ಮುಂಡೂರು: ಕುಕ್ಕಿನಡ್ಕ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೈತರಿಂದಾಗಿ ದೇಶದ ಸಂಸ್ಕೃತಿ ಪರಂಪರೆ ಉಳಿಯುತ್ತಿದೆ-ಮಠಂದೂರು

ಪುತ್ತೂರು: ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಆಶ್ರಯದಲ್ಲಿ ಗದ್ದೆಗಿಳಿಯೋಣ ಬನ್ನಿ ಕಾರ್ಯಕ್ರಮ ಜು.೨೫ರಂದು ನಡೆಯಿತು.

ಶಾಸಕ ಸಂಜೀವ ಮಠಂದೂರು ಸೇರಿದಂತೆ ಗಣ್ಯರು, ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಹಾಗೂ ಊರವರು ಗದ್ದೆಗಿಳಿದು ಉಳುಮೆ ಹಾಗೂ ನೇಜಿ ನಾಟಿ ಮಾಡಿದರು. ಆಟಿ ಕಳೆಂಜ ಸಾಂಪ್ರದಾಯಿಕ ನೃತ್ಯ ಗಮನ ಸೆಳೆಯಿತು.

ಬಳಿಕ ನಡೆದ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು ಮಾತನಾಡಿ ರೈತ ಈ ದೇಶದ ಬೆನ್ನೆಲುಬಾಗಿದ್ದು ಈ ದೇಶದ ಸಾಂಸ್ಕೃತಿಕ ಪರಂಪರೆ ಉಳಿಯುವುದು ನೇಗಿಲ ಯೋಗಿ ಎಂದು ಕರೆಯಲ್ಪಡುವ ರೈತರಿಂದಾಗಿದೆ. ಮುಂದಿನ ತಲೆಮಾರಿನವರಿಗೆ ಬಿರಿಯಾನಿ ಗೊತ್ತಿರಬಹುದು ಆದರೆ ಅಕ್ಕಿ ಗೊತ್ತಿರಲಿಕ್ಕಿಲ್ಲ, ಅಕ್ಕಿಯಿಂದಲೇ ಬಿರಿಯಾನಿ ಮಾಡುತ್ತೇವೆ ಎನ್ನವುದನ್ನು ತಿಳಿಯಬೇಕಿರುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಇಡೀ ಊರನ್ನು ಒಗ್ಗೂಡಿಸಿಕೊಂಡು ಗದ್ದೆಗಿಳಿಯೋಣ ಬನ್ನಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕುಕ್ಕಿನಡ್ಕ ದೇವಸ್ಥಾನದವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಭತ್ತ ನೋಡಲು ಘಟ್ಟ ಪ್ರದೇಶಗಳಿಗೆ ಹೋಗಬೇಕಾದೀತು-ಕೇಶವ ಪ್ರಸಾದ್
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ ನಾವಿಂದು ಹಮ್ಮಿಕೊಳ್ಳುತ್ತಿರುವ ಭತ್ತ ಬೆಳೆಯೋಣ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದ್ದು ಈ ರೀತಿಯ ಕಾರ್ಯಕ್ರಮಗಳ ಮೂಲಕ ಭತ್ತ ಬೆಳೆಯದೇ ಹೋದಲ್ಲಿ ನಮ್ಮ ಮುಂದಿನ ತಲೆಮಾರು ಭತ್ತವನ್ನು ನೋಡಲು ನಾವು ಘಟ್ಟ ಪ್ರದೇಶಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಸಂಪ್ರದಾಯಗಳನ್ನು ಉಳಿಸುವ ಕಾರ್ಯವಾಗಬೇಕಿದೆ-ಡಾ.ಸೀತರಾಮ ಭಟ್
ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತರಾಮ ಭಟ್ ಕಲ್ಲಮ ಮಾತನಾಡಿ ನಮ್ಮ ಹಿರಿಯರು ಭತ್ತವನ್ನು ಬೆಳೆಯುವ ಮೂಲಕ ಅದರಲ್ಲಿ ಖುಷಿ ಸಂತೋಷವನ್ನು ಪಡೆಯುತ್ತಿದ್ದರು. ಮುಂದಕ್ಕೂ ಆ ಸಂಪ್ರದಾಯವನ್ನು ಉಳಿಸುವ ಕಾರ್ಯ ನಮ್ಮಿಂದಾಗಬೇಕಿದೆ ಎಂದು ಹೇಳಿದರು. ನಂತರ ಡಾ. ಸೀತರಾಮ ಭಟ್ ಅವರು ಕುಕ್ಕಿನಡ್ಕ ದೇವಸ್ಥಾನದ ಆಶ್ರಯದಲ್ಲಿ ಭತ್ತ ಬೆಳೆಯೋಣ ಕಾರ್ಯಕ್ರಮದ ಬಗ್ಗೆ ಹಾಡಿದ ಸ್ವರಚಿತ ಹಾಡು ಎಲ್ಲರ ಗಮನ ಸೆಳೆಯಿತು.

ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾಗಿದೆ-ಹಸಂತಡ್ಕ
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ದೇವಸ್ಥಾನ ಮತ್ತು ಗದ್ದೆಗೆ ಹತ್ತಿರದ ಸಂಬಂಧವಿದೆ, ಪುತ್ತೂರಿನಲ್ಲಿ ೨೪ ದೇವಸ್ಥಾನಗಳನ್ನು ಗದ್ದೆ ಬೇಸಾಯಕ್ಕೆ ಜೋಡಿಸಿಕೊಳ್ಳಲಾಗಿದೆ. ಆಧುನಿಕತೆಯ ಜೊತೆಗೆ ಯಾಂತ್ರೀಕರಣಗಳನ್ನು ಸೇರಿಸಿಕೊಂಡು ಪರಂಪರೆಯನ್ನು, ಸನಾತನ ಧರ್ಮವನ್ನು, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವೆಲ್ಲಾ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಕೃಷಿ ಮತ್ತು ಆಧ್ಯಾತ್ಮಿಕತೆ ಒಟ್ಟಿಗೆ ಸಾಗಬೇಕಾಗಿದೆ-ಅರುಣ್ ಪುತ್ತಿಲ
ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ನಾವು ಜಗತ್ತಿಗೆ ನೇತೃತ್ವವನ್ನು ಕೊಡುವ ಶಕ್ತಿಯನ್ನು ಪಡೆದುಕೊಂಡಿದ್ದೇವೆ, ಆದರೆ ನಮ್ಮ ಹಿಂದಿನ ಸಂಪ್ರದಾಯ ಪರಂಪರೆಗಳು, ಗತ ವೈಭವಗಳು ಮರೆತು ವೈಜ್ಞಾನಿಕವಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡಿ ಬದುಕುವಂತಹ ಸನ್ನಿವೇಶದಲ್ಲಿ ನಾವು ಬದಲಾಗಬೇಕು ಎನ್ನುವ ಸಂದೇಶ ನೀಡುವುದಕ್ಕಾಗಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ, ದೇವಸ್ಥಾನ ಮತ್ತು ಕೃಷಿ ಜೊತೆಯಾಗಿ ಸಾಗಬೇಕಾದ ಅನಿವಾರ್ಯತೆಯಿದ್ದು ದೇವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಪ್ರಾಶಸ್ತ್ಯ ನೀಡಿದಂತೆ ಕೃಷಿಗೂ ಆದ್ಯತೆ ನೀಡಬೇಕಾಗಿದೆ ಕೃಷಿ ಮತ್ತು ಆಧ್ಯಾತ್ಮಿಕತೆ ಒಟ್ಟೊಟ್ಟಿಗೆ ಸಾಗಿದರೆ ನಾವು ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ ಎಂದು ಹೇಳಿದರು.

ಇಚ್ಛಾಶಕ್ತಿಯಿದ್ದರೆ ಏನನ್ನೂ ಮಾಡಬಹುದು-ಬಾಲಕೃಷ್ಣ ಕಣ್ಣರಾಯ
ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಕಣ್ಣರಾಯ ಮಾತನಾಡಿ ಇಚ್ಛಾ ಶಕ್ತಿಯೊಂದಿದ್ದರೆ ಯಾವುದೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬಹುದು ಎನ್ನವುದಕ್ಕೆ ನಮ್ಮ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು.

ಪ್ರೀತಿಯ ಮನೋಭಾವ ಜಾಸ್ತಿಯಾಗುತ್ತಿದೆ-ಮುರಳೀಧರ ಭಟ್
ಸ್ವಾಗತಿಸಿದ ವ್ಯವಸ್ಥಾಪನಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ ನಮ್ಮದೇ ಕಾರ್ಯಕ್ರಮ ಎಂಬ ಭಾವನೆಯಿಂದ ಎಲ್ಲರೂ ಒಟ್ಟುಗೂಡಿ ಭತ್ತ ಬೇಸಾಯ ಕಾರ್ಯಕ್ಕೆ ಇಳಿದಿದ್ದು ಇದರಿಂದ ಪ್ರೀತಿಯ ಮನೋಭಾವ ಜಾಸ್ತಿಯಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ತಾ.ಪಂ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಎನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಉದ್ಯಮಿ ಸುಧೀರ್ ಶೆಟ್ಟಿ ನೇಸರ, ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾಶಿವ ಶೆಟ್ಟಿ ಪಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಉಮೇಶ್ ಗೌಡ ಅಂಬಟ, ಕಾವ್ಯ ಕಡ್ಯ, ಸರ್ವೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ ಸೊರಕೆ ಹಾಗೂ ಊರವರು ಉಪಸ್ಥಿತರಿದ್ದರು. ಉದಯ ಭಟ್ ಪಜಿಮಣ್ಣು ಕಾರ್ಯಕ್ರಮ ನಿರೂಪಿಸಿದರು.

ಮನರಂಜಿಸಿದ ಅಖಿಲಾ ಪಜಿಮಣ್ಣು ಹಾಡು:
ಗಾನ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಅವರು `ಉಳುವಾ ಯೋಗಿಯ ನೋಡಲ್ಲಿ’ ಹಾಡು ಹಾಡುವ ಮೂಲಕ ಸೇರಿದ್ದವರನ್ನು ಮನರಂಜಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.