HomePage_Banner
HomePage_Banner
HomePage_Banner
HomePage_Banner

ಮುಕ್ರಂಪಾಡಿ-ಸಂಪ್ಯ ಸಂಪರ್ಕ ರಸ್ತೆಗೆ ಕಾಯಕಲ್ಪ ಒದಗಲಿ..

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಸ್ತೆ ಮಧ್ಯೆಯೇ ಅಪಾಯಕಾರಿ ವಿದ್ಯುತ್ ಕಂಬ- ತಕ್ಷಣ ತೆರವುಗೊಳಿಸುವಂತೆ ಸಾರ್ವಜನಿಕರ ಮನವಿ

ಪುತ್ತೂರು: ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬವೊಂದು ಅಪಾಯವನ್ನು ಆಹ್ವಾನಿಸುತ್ತಿದ್ದರೆ, ಅದೇ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು, ಇಲ್ಲಿನ ಜನತೆ ತುಂಬಾ ಸಂಕಷ್ಟದ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ.ಇದು ಪುತ್ತೂರು ನಗರಸಭಾ ವ್ಯಾಪ್ತಿಯ ಮುಕ್ರಂಪಾಡಿ ಮಹಿಳಾ ಕಾಲೇಜಿನ ಮೂಲಕ ಸಂಪ್ಯ ಸಂಪರ್ಕ ರಸ್ತೆಯ ದುಸ್ಥಿತಿ.

ಇಲ್ಲಿ ಅನೇಕ ವರ್ಷಗಳಿಂದ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು ಇರುವ ಪ್ರದೇಶದ ಜನರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲದೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ರಸ್ತೆ ತೀರಾ ಹದಗೆಟ್ಟಿದ್ದರೆ, ಅದೇ ಸಂಪರ್ಕ ರಸ್ತೆಯಲ್ಲಿ ರಸ್ತೆ ಮಧ್ಯಯೇ ಅಪಾಯಕಾರಿ ವಿದ್ಯುತ್ ಕಂಬ. ಒಟ್ಟಿನಲ್ಲಿ ಈ ಸಂಪರ್ಕ ರಸ್ತೆಯಲ್ಲಿ ವಾಹನ ಓಡಾಡಲು ಹಾಗೂ ಜನರು ಸಂಚರಿಸಲು ತುಂಬಾ ತೊಂದರೆಯಾಗುತ್ತಿದ್ದು, ವಿದ್ಯುತ್ ಕಂಬ ಅಪಾಯವನ್ನು ಆಹ್ವಾನಿಸುತ್ತಿದೆ. ಈ ಸಮಸ್ಯೆ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿಗಳನ್ನು ನೀಡಲಾದರೂ ಸಮಸ್ಯೆ ಇಂದಿಗೂ ಪರಿಹಾರಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

ತಕ್ಷಣ ವಿದ್ಯುತ್ ಕಂಬ ತೆರವು ಗೊಳಿಸಲು ಸಾರ್ವಜನಿಕರ ಮನವಿ
ರಸ್ತೆ ಮದ್ಯೆಯಿರುವ ಅಪಾಯಕಾರಿ ವಿದ್ಯುತ್ ಕಂಬವನ್ನು ತಕ್ಷಣವೇ ತೆರವು ಮಾಡಬೇಕು ಎಂದು ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆಗಳಿಗೆ ಮನವಿ ಮಾಡಿ ಗಮನಕ್ಕೆ ತಂದಿದ್ದಾರೆ. ರಸ್ತೆ ಮಧ್ಯೆ ಇರುವ ಕಂಬದಿಂದ ವಾಹನ ಓಡಾಟಕ್ಕೆ ತೊಂದರೆಯಾಗಿದ್ದು, ಅಪಾಯಕಾರಿ ವಿದ್ಯುತ್ ಕಂಬವನ್ನು ತೆರವು ಮಾಡಬೇಕು. ಜೊತೆಗೆ ರಸ್ತೆಯನ್ನು ದುರಸ್ಥಿ ಮಾಡಬೇಕು. ಇದಕ್ಕೆ ಸಂಬಂಧ ಪಟ್ಟವರು ತುರ್ತಾಗಿ ಕ್ರಮಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಸ್ಥಳಿಯರು ಪ್ರತಿಕ್ರಿಯಿಸಿದ್ದಾರೆ.

ರಸ್ತೆ ಅಭಿವೃದ್ಧಿಗೆ ಈ ಹಿಂದೆ ಜಾಗದವರ ಆಕ್ಷೇಪಣೆಯಿತ್ತು. ಹಾಗಾಗಿ ಅಭಿವೃದ್ಧಿಗೆ ಅನುದಾನ ನಿಗಧಿಮಾಡುವುದು ಸಾಧ್ಯವಾಗಿಲ್ಲ. ಈಗ ಜಾಗದ ಮ್ಹಾಲಕರು ರಸ್ತೆ ಅಭಿವೃದ್ಧಿಗೆ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅನುದಾನ ನೀಡಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಅಲ್ಲದೆ ರಸ್ತೆ ದುರಸ್ಥಿಗೆ ಅನುದಾನ ನೀಡುವಂತೆ ಶಾಸಕರಿಗೂ ಮನವಿ ಮಾಡಲಾಗಿದ್ದು ಅನುದಾನ ನೀಡುವ ಭರವಸೆ ನೀಡಿದ್ದಾರೆ. ರಸ್ತೆ ಮಧ್ಯೆಯಿರುವ ವಿದ್ಯುತ್ ಕಂಬ ತೆರವಿಗೆ ಮೆಸ್ಕಾಂಗೆ ಮನವಿ ಮಾಡಲಾಗವುದು ಶೀನಪ್ಪ ನಾಯ್ಕ, ಸದಸ್ಯರು ನಗರ ಸಭೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.