ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೇವಾ ಸಂಸ್ಥೆಯಲ್ಲಿ ಸೇವೆಯೇ ಮುಖ್ಯ. ಸೇವೆಯಲ್ಲಿ ಸ್ಪರ್ಧೆ ಯಾವುತ್ತೂ ಇರುವುದಿಲ್ಲ ಎಂದು ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷ ವೀಣಾ ಕೊಳತ್ತಾಯ ಅವರು ಹೇಳಿದರು.

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಜು.೨೪ರಂದು ನಡೆದ ಇನ್ನರ್ ವೀಲ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಬಳಿಕ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷತೆಯಲ್ಲಿ ನನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವ ಬೇಡ. ಇನ್ನರ್‌ವೀಲ್ ಕ್ಲಬ್ ಒಬ್ಬರು ಮಾಡುವಂತಹದಲ್ಲ. ಇಲ್ಲಿ ನಾವು ಏನು ಮಾಡಿದರೂ ಅದು ಇನ್ನರ್‌ವೀಲ್ ಕ್ಲಬ್‌ನಿಂದ ಮಾಡುತ್ತಿದ್ದೇವೆ ಎಂಬ ಮನೋಭಾವ ಇದ್ದಾಗ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದ ಅವರು ನಿರ್ಗಮನ ಅಧ್ಯಕ್ಷೆ ಸೀಮಾ ನಾಗರಾಜ್ ಅವರು ಅಧಿಕಾಲಾವದಿಯಲ್ಲಿ ಉತ್ತಮ ಕೆಲಸ ಕಾರ್ಯ ನಡೆದಿದೆ. ನೂತನ ಅಧ್ಯಕ್ಷೆ ವೀಣಾ ಬಿ.ಕೆ ಅವರಿಗೆ ಇನ್ನೂ ಉತ್ತಮ ಕೆಲಸ ನಿರ್ವಹಿಸಲು ಅವಕಾಶವಿದೆ. ಅದರ ಸದುಪಯೋಗ ಉತ್ತಮ ರೀತಿಯಲ್ಲಿ ನಡೆಯಲಿ ಎಂದರು.

ಉತ್ತಮ ಮನಸ್ಸಿನ ಸೇವೆಗೆ ಇನ್ನರ್‌ವೀಲ್ ಕ್ಲಬ್ ಮಾದರಿ:
ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ಅವರು ಇನ್ನರ್‌ವೀಲ್ ಕ್ಲಬ್‌ನ ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿ ಉತ್ತಮ ಮನಸ್ಸಿನ ಸೇವೆಗೆ ಇನ್ನರ್‌ವೀಲ್ ಕ್ಲಬ್ ಮಾದರಿಯಾಗಿದೆ. ಯಶಸ್ಸು ಯಾವಾಗಲು ಒಮ್ಮೆಲೆ ಬರುವುದಿಲ್ಲ. ಅದರ ಹಿಂದೆ ಶ್ರಮ ಇದೆ. ಇದಕ್ಕೆ ಉದಾಹರಣೆಯಾಗಿ ನೂತನ ಅಧ್ಯಕ್ಷೆ ವೀಣಾ ಬಿ.ಕೆ ನಮ್ಮ ಮುಂದಿದ್ದಾರೆ. ಅವರು ಮುಂದಿನ ವರ್ಷ ಉತ್ತಮ ರೀತಿಯಲ್ಲಿ ಕ್ಲಬ್ ಅನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆ ನನ್ನಲ್ಲಿ ಇದೆ. ಇದರ ಜೊತೆಗೆ ಕ್ಲಬ್‌ನ ಹಲವು ಯೋಜನೆಗಳು ಅತ್ಯಂತ ಸುಲಭವಾಗಿ ನಿರ್ವಹಿಸಲು ಹೆಚ್ಚು ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸಿ. ಮಾತೃ ಸಂಸ್ಥೆಯಿಂದ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಹೇಳಿದರು.

ಸ್ವಾವಲಂಭಿ ಮಹಿಳೆಯರಿಗೆ ಪ್ರೋತ್ಸಾಹ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನರ್ ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ವೀಣಾ ಬಿ ಕೆ ಅವರು ಮಾತನಾಡಿ ಮಹಿಳೆ ಮನಸ್ಸು ಮಾಡಿದರೆ ಸಮಾಜದಲ್ಲಿ ಉತ್ತಮ ಗೌರವ ಸ್ಥಾನ ಪಡೆಯಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಸ್ವಾವಲಂಭಿ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದ ಅವರು ನನ್ನ ಅಧ್ಯಕ್ಷತೆಯಲ್ಲಿ ಸದಸ್ಯರೆಲ್ಲರ ಸಹಕಾರ ಕೋರಿದರು. ೨೦೨೧-೨೨ರಲ್ಲಿ ಕೆಲವೊಂದು ಪ್ರಾಜೆಕ್ಟ್ ಈಗಾಗಲೇ ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ಕೊವಿಡ್-೧೯ಗೆ ಸಂಬಂಧಿಸಿದ ಕಾರ್ಯಕ್ರಮ ವಿದ್ಯಾಕ್ಷೇತ್ರಕ್ಕೆ ಸಂಬಂಧಿಸಿ ಕಾರ್ಯಕ್ರಮ ಮಾಡಲಾಗಿದೆ. ಮುಂದೆ ಪೌರ ಕಾರ್ಮಿಕರಿಗೆ ದೈಹಿಕ ಶುಚಿತ್ವ, ಆರೋಗ್ಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಡಾ. ಸುಧಾ ಎಸ್ ರಾವ್ ಅವರ ಮೂಲಕ ನಡೆಸಲಾಗುವುದು. ಜೊತೆಗೆ ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಪುಷ್ಪಾ ಗುರುರಾಜ್ ಅವರು ನೀಡಿದ ಯೋಜನೆಯಂತೆ ಪಿಂಕ್ ಪಸ್ಟ್ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ, ಆರೋಗ್ಯ, ಪರಿಸರ ಸಂರಕ್ಷಣೆ, ಅನಾಥಶ್ರಮ, ಮೂಡನಂಬಿಕೆ ಹೋಗಲಾಡಿಸುವ ಪ್ರಮುಖ ಅಂಶಗಳನ್ನು ಇಟ್ಟು ಕೊಂಡು ಕಾರ್ಯಕ್ರಮ ನಡೆಯಲಿದೆ ಎಂದರು.

71 ಪ್ರೋಜೆಕ್ಟ್ ಪೂರ್ಣ:
ಕ್ಲಬ್‌ನ ನಿರ್ಗಮನ ಅಧ್ಯಕ್ಷೆ ಸೀಮಾ ನಾಗರಾಜ್ ಅವರು ಮಾತನಾಡಿ ನಮ್ಮ ಅಧಿಕಾರಾವಧಿಯ ಸಾಲಿನಲ್ಲಿ ‘ಲೀಡ್‌ದ ಚೇಂಜ್ ‘ ಪ್ರೋಜೆಕ್ಟ್ ಕೊಡಲಾಗಿತ್ತು. ಆ ಸಂದರ್ಭದಲ್ಲಿ ಲಾಕ್ ಡೌನ್ ಇದ್ದರಿಂದ ನಮ್ಮ ಪದಪ್ರದಾನ ಆನ್ ಲೈನ್ ಮೂಲಕವೇ ಮಾಡಬೇಕಾಯಿತು. ಆದರೂ ೭೧ ಪ್ರಾಜೆಕ್ಟ್ ಮಾಡುವ ಮೂಲಕ ಜಿಲ್ಲೆ ಮತ್ತು ಅಂತರಾಷ್ಡ್ರೀಯ ಮೆಚ್ಚುಗೆ ಪಾತ್ರರಾಗಿದ್ದೇವೆ. ಕ್ಲಬ್‌ನ ಹಲವಾರು ಪ್ರೋಜೆಕ್ಟ್ ನಲ್ಲಿ ತನ್ನೊಂದಿಗೆ ಸಹಕರಿಸಿದ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಿದರು.

ಬುಲೆಟಿನ್, ಕ್ಲಬ್ ಪ್ಲ್ಯಾಗ್ ಬಿಡುಗಡೆ:
ಇನ್ನರ್ ವೀಲ್ ಕ್ಲಬ್‌ನ ಬುಲೆಟಿನ್ ಅನ್ನು ರೋಟರಿ ಕ್ಲಬ್‌ನ ಅಧ್ಯಕ್ಷ ಮಧು ನರಿಯೂರು ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬುಲೆಟಿನ್ ಎಡಿಟರ್ ಪ್ರಮೀಳಾ ರಾವ್ ಅವರು ಬುಲೆಟಿನ್ ಕುರಿತು ಮಾತನಾಡಿ ಈ ವರ್ಷ ಪಿಂಕ್ ಪಸ್ಟ್ ನಮ್ಮ ಥೀಮ್ ಅದ ಕಾರಣ ಪಿಂಕ್ ಕಲ್ಲರ್‌ನಲ್ಲಿ ಬುಲೆಟಿನ್ ಮಾಡಿದ್ದೇವೆ. ಮುಂದಿನ ದಿನ ಬುಲೆಟಿನ್ ಎಡಿಟರ್ ಕಾರ್ಯ ನಿರ್ವಹಿಸಲು ಯಂಗ್‌ಸ್ಟಾರ್‌ಗಳು ಮುಂದೆ ಬರಬೇಕೆಂದು ಮನವಿ ಮಾಡಿದರು. ಈ ವರ್ಷದಲ್ಲಿ ಗದ್ದೆ ಬೇಸಾಯಕ್ಕೆ ಒತ್ತು ಕೊಟ್ಟ ಚಿತ್ರಣವನ್ನು ಹೊಂದಿರುವ ಕ್ಲಬ್‌ನ ಪ್ಲ್ಯಾಗ್ ಅನ್ನು ಪದಪ್ರದಾನ ಅಧಿಕಾರಿ ವೀಣಾ ಕೊಳತ್ತಾಯ ಬಿಡುಗಡೆ ಮಾಡಿದರು.

ಗೌರವ ಸನ್ಮಾನ:
ಅಟೋ ರಿಕ್ಷಾ ಚಾಲಕಿಯಾಗಿ ಮಹಿಳೆ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಕಡಬ ತಾಲೂಕಿನ ಶಿವಪ್ಪ ಗೌಡ ಅವರ ಪತ್ನಿ ಆಟೋ ರಿಕ್ಷಾ ಚಾಲಕಿ ಪದ್ಮಾವತಿ ಅವರನ್ನು ಗೌರವಿಸಲಾಯಿತು. ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ದಿಶಾ ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಶ್ರೀದೇವಿ ರೈ ಸನ್ಮಾನ ಗೌರವ ಕಾರ್ಯಕ್ರಮ ನಿರ್ವಹಿಸಿದರು. ರೂಪಲೇಖ ಪದಾಪ್ರದಾನ ಅಧಿಕಾರಿ ವೀಣಾ ಕೊಳತ್ತಾಯ ಅವರನ್ನು ಪರಿಚಯಿಸಿದರು. ಕಾರ್ಯದರ್ಶಿ ಅಶ್ವಿನಿ ಕೃಷ್ಣನಾರಾಯಣ ಮುಳಿಯ ವರದಿ ಮಂಡಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಅಧಿಕಾರ ಪಡೆದ ನಮ್ಮ ತಂಡ ಹಲವು ಉತ್ತಮ ಕಾರ್ಯ ನಿರ್ವಹಿಸಿರುವುದಕ್ಕೆ ಹೆಮ್ಮೆಯಾಗಿದೆ ಎಂದರು. ವಿವಿಧ ಕ್ಲಬ್‌ಗಳಿಂದ ಬಂದಿರುವ ಶುಭ ಹಾರೈಕೆಯ ಸಂದೇಶವನ್ನು ರಾಜೇಶ್ವರಿ ಆಚಾರ್ಯ ವಾಚಿಸಿದರು. ರಮಾ ಪ್ರಭಾಕರ್ ಪ್ರಾರ್ಥಿಸಿದರು. ಸಂಧ್ಯಾ ನರಿಯೂರು ಕ್ಲಬ್‌ನ ಆಶೋತರವನ್ನು ಬಿಂಬಿಸಿದರು. ನಿರ್ಗಮನ ಅಧ್ಯಕ್ಷೆ ಸೀಮಾ ನಾಗರಾಜ್ ಸ್ವಾಗತಿಸಿದರು. ನೂತನ ಉಪಾಧ್ಯಕ್ಷೆ ಟೈನಿ ದೀಪಕ್ ವಂದಿಸಿದರು. ಕೃಷ್ಣವೇಣಿ ಮುಳಿಯ, ಶೋಭಾ ಕೊಳತ್ತಾಯ ಕಾರ್ಯಕ್ರಮ ನಿರೂಪಿಸಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಬಿ.ಕೆ ಅವರ ಪತಿ ಅರಣ್ಯಾಧಿಕಾರಿ ಬಾಲಕೃಷ್ಣ ಮರೋಳಿ, ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕಣಜಾಲು, ರೋಟರಿ ಸ್ವರ್ಣದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ, ರೋಟರಿ ಸೆಂಟ್ರಲ್ ಅಧ್ಯಕ್ಷ ನವೀನ್ ನಾಕ್, ಜೆಸಿಐ ಅಧ್ಯಕ್ಷ ಸ್ವಾತಿ ಜೆ ರೈ, ರೋಟರಿಯ ಸಂಸ್ಥೆಯ ಆನಂದ, ಬಾಲಕೃಷ್ಣ ಕೊಳತ್ತಾಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಡಾ.ಸುಧಾ ಎಸ್ ರಾವ್, ಶೇಖರ್ ನಾರಾವಿ, ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ಸಂಸ್ಕಾರ ಭಾರತಿಯ ಪುತ್ತೂರು ಘಟಕದ ಅಧ್ಯಕ್ಷೆ ಪದ್ಮಾ ಆಚಾರ್, ರೋಟರಿ ಸಂಸ್ಥೆಯ ಭರತ್ ಪೈ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪದಪ್ರದಾನ ಸ್ವೀಕಾರ:
ಇನ್ನರ್‌ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆ ವೀಣಾ ಬಿ.ಕೆ ಅವರಿಗೆ ಪದಪ್ರದಾನ ಅಧಿಕಾರಿ ವೀಣಾ ಕೋಳತ್ತಾಯ ಅವರು ಕ್ಲಬ್‌ನ ಬ್ಯಾಡ್ಜ್ ಅನ್ನು ಮತ್ತು ಕಾಲರ್ ಪಟ್ಟಿಯನ್ನು ತೊಡಿಸಿ ಪದಪ್ರದಾನ ಮಾಡಿದರು. ನಿರ್ಗಮನ ಅಧ್ಯಕ್ಷೆ ಸೀಮಾ ನಾಗರಾಜ್ ಅವರು ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ರಾಜೇಶ್ವರಿ, ಉಪಾಧ್ಯಕ್ಷೆ ಟೈನಿ ದೀಪಕ್, ಐಎಸ್‌ಒ ರೂಪಲೇಖಾ, ಕೋಶಾಧಿಕಾರಿ ಸುಧಾ ಕಾರ್ಯಪ್ಪ, ಬುಲೆಟಿನ್ ಎಡಿಟರ್ ಪ್ರಮೀಳಾ ರಾವ್, ಜೊತೆ ಕಾರ್ಯದರ್ಶಿ ಸಂಧ್ಯಾ ನರಿಯೂರು, ಸಿಸಿಸಿಸಿ ಸೆನೊರಿಟಾ ಆನಂದ್, ಸಾಂಸ್ಕೃತಿಕ ನಿರ್ದೇಶಕಿ ಕೃಷ್ಣವೇಣಿ ಮುಳಿಯ, ಶೆರೋಹಸ್ ಕೊಆರ್ಡಿನೇಟರ್ ರಚನಾ ಪಡಿವಾಳ್, ನಿರ್ದೇಶಕರಾದ ರಾಜಿ ಬಲರಾಮ್, ಮೀರಾ ರೈ, ವಿದ್ಯಾ ಗೌರಿ, ಆಶಾ ಭಟ್, ಸಹನಾ ಭವಿನ್ ಅವರಿಗೆ ಪದಪ್ರದಾನ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.