ಬೀದಿ ಬದಿ ಅಕ್ರಮ ಅಂಗಡಿಗಳ ತೆರವಿಗೆ ಜೂನ್ 16ಕ್ಕೆ ಬಂದಿತ್ತು ಅದೇಶ – 1 ತಿಂಗಳ ಬಳಿಕ ನಡೆದ ಅಂಗಡಿ ತೆರವು ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭಾ ವ್ಯಾಪ್ತಿಯ ಬೀದಿ ಬದಿಯಲ್ಲಿ ಅಕ್ರಮವಾಗಿ ಅಂಗಡಿಗಳ ನಿರ್ಮಾಣಗೊಂಡಿದೆ ಎಂದು ಸಾರ್ವಜನಿಕರು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ನೀಡಿದ ದೂರಿನಂತೆ ವಾಸ್ತವ ವರದಿಗಳನ್ನು ಆಧರಿಸಿ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾ ಯೋಜನಾ ನಿರ್ದೇಶಕರಿಗೆ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದ್ದರು. ಅದರಂತೆ ಜು.23ರಂದು ನಗರಸಭಾ ವ್ಯಾಪ್ತಿಯಲ್ಲಿ ನಗರಸಭಾ ಪೌರಾಯುಕ್ತರು ಬೀದಿ ಬದಿಯ ಅಂಗಡಿಯ ಅಕ್ರಮ ನಿರ್ಮಾಣದ ತೆರವು ಕಾರ್ಯಾಚರಣೆ ನಡೆಸಿದ್ದರು.

ಮುಕ್ರಂಪಾಡಿಯ ನಿವಾಸಿಯಾಗಿರುವ ವೈದ್ಯರೊಬ್ಬರು ಸಾರ್ವಜನಿಕ ಹಿತಾಸಕ್ತಿಯಿಂದ ಪೌರಾಡಳಿತ ನಿರ್ದೇಶಕರಿಗೆ ಮತ್ತು ಪೌರಾಡಳಿತ ಸಚಿವರಿಗೆ ದೂರು ನೀಡಿದ್ದರು. ಪುತ್ತೂರು ನಗರಸಭಾ ವ್ಯಾಪ್ತಿಯ ಮುಕ್ರಂಪಾಡಿ ಎಂಬಲ್ಲಿ ಬೈಪಾಸ್ ಸರ್ಕಲ್‌ನಿಂದ ಸುಳ್ಯದ ಕಡೆಯ ಮುಖ್ಯ ರಸ್ತೆಯಲ್ಲಿ ಕೆಲವೊಂದು ಬೀದಿ ಬದಿಯ ವ್ಯಾಪಾರಿಗಳು ಕಾನೂನು ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದಾರೆ. ನೈರ್ಮಲ್ಯದ ನಿಯಮಗಳನ್ನು ಪಾಲಿಸದೆ ಪರಿಸರದ ಸ್ವಚ್ಛತೆಗೆ ಧಕ್ಕೆ ತಂದು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ರಸ್ತೆಯಲ್ಲಿ ಸಾರ್ವಜನಿಕರಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸುವುದು, ಎಲ್ಲಂದರಲ್ಲಿ ಬಿಸಾಡಿರುವ ತ್ಯಾಜ್ಯ ಆಹಾರವನ್ನು ತಿನ್ನಲು ಬರುವ ನಾಯಿಗಳಿಂದ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಂಜೆ ಹಾಗೂ ರಾತ್ರಿವೇಳೆ ಗುಂಪು ಗುಂಪಾಗಿ ರಸ್ತೆ ಬದಿಯಲ್ಲಿ ಜನರು ಹರಟೆ ಹೊಡೆಯುತ್ತಿರುವುದರಿಂದ ಕೆಲಸದಿಂದ ಮನೆಗೆ ಹಿಂದಿರುಗುವ ಮಹಿಳೆಯರಿಗೆ, ಮಕ್ಕಳಿಗೆ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ಇದರ ಜೊತೆಗೆ ಅಧಿಕೃತವಾಗಿ ಸರಕಾರಕ್ಕೆ ತೆರಿಗೆ, ನೀರಿನ ಕರ, ವಿದ್ಯುತ್ ಕರ, ಮನೆಬಾಡಿಗೆ ಪಾವತಿಸುತ್ತಿರುವ ಅಂಗಡಿ ಮಾಲಿಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ದೂರು ಅರ್ಜಿಗೆ ಸುಮಾರು 37 ಮಂದಿ ಸಹಿ ಹಾಕಿ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಆರಂಭದಲ್ಲಿ ದೂರು ಅರ್ಜಿಯನ್ನು ಪೌರಾಡಳಿತ ಸಚಿವರಿಗೆ ಮತ್ತು ರಾಜ್ಯ ಪೌರಾಡಳಿತ ನಿರ್ದೇಶನಾಲಯಕ್ಕೆ ನೀಡಿದ್ದರು. ಅವರ ದೂರಿಗೆ ಸಂಬಂಧಿಸಿ ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ದೂರನ್ನು ಪರಿಶೀಲಿಸಿ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಸಿತ್ತು.

ಜೂ.16ಕ್ಕೆ ಕ್ರಮಕೈಗೊಳ್ಳುವಂತೆ ಆದೇಶ ಬಂದಿತ್ತು:
ಅಕ್ರಮ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜೂ. 16ರಂದು ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಜಿಲ್ಲಾ ಯೋಜನಾ ನಿರ್ದೇಶಕರಿಂದ ಆದೇಶ ಬಂದಿತ್ತು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಮಾಡಿರಲಿಲ್ಲ. ಅಕ್ರಮ ಅಂಗಡಿ ಮಾಲಿಕರಿಗೆ ಅಂಗಡಿಗಳನ್ನು ಸ್ವಯಂ ತೆರವು ಗೊಳಿಸುವಂತೆ ನಗರಸಭೆಯಿಂದ ಮೌಖಿಕ ಮನವಿ ಮಾಡಲಾಗಿತ್ತು. ಲಾಕ್‌ಡೌನ್ ತೆರವಾದ ಬಳಿಕ ನಗರಸಭೆಯ ವತಿಯಿಂದ ಪತ್ರಿಕಾ ಪ್ರಕಟಣೆ ನೀಡಿ ಅಕ್ರಮ ರಚನೆಗಳನ್ನು ತೆರವುಗೊಳಿಸುವಂತೆ ನಗರಸಭೆ ಸೂಚಿಸಿತ್ತು. ಆದರೆ ಇದು ಫಲಪ್ರದವಾಗದ ಕಾರಣ ಜು.23ರಂದು ಕಾರ್ಯಾಚರಣೆ ನಡೆಸಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.