HomePage_Banner
HomePage_Banner
HomePage_Banner
HomePage_Banner

ಬನ್ನಿ ಓಟು ಮಾಡೋಣ… ಉತ್ತಮ ಇಲಾಖೆ, ಸೇವೆಯನ್ನು ಗುರುತಿಸೋಣ – ಶಾಸಕರ 2 ಉತ್ತಮ ಕೆಲಸ, ಮಾಡಬೇಕಾದ 2 ಕೆಲಸವನ್ನು ಗುರುತಿಸೋಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಮ್ಮ ಊರು ಕಾಂಗ್ರೆಸ್ ಮುಕ್ತ, ಬಿಜೆಪಿ ಮುಕ್ತ ಅಲ್ಲ-ಭ್ರಷ್ಟಾಚಾರ ಮುಕ್ತವಾಗಲಿ
  • 75ನೇ ಸ್ವಾತಂತ್ರ್ಯದಂದು ರಸ್ತೆಗಿಳಿದು ಶುಭಾಶಯ ಹಂಚುತ್ತಾ ಸಂಭ್ರಮಿಸೋಣ

If Sadhguru become PM? What would Happen…
ಸದ್ಗುರು ಜಗ್ಗು ವಾಸುದೇವರು ಪ್ರಧಾನಿಯಾದರೆ ಏನಾಗುತ್ತದೆ ಎಂಬ ಸಿನಿಮಾ ನಟ ಅನುಪಮ್ ಖೇರ್ ಪ್ರಶ್ನೆಗೆ ಸದ್ಗುರುರವರ ಉತ್ತರವನ್ನು ನೀವು ನೋಡಲೇಬೇಕು. ಸಂಪದ್ಭರಿತ ನಮ್ಮ ದೇಶ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದಿರಲು ಭ್ರಷ್ಟಾಚಾರವೇ ನಮ್ಮ ಸಮಸ್ಯೆ ಎಂದಿದ್ದಾರೆ. ಜನರು ಓಟು ಹಾಕಿ ಸುಮ್ಮನೆ ಕುಳಿತುಕೊಳ್ಳುವುದಲ್ಲ, ಪ್ರಜಾಪ್ರಭುತ್ವದ ಆಡಳಿತದಲ್ಲಿ ಭಾಗಿಯಾಗಬೇಕು. ಸರಕಾರ, ಜನಪ್ರತಿನಿಧಿಗಳು ಜನರನ್ನು ತೊಡಗಿಸಿಕೊಳ್ಳಬೇಕು. ಕಾನೂನು ಪಾಲನೆಯೇ ಆಡಳಿತವಲ್ಲ. ಯಾವುದೇ ಕಾರ್ಯಕ್ರಮವನ್ನು ಸರಕಾರ ಒಂದು ಮೂವ್‌ಮೆಂಟ್ ಆಗಿ ಪರಿವರ್ತಿಸಬೇಕು ಎಂದಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಕ್ಕಳಿಗೆ, ಗರ್ಭಿಣಿಯರಿಗೆ ಮೊಟ್ಟೆಯ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ವಿವರಣೆಗಳೂ ಟಿವಿ, ಮಾಧ್ಯಮಗಳಲ್ಲಿ ಬರುತ್ತಾ ಇದೆ. (ಯಡಿಯೂರಪ್ಪ ರಾಜಿನಾಮೆ ಕೊಟ್ಟಿದ್ದಾರೆ ಆದರೆ ಭ್ರಷ್ಟಾಚಾರದ ಕಾರಣಕ್ಕೆ ಅಲ್ಲ) ಅದು ನಮಗೆ ಏನೂ ಅನಿಸುವುದಿಲ್ಲ ಯಾಕೆಂದರೆ? ಅದರ ವಿರುದ್ಧ ನಮಗೆ ಏನೇನೂ ಮಾಡಲು ಸಾಧ್ಯವಿಲ್ಲ, ಭ್ರಷ್ಟಾಚಾರ ಸಾರ್ವತ್ರಿಕ, ನಾವು ಅಸಹಾಯಕರು ಎಂಬ ಭಾವನೆ ನಮ್ಮಲ್ಲಿದೆ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದಾಗ ಅದನ್ನು ಮುಕ್ತ ಮಾಡಲು ಜನರು ಬಿಜೆಪಿಗೆ ಓಟು ಕೊಟ್ಟರು ಆಡಳಿತ ನೀಡಿದರು. ಈಗ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದನ್ನೇನು ಮಾಡುವುದು ಎಂಬ ಪ್ರಶ್ನೆ ಜನರ ಮುಂದಿದೆ. ಬಿಜೆಪಿ ಮುಕ್ತವಾಗಲಿ ಎಂದು ಕಾಂಗ್ರೆಸಿಗರು ಕರೆ ಕೊಡುತ್ತಿದ್ದಾರೆ. ಅದು ಸರಿಯೇ?. ಇಲ್ಲಿ ಕಾಂಗ್ರೆಸ್ ಮುಕ್ತ ಅಥವಾ ಬಿಜೆಪಿ ಮುಕ್ತ ಎಂದು ಹೇಳಿ ಪ್ರಯೋಜನವಿಲ್ಲ. ಭ್ರಷ್ಟಾಚಾರ ಮುಕ್ತ ಎಂದಾಗಬೇಕು ಇಲ್ಲದಿದ್ದರೆ ಯಾರು ಬಂದರೂ ಒಂದೇ ಆಗುತ್ತದೆ. ನಮ್ಮನ್ನು ಮುಕ್ತರನ್ನಾಗಿ ಮಾಡಿ ಬಿಡುತ್ತಾರೆ. ಅದಕ್ಕಾಗಿ ಮಹಾತ್ಮ ಗಾಂಧಿ ಆಶಯದಂತೆ, ಸದ್ಗುರು ಜಗ್ಗು ವಾಸುದೇವ್ ಹೇಳಿದಂತೆ, ಈ ಹಿಂದಿನ ಅನೇಕ ವರ್ಷಗಳಿಂದಲೂ ಜನರನ್ನು ತೊಡಗಿಸಿ, ಜನಾಧಿಕಾರವನ್ನು ತಂದು ಭ್ರಷ್ಟಾಚಾರದ ವಿರುದ್ಧ ಜನಾಂದೋಲನವನ್ನು ಮಾಡಲು `ಸುದ್ದಿ’ ಪ್ರಯತ್ನಿಸುತ್ತಿದೆ.

ಫಿರಂಗಿಗಳ ಆಡಳಿತ ಇನ್ನಿಲ್ಲ… ನಾವು ಗುಲಾಮರಲ್ಲ-ಸ್ವತಂತ್ರರು
ಈ ಸಲದ ೭೫ನೇ ಸ್ವಾತಂತ್ರ್ಯೋತ್ಸವ ಈ ಜನಾಂದೋಲನಕ್ಕೆ ಶಕ್ತಿ ತುಂಬಬಲ್ಲುದು. 1947ರಲ್ಲಿ ಸ್ವಾತಂತ್ರ್ಯ ದೊರಕಿದಾಗ ಜನರು ನಾವು ಇನ್ನು ಗುಲಾಮರಲ್ಲ, ಸ್ವತಂತ್ರರಾದೆವು, ಫಿರಂಗಿಗಳ(ಬ್ರಿಟಿಷರ) ಆಡಳಿತ ಇನ್ನಿಲ್ಲ. ಇನ್ನು ನಮ್ಮದೇ ಆಡಳಿತ ಎಂದು ಸಿಹಿ ಹಂಚುತ್ತಾ ಮೆರವಣಿಗೆ ಮಾಡುತ್ತಾ ಪರಸ್ಪರ ಶುಭಾಶಯ ಹಂಚಿಕೊಳ್ಳುತ್ತಾ ಸಂಭ್ರಮಿಸಿದರು. ದೇಶಕ್ಕೆ ಈಗ 75ನೇ ಸ್ವಾತಂತ್ರ್ಯ. ಅಂದಿಗಿಂತ ಮಿಗಿಲಾಗಿ ಸಂಭ್ರಮಿಸಬೇಡವೇ? ಸ್ವಾತಂತ್ರ್ಯದ ನಡಿಗೆ, ಓಟ-ಆಟ-ಊಟ, ಸಾಂಸ್ಕೃತಿಕ ಕಾರ್ಯಕ್ರಮ, ಜನಸೇವಕರಿಗೆ ಸನ್ಮಾನ, ಗುರುತಿಸುವಿಕೆ ಮಾಡುವ ಮೂಲಕ ಒಟ್ಟಾಗಿ ಸೇರಿ ಪರಸ್ಪರ ಶುಭಾಶಯ, ಸಂತೋಷ ಹಂಚಿಕೊಳ್ಳುವ. ಒಟ್ಟಾಗಿ ಸ್ವಾತಂತ್ರ್ಯದ ಘೋಷಣೆ ಕೂಗುವ. ಆ ಮೂಲಕ ಸ್ವಾತಂತ್ರ್ಯದ ಧ್ವನಿ ಎಲ್ಲಡೆ ಮೊಳಗುವಂತೆ ಮಾಡುವ ಸಂಭ್ರಮ ನಮ್ಮದಾಗಲಿ.

ಹೊಸ ವರ್ಷವನ್ನು ಸ್ವಾಗತಿಸುವಾಗ ಡಿಸೆಂಬರ್ 31ರ ರಾತ್ರಿ 12 ಗಂಟೆ ಕಳೆದ ಕೂಡಲೇ ಹೆಚ್ಚಿನವರು ವಿಶೇಷವಾಗಿ ಯುವ ಜನಾಂಗ ಹೊಸ ವರ್ಷಕ್ಕೆ ಸ್ವಾಗತ ಎಂದು ಕೂಗುತ್ತಾ ತಮ್ಮ ಮನೆಯವರಿಗೆ, ತಮ್ಮವರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಶುಭಾಶಯ ಹಂಚುತ್ತಾರೆ. ದೂರದಲ್ಲಿರುವವರಿಗೂ ಫೋನ್, ಅಂತರ್ಜಾಲದ ಮೂಲಕ ಶುಭಾಶಯ ಹಂಚುತ್ತಾರೆ. ಕೆಲವರು ಕುಣಿದು ಕುಪ್ಪಳಿಸುತ್ತಾರೆ. ಗುರುತು ಪರಿಚಯ ಇಲ್ಲದವರಿಗೂ ಹೊಸ ವರ್ಷದ ಶುಭಾಶಯ ಹಂಚಲ್ಪಡುತ್ತದೆ. ಯುಗಾದಿಯನ್ನು ಹೊಸ ವರ್ಷವಾಗಿ ಆಚರಿಸುವವರು ಪೂಜೆಯಿಂದ ಪ್ರಾರಂಭಿಸುತ್ತಾರೆ, ಸಂಭ್ರಮಿಸುತ್ತಾರೆ, ಸಿಹಿ ಮತ್ತು ಶುಭಾಶಯ ಹಂಚಿಕೊಳ್ಳುತ್ತಾರೆ. ಹೊಸ ವರ್ಷದಿಂದ ಒಳಿತಾಗಲಿ ಎಂದು ಹಾರೈಸುತ್ತಾರೆ. ಅದಕ್ಕಿಂತ ಮಿಗಿಲಾಗಿ ಈ ವರ್ಷದ 75ನೇ ಸ್ವಾತಂತ್ರ್ಯವನ್ನು ಆಚರಿಸಬೇಡವೇ?.

ಸ್ವಾತಂತ್ರ್ಯದ ನಡಿಗೆ ಸಮುದ್ರದ ಅಲೆಯಂತೆ ಕಂಡರೆ, ಸ್ವಾತಂತ್ರ್ಯದ ಘೋಷಣೆ ಮುಗಿಲು ಮುಟ್ಟಲಿಕ್ಕಿಲ್ಲವೆ…
ನಮ್ಮೂರಿನ ಪ್ರತಿಯೊಬ್ಬರೂ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು 7 ಗಂಟೆಗೆ ಮನೆಯವರಿಗೆ ಶುಭಾಶಯ ನೀಡುತ್ತಾ ಹೊರಗೆ ಬಂದು ರಸ್ತೆಗಿಳಿದು ತಮ್ಮ ನೆರೆಯವರಿಗೆ, ಸ್ನೇಹಿತರಿಗೆ, ಊರಿನವರಿಗೆ, ಬಂಧುಗಳಿಗೆ ಸ್ವಾತಂತ್ರ್ಯದ ಶುಭಾಶಯ ಹಂಚಿದರೆ ಅದಕ್ಕಾಗಿ ಘೋಷಣೆಯೊಂದಿಗೆ ಸ್ವಾತಂತ್ರ್ಯದ ನಡಿಗೆ ಮತ್ತು ಓಟ ಮಾಡಿದರೆ ಅದು ಹೇಗೆ ಕಾಣಬಹುದು. ಸಮುದ್ರದ ಅಲೆಯನ್ನು ಮೀರಿ ಕಾಣಲಿಕ್ಕಿಲ್ಲವೇ?. ಅಂತೆಯೇ ಊರಿನೆಲ್ಲರೂ ಏಕ ಕಾಲದಲ್ಲಿ ಸ್ವಾತಂತ್ರ್ಯದ ಘೋಷಣೆ ಕೂಗಿದರೆ ಆ ಧ್ವನಿ ಊರಿನ ಉದ್ದಗಲಕ್ಕೂ ಹರಡಿ ಮುಗಿಲನ್ನು ಮುಟ್ಟಲಿಕ್ಕಿಲ್ಲವೇ? ನಮ್ಮ ತಾಲೂಕಿನ ಎಲ್ಲಾ ಕಡೆ ಏಕ ಕಾಲದಲ್ಲಿ ಆ ನಡಿಗೆ ಅಥವಾ ಓಟ ಮತ್ತು ಘೋಷಣೆ ನಡೆದರೆ ಹೇಗಿದ್ದೀತು?. ಅದನ್ನು ರೆಕಾರ್ಡ್ ಮತ್ತು ಚಿತ್ರೀಕರಣ ಮಾಡಿದರೆ ಅದ್ಭುತವಾದ ಜನರ ಸಂಘಟನೆ ಕಾಣಲಿಕ್ಕಿಲ್ಲವೇ? ಊರಿನ ಎಲ್ಲರೂ ಪಕ್ಷ, ಜಾತಿ, ಅಧಿಕಾರದ ಬೇಧ ಬಿಟ್ಟು ಅಭಿವೃದ್ಧಿ ಕಡೆ ಚಿಂತನೆ ನಡೆಸಿದರೆ ಉತ್ತಮ ಕೆಲಸ ಮಾಡಿದ ಅಧಿಕಾರಿಯನ್ನು, ಜನಪ್ರತಿನಿಧಿಯನ್ನು ಗುರುತಿಸಿದರೆ ಯಾರಿಗಾದರೂ ಭ್ರಷ್ಟಾಚಾರ ಮಾಡಲು ಮನಸ್ಸು ಬಂದೀತೇ?, ಧೈರ್ಯವಾದೀತೇ?. ನಮ್ಮ ಊರು, ತಾಲೂಕು ಭ್ರಷ್ಟಾಚಾರ ಮುಕ್ತವಾಗಿ ಅಭಿವೃದ್ಧಿ ಹೊಂದಲಿಕ್ಕಿಲ್ಲವೇ?. ಯಾರಿಗೇ ಆದರೂ ನಮ್ಮ ಸ್ವಾತಂತ್ರ್ಯ ಕಸಿಯುವ ಧೈರ್ಯ ಬಂದೀತೇ?

ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿದರೆ ಇನ್ನೂ ಹೆಚ್ಚು ಉತ್ತಮ ಕೆಲಸ ಮಾಡುತ್ತಾರೆ. (ಭ್ರಷ್ಟಾಚಾರ ಕಡಿಮೆಯಾಗುತ್ತದೆ) – ಸರ್ ಬೆಂಜಮಿನ್ ಫ್ರಾಂಕ್ಲಿನ್
ಈ ಮೇಲಿನ ಆಂದೋಲನದ ಭಾಗವಾಗಿ ಉತ್ತಮ ಕೆಲಸ ಮಾಡಿದವರನ್ನು ಜನರ ಓಟಿನ ಮೂಲಕ ಗುರುತಿಸಲಿದ್ದೇವೆ. ಉತ್ತಮ ಕೆಲಸ ಮಾಡಿದವರನ್ನು ಗುರುತಿಸುವುದರಿಂದ ಅವರು ಇನ್ನೂ ಹೆಚ್ಚು ಉತ್ತಮ ಕೆಲಸ ಮಾಡುತ್ತಾರೆ. ಉಳಿದವರಿಗೂ ಪ್ರೇರಣೆಯಾಗುತ್ತಾರೆ. ಕೆಲಸ ಮಾಡದವರು ಮಾನಸಿಕ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಸರ್. ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ದನ್ನು ಕಳೆದ ಬಾರಿ ಉಲ್ಲೇಖಿಸಿದ್ದೇನೆ. ಅದನ್ನು ಸೈಕಾಲೋಜಿಸ್ಟ್ ಗಳು ಹೇಳುತ್ತಾರೆ. ನಮ್ಮ ತಾಲೂಕಿನಲ್ಲಿ ಜನರ ಸೇವೆಗಾಗಿ ೩೦ ಇಲಾಖೆಗಳಿವೆ. ಅದರಲ್ಲಿ ಹಲವಾರು ಜನರು ಉತ್ತಮ ಕೆಲಸ ಮಾಡುತ್ತಾರೆ. ಅಂತವರನ್ನು ಇಡೀ ತಾಲೂಕಿನ ಜನರು ಮೆಚ್ಚಿ ಗುರುತಿಸಿದರೆ ಅವರು ಜನಮೆಚ್ಚಿದ ಅಧಿಕಾರಿ/ಸಿಬ್ಬಂದಿಯಾಗುತ್ತಾರೆ. ಜನಮೆಚ್ಚಿದ ಇಲಾಖೆಯು ಆಗುತ್ತದೆ. ಆ ಗುರುತಿಸುವಿಕೆಯಿಂದ ತಾಲೂಕಿನ ಎಲ್ಲಾ ಇಲಾಖೆಯವರು ಈಗಿನದಕ್ಕಿಂತ ಹೆಚ್ಚು ಸೇವೆ ನೀಡುವಂತಾದರೆ ಅಲ್ಲಿ ಭ್ರಷ್ಟಾಚಾರಕ್ಕೆ ಎಡೆಯೇ ಇರುವುದಿಲ್ಲ. ಅದು ಜನರಿಗೆ ಸ್ವಾತಂತ್ರ್ಯದ ಕೊಡುಗೆಯೇ ಆಗುತ್ತದೆ. ಅದೇ ರೀತಿ ಶಾಸಕರು ಮಾಡಿರುವ ಎರಡು ಉತ್ತಮ ಕೆಲಸಗಳನ್ನು ಗುರುತಿಸಿದರೆ ಅದು ಜನಮೆಚ್ಚಿದ ಕೆಲಸವಾಗುತ್ತದೆ. ಶಾಸಕರಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಶಾಸಕರು ಮಾಡಬೇಕಾದ ಅಥವಾ ಬಾಕಿಯಾಗಿರುವ ಎರಡು ಕೆಲಸಗಳನ್ನು ಜನರು ಓಟಿನ ಮೂಲಕ ಗುರುತಿಸಿದರೆ ಶಾಸಕರಿಗೆ ಮಾತ್ರವಲ್ಲ ಊರಿನ ಎಲ್ಲರಿಗೂ, ಅಧಿಕಾರಿಗಳಿಗೂ ಅದು ಜನರು ಬಯಸಿದ ಅಗತ್ಯದ ಕೆಲಸ ಎಂದು ಗೊತ್ತಾಗುತ್ತದೆ. ಅದು ನಡೆದೇ ನಡೆಯುತ್ತದೆ. ಅಂದರೆ ಶಾಸಕರಿಂದ, ಅಧಿಕಾರಿಗಳಿಂದ ಜನತೆ ತಮಗೆ ಬೇಕಾದ ಕೆಲಸ ಮಾಡಿಸಿದಂತಾಗುತ್ತದೆ. ಜನಪ್ರತಿನಿಧಿಗಳಿಂದ ಪ್ರಜೆಗಳಿಗೆ ಇದಕ್ಕಿಂತ ದೊಡ್ಡ ಸ್ವಾತಂತ್ರ್ಯದ ಕೊಡುಗೆ ಇದೆಯೇ?! ಅದರೊಂದಿಗೆ ಆಯಾ ಪಂಚಾಯತಿನ ಜನರೇ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುವ 10 ಜನರನ್ನು ತಾವೇ ಆಯ್ಕೆ ಮಾಡಿ ಗುರುತಿಸಿದರೆ ಅದಕ್ಕಿಂತ ದೊಡ್ಡ ಸನ್ಮಾನ ಯಾವುದು?! ಊರಿನ ಎಲ್ಲರೂ ಸೇರಿ ಒಂದಾಗಿ ಯಾವುದೇ ಭೇದ-ಭಾವವಿಲ್ಲದೆ ಒಂದೇ ಕುಟುಂಬದವರಂತೆ ಒಂದಾಗಿ ನಡೆದರೆ, ಓಡಿದರೆ, ತಿಂಡಿ ತಿಂದರೆ, ಊಟ ಮಾಡಿದರೆ, ಆಟ ಆಡಿದರೆ, ಘೋಷಣೆ ಕೂಗಿದರೆ, ಸಂಭ್ರಮಿಸಿದರೆ ಅದಕ್ಕಿಂತ ದೊಡ್ಡ ಗ್ರಾಮ ಸ್ವರಾಜ್ಯದ ಪ್ರದರ್ಶನ ಸಾಧ್ಯವೇ? ಈ ಊರು ನಮ್ಮದು ಇಲ್ಲಿಯ ನೀರು, ನೆಲ, ವಾಯು ಮಾತ್ರವಲ್ಲ ಎಲ್ಲಾ ಸಂಪತ್ತು ನಮ್ಮದು. ಅದರ ರಕ್ಷಣೆ ಅಭಿವೃದ್ಧಿ ನಮ್ಮ ಹಕ್ಕು, ಜವಾಬ್ದಾರಿ ಎಂದು ಒಂದಾಗಿ ಘೋಷಿಸಿದರೆ ಊರು ಅಭಿವೃದ್ಧಿಯಾಗಲಿಕ್ಕಿಲ್ಲವೇ?. ಸ್ವಾತಂತ್ರ್ಯ ನಮ್ಮದಾಗಿಯೇ ಉಳಿಯಲಿಕ್ಕಿಲ್ಲವೇ? ಅದಕ್ಕಿಂತ ದೊಡ್ಡ ಜನಾಧಿಕಾರವಿದೆಯೇ? ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಎಂದು ಹೇಳಿಕೊಳ್ಳಬಹುದಲ್ಲವೇ?. ಈ ಮೇಲಿನ ವಿಷಯ ನಡೆದರೆ ಅದಕ್ಕಿಂತ ದೊಡ್ಡ ಸ್ವಾತಂತ್ರ್ಯದ ಕೊಡುಗೆ ಯಾವುದು? ನಾವು ಸ್ವತಂತ್ರರು, ಸ್ವಾತಂತ್ರ್ಯ ಭಾರತ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಲ್ಲವೆ?

ಜನರಿಗೆ ಓಟು ನೀಡಲು ಇಲಾಖೆಗಳ, ಸಿಬ್ಬಂದಿಗಳ, ಶಾಸಕರ ಕೆಲಸಗಳ ಮಾಹಿತಿ ವೆಬ್‌ಸೈಟ್‌ನಲ್ಲಿ, ಸುದ್ದಿ ಪ್ರತಿನಿಧಿಗಳಲ್ಲಿ ಲಭ್ಯ
ಉತ್ತಮ ಕೆಲಸ ಮಾಡಿದ ಇಲಾಖೆಯನ್ನು, ಇಲಾಖೆ ಸಿಬ್ಬಂದಿಯನ್ನು, ಜನರ ಓಟಿನ ಆಧಾರದಲ್ಲಿ ಗುರುತಿಸಲಿದ್ದೇವೆ ಎಂದು ಹೇಳಿದ್ದೇವೆ. ಅದನ್ನು ಮಾಡಲಿಕ್ಕಾಗಿ ತಾಲೂಕಿನ ಪ್ರತಿಯೊಂದು ಇಲಾಖೆಯ ಪಟ್ಟಿಯನ್ನು ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಹೆಸರು, ಹುದ್ದೆ, ಸಾಧ್ಯವಾದರೆ ಪೋಟೋದೊಂದಿಗೆ ಸುದ್ದಿ ಪತ್ರಿಕೆಯಲ್ಲಿ ಮತ್ತು ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದ್ದೇವೆ. ಅದನ್ನು ಕೇಳಿದವರಿಗೆ ಮಾಹಿತಿಗಾಗಿ ವಾಟ್ಸಪ್ ಮೂಲಕ ಕಳುಹಿಸಲಾಗುವುದು. ಅಂತೆಯೇ ಸಂಪೂರ್ಣ ಮಾಹಿತಿಯನ್ನು ಪ್ರತಿಯೊಂದು ಪಂಚಾಯತ್ ವ್ಯಾಪ್ತಿಯಲ್ಲಿ ಸುದ್ದಿ ಸೆಂಟರ್ ಮತ್ತು ಸುದ್ದಿ ಪ್ರತಿನಿಧಿಗಳ ಮೂಲಕ ದೊರಕುವಂತೆ ಮಾಡಲಾಗುವುದು. ಓಟು ಮಾಡುವ ವಿಧಾನವನ್ನು ಮುಂದಿನ ವಾರ ನೀಡಲಾಗುವುದು.

ಶಾಸಕರ ಉತ್ತಮ ಜನಮೆಚ್ಚಿದ ಕೆಲಸವನ್ನು, ಮಾಡಬೇಕಾದ ಕೆಲಸವನ್ನು ಜನರು ತಮ್ಮ ಹೆಸರು, ವಿಳಾಸ ಮತ್ತು ಫೋನ್ ನಂಬರ್‌ನೊಂದಿಗೆ ಕಾಗದದಲ್ಲಿ ಬರೆದು ಸುದ್ದಿ ಪ್ರತಿನಿಧಿ, ಸೆಂಟರ್, ಏಜೆಂಟ್‌ರಲ್ಲಿ ನೀಡಬಹುದು ಅಥವಾ ಸುದ್ದಿ ಕಚೇರಿಯ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಡಬಹುದು. ಅದರ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. ಈ ಪ್ರಕ್ರಿಯೆ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಈ ಮೂರು ತಾಲೂಕಿನಲ್ಲಿ ನಡೆಯಲಿದ್ದು ಆಗಸ್ಟ್ ೧೫ರ ಅಪರಾಹ್ನ ಜನಮೆಚ್ಚಿದ ಅಧಿಕಾರಿ/ಸಿಬ್ಬಂದಿ, ಜನಮೆಚ್ಚಿದ ಇಲಾಖೆ, ಶಾಸಕರ ಜನಮೆಚ್ಚಿದ ಕೆಲಸ, ಜನರು ಬಯಸುವ ಕೆಲಸ ಈ ಎಲ್ಲಾ ರಿಸಲ್ಟ್‌ಗಳನ್ನು, ಪ್ರತಿಯೊಂದು ಪಂಚಾಯತಿನ ಸಾಧಕರ ಪಟ್ಟಿಯನ್ನು ಆಯಾ ತಾಲೂಕಿನ ಸ್ಟುಡಿಯೋದಲ್ಲಿ ಚಾನೆಲ್‌ನ ಮೂಲಕ ಬಿಡುಗಡೆಗೊಳಿಸಲಾಗುವುದು. ಮರುದಿನದ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಈ ಮೇಲಿನ ಓಟಿನ ವಿವರಗಳನ್ನು, ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ನೀಡಲಾಗುವುದು. -ಸಂ

ಶಾಸಕರ ಎರಡು ಉತ್ತಮ ಕೆಲಸ, ಮಾಡಬೇಕಾದ ಎರಡು ಕೆಲಸಗಳನ್ನು ಕಳುಹಿಸಿ

ಪುತ್ತೂರಿನ ಶಾಸಕರು ಇದುವರೆಗೂ ಪುತ್ತೂರು ತಾಲೂಕಿನಲ್ಲಿ ಮಾಡಿದ ಎರಡು ಉತ್ತಮ ಕೆಲಸ ಹಾಗೂ ಇನ್ನು ಮಾಡಬೇಕಾದ ಎರಡು ಕೆಲಸವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ
ಸುದ್ದಿ ಬಿಡುಗಡೆ ಪತ್ರಿಕಾ ಕಛೇರಿ ಹಳೆ ಅಂಚೆ ಕಛೇರಿ ಬಳಿ ಮುಖ್ಯ ರಸ್ತೆ ಪುತ್ತೂರು, ದ.ಕ.
ಅಥವಾ ಈ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಿ
99864 16802
ಮೇಲಿನವುಗಳಲ್ಲಿ ಆಯ್ಕೆಯಾದ ಪ್ರಮುಖ ಹತ್ತು ಕೆಲಸಗಳನ್ನು ವೋಟಿಗೆ ಹಾಕಿ ಮುಂದೆ ಪ್ರಕಟಿಸಲಾಗುವುದು.

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸುದ್ದಿಯ ಸಾಥ್

1947 ರಲ್ಲಿ ಸ್ವಾತಂತ್ರ್ಯ ದೊರಕಿದಾಗ ಎಲ್ಲರೂ ರಸ್ತೆಗಿಳಿದು ನಾವು ಸ್ವತಂತ್ರರು ಎಂದು ಕುಣಿದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ- ಈ ಸಲ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಅಂದಿನಂತೆ ಎಲ್ಲರೂ ಸೇರಿ ಸಂಭ್ರಮಿಸೋಣವೇ?

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ತಾಲೂಕಿನಲ್ಲಿ ಜನಮೆಚ್ಚಿದ ಅಧಿಕಾರಿ/ಸಿಬ್ಬಂದಿಯನ್ನು ಓಟಿನ ಮೂಲಕ ಗುರುತಿಸುವ ಕಾರ್ಯಕ್ರಮ- ಇಲ್ಲಿದೆ ಇಲಾಖಾ ಮಾಹಿತಿ

About The Author

Related posts

1 Comment

  1. ನಿರಂಜನ್ ಅಜ್ಜಾವರ

    ಸುದ್ದಿ ಬಳಗದ ಈ ಕಾರ್ಯ ಶ್ಲಾಘನೀಯ

    Reply

Leave a Reply to ನಿರಂಜನ್ ಅಜ್ಜಾವರ Cancel Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.