HomePage_Banner
HomePage_Banner
HomePage_Banner
HomePage_Banner

ಜು.26 ರಿಂದ ಸಮಸ್ತ ಫಾಳಿಲಾ ಪಬ್ಲಿಕ್ ಪರೀಕ್ಷೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜು. 26 ರಿಂದ ಜು. 29 ರ ತನಕ ನಾಲ್ಕು ದಿನಗಳಲ್ಲಿ ಸಮಸ್ತ ವಿಮೆನ್ಸ್ ಇಸ್ಲಾಮಿಕ್ ಆರ್ಟ್ಸ್ ಕಾಲೇಜ್ ಫಾಳಿಲಾ ಕೋರ್ಸಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪಬ್ಲಿಕ್ ಪರೀಕ್ಷೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಪಾಳಿಲ ಪರೀಕ್ಷಾ ಅಧೀಕ್ಷಕರಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.

ಸಮಸ್ತ ಅಂಗೀಕೃತ ತೊಂಭತ್ತೊಂದು ಮಹಿಳಾ ಶರೀಹತ್ ಕಾಲೇಜುಗಳು ಕಾರ್ಯಾಚರಿಸುತ್ತಿದ್ದು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಶಕ್ತಿ ನಗರ ಕೆಮ್ಮಾರ ಸಹಿತ 64 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಪಡಿಸಲಾಗಿದೆ.

ಫಾಳಿಲಾ ಪ್ರಥಮ ವರ್ಷದವರಿಗೆ 26 ರಂದು ಅಪರಾಹ್ನ 2 ಗಂಟೆಯಿಂದ ಮೊದಲ ಪರೀಕ್ಷೆ ಪ್ರಾರಂಭವಾಗಿ ನಂತರದ ದಿನಗಳಲ್ಲಿ ಬೆಳಿಗ್ಗೆ ಮತ್ತು ಅಪರಾಹ್ನ ಎರಡು ಪರೀಕ್ಷೆಗಳಂತೆ ಒಟ್ಟು ಏಳು ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ. ದ್ವಿತೀಯ ವರ್ಷದವರಿಗೆ 27ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಿ ಒಟ್ಟು ಆರು ವಿಷಯದಲ್ಲಿ ಪರೀಕ್ಷೆ ನಡೆಯಲಿದೆ.

ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಆಡಳಿತ ಸಮಿತಿ ಹಾಗೂ ಅಧ್ಯಾಪಕ ವೃಂದದವರಿಗೆ ಪರೀಕ್ಷಾ ಗೈಡೆನ್ಸ್ ಮತ್ತು ಪರೀಕ್ಷಾರ್ಥಿಗಳಿಗಿರುವ ಹಾಲ್ ಟಿಕೆಟ್ ಈಗಾಗಲೇ ನೀಡಲಾಗಿದೆ.

ಫಾಳಿಲಾ ಮಹಿಳಾ ಶಿಕ್ಷಣ ಯೋಜನೆ ಪ್ರಾರಂಭವಾಗಿ ಎರಡು ವರ್ಷ ಪೂರ್ಣಗೊಂಡು ಯಶಸ್ವಿ ಮೂರನೇ ವರ್ಷದಲ್ಲಿ ಮುಂದುವರಿಯುತ್ತಿದ್ದು ಕೋವಿಡ್ ಸನ್ನಿವೇಶದಲ್ಲಿ ಆನ್ಲೈನ್ ಶಿಕ್ಷಣವನ್ನು ನೀಡಿ ಇದೇ ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ನಡೆಯುತ್ತಿದೆ.

ಕೋವಿಡ್ ಕಾರಣವಾಗಿ ಪ್ರಸ್ತುತ ದಿನಾಂಕಗಳ ಪರೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಫಲಿತಾಂಶದ ನಂತರ ‘ಸೇ’ ಮತ್ತು ಸ್ಪೆಷಲ್ ಪರೀಕ್ಷೆಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಪಾಳಿಲ ಪರೀಕ್ಷಾ ಅಧೀಕ್ಷಕರಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.