕ್ಟರ್ ಆವಿಷ್ಕಾರವು ಅಗ್ರ ೧೦ (ಟಾಪ್‌ಟೆನ್) ರಲ್ಲಿ ಆಯ್ಕೆಯಾಗಿದೆ. ವಿದ್ಯಾಶ್ರೀ ಹಾಗೂ ಅನುಷ ಜೀನ್ ಪಾಯ್ಸ್ ರವರ ಟ್ರಿವಿಯ ಫ್ರೀ ಎನರ್ಜಿ ಜನರೇಟರ್ ಆಯ್ಕೆಯಾಗಿರುವ ಎರಡನೇ ಆವಿಷ್ಕಾರವಾಗಿದೆ. ಈ ಎರಡು ಆವಿಷ್ಕಾರಗಳು ಐಟಿ ಉಪನ್ಯಾಸಕರಾದ ಆಶ್ಲೇಷ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ತಯಾರಾಗಿರುತ್ತದೆ. ವಿಜ್ಞಾನ ಹಾಗೂ ATL ನ ನೋಡಲ್ ಶಿಕ್ಷಕಿ ಸಿಂಧೂ ವಿ.ಕೆ ಇವರ ಸಹಕಾರದಲ್ಲಿ ಎರಡು ಆವಿಷ್ಕಾರಗಳನ್ನು ಪ್ರದರ್ಶಿಸಲಾಯಿತು ಎಂದು ಉಪಪ್ರಾಂಶುಪಾಲ ವಸಂತ ಮೂಲ್ಯ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.