ಎಸ್.ಜಿ ಗ್ರೂಪ್ ಕಂಪೆನಿ ನಿರ್ಧಾರಕ್ಕೆ ಅಸಮಾಧಾನ-ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೆಯುವಿಸಿಎಂಎ ಲಾರಿ ಚಾಲಕ ಮಾಲಕ ಸಂಘ ಪುತ್ತೂರು-ಕಡಬ ಘಟಕದ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಯೂಸುಫ್ ರೆಂಜಲಾಡಿ

ಪುತ್ತೂರು: ನರಿಮೊಗರು ಗ್ರಾಮದಲ್ಲಿರುವ ಪುರುಷರಕಟ್ಟೆಯಲ್ಲಿರುವ ಎಸ್.ಜಿ ಗ್ರೂಪ್ ಕಂಪೆನಿ ಬಿಂದು ಫ್ಯಾಕ್ಟರಿಯವರು ಸ್ಥಳೀಯ ಲಾರಿಗಳನ್ನು ಬಾಡಿಗೆಗೆ ಕರೆಸಿಕೊಳ್ಳದೇ ನಿರ್ಲಕ್ಷಿಸಿ ಹೊರಗಿನ ಟ್ರಾನ್ಸ್‌ಪೋರ್ಟ್‌ಗಳಿಗೆ ಆದ್ಯತೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ವಾಣಿಜ್ಯ ವಾಹನಗಳ ಚಾಲಕರ ಮತ್ತು ಮಾಲಕರ ಅಸೋಸಿಯೇಶನ್ ಪುತ್ತೂರು-ಕಡಬ ತಾಲೂಕು ಘಟಕದ ವತಿಯಿಂದ ಜು.25ರಂದು ಪುರುಷರಕಟ್ಟೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಪೂಜಾರಿ ಮಾತನಾಡಿ ಡೀಸೆಲ್ ಬೆಲೆ ಹೆಚ್ಚಳಗೊಂಡಿರುವ ಕಾರಣದಿಂದ ಲಾರಿ ಮಾಲಕರು ಮತ್ತು ಚಾಲಕರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದು ಅನಿವಾರ್ಯವಾಗಿ ಲಾರಿ ಬಾಡಿಗೆ ಅಲ್ಪ ಹೆಚ್ಚಳಗೊಳಿಸಬೇಕೆಂದು ಆಗ್ರಹಿಸಿ ಬಿಂದು ಕಂಪೆನಿಗೆ ಮನವಿ ಪತ್ರವನ್ನು ಮಾ.೧೯ರಂದು ಸಂಘದ ಮೂಲಕ ಸಲ್ಲಿಸಿದ್ದೆವು. ಆದರೆ ಕಂಪೆನಿಯಿಂದ ಆ ಪತ್ರಕ್ಕೆ ಯಾವುದೇ ಉತ್ತರ ದೊರಕಿಲ್ಲ, ಹಾಗಾಗಿ ಬಾಡಿಗೆ ಹೆಚ್ಚಳವಾಗದ ಕಾರಣ ಲಾರಿಯನ್ನು ಬಾಡಿಗೆಗೆ ಕೊಡುವುದಿಲ್ಲ ಎಂದು ಲಾರಿ ಮಾಲಕರು ಚಾಲಕರು ತೀರ್ಮಾನಿಸಿದ್ದು ಅವರಿಗೆ ನಮ್ಮ ಸಂಘದಿಂದ ಬೆಂಬಲ ಸೂಚಿಸಿದ್ದೇವೆ ಎಂದು ಅವರು ಹೇಳಿದರು. ಬಾಡಿಗೆ ಹೆಚ್ಚಿಸಿ ಸ್ಥಳೀಯ ಲಾರಿಗಳಿಗೆ ಹಾಗೂ ಟ್ರಾನ್ಸ್‌ಪೋರ್ಟ್‌ನವರಿಗೆ ಬಾಡಿಗೆ ನೀಡಲಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದು ಅವರು ಹೇಳಿದರು.

ಸಂಘದ ಪುತ್ತೂರು-ಕಡಬ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಬಂಗೇರಾ ಮಾತನಾಡಿ ಲಾರಿ ಚಾಲಕ, ಮಾಲಕರ ಹಿತರಕ್ಷಣೆಗಾಗಿ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದ್ದು ಡೀಸೆಲ್‌ಗೆ ದರ ಹೆಚ್ಚಾದ ಕಾರಣ ಬಾಡಿಗೆ ಹೆಚ್ಚಳ ಮಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಬಿಂದು ಕಂಪೆನಿಯವರು ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು ಇದಕ್ಕೆ ಪರಿಹಾರ ಕಲ್ಪಿಸಬೇಕೆನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ಲಾರಿ ಚಾಲಕ ಕಿರಣ್ ಮಾತನಾಡಿ ನಾನು ಆರೇಳು ವರ್ಷದಿಂದ ಬಿಂದು ಕಂಎನಿಗೆ ಬೇಕಾಗುವ ಐಟಂಗಳನ್ನು ಬೆಂಗಳೂರಿನಿಂದ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ, ಡೀಸೆಲ್‌ಗೆ ದರ ಜಾಸ್ತಿಯಾದ ಕಾರಣ ನಮಗೆ ವರ್ಕೌಟ್ ಆಗುತ್ತಿಲ್ಲ ಹಾಗಾಗಿ ಸ್ವಇಚ್ಚೆಯಿಂದ ಚಾಲಕರಾದ ನಾವೆಲ್ಲರೂ ಇಲ್ಲಿ ಸೇರಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇವೆ, ನಮಗೆ ನ್ಯಾಯ ಸಿಗಬಹುದೆಂಬ ವಿಶ್ವಾಸವಿದೆ ಎಂದು ಹೇಳಿದರು.

ಸಂಘದ ಪುತ್ತೂರು-ಕಡಬ ತಾಲೂಕು ಘಟಕದ ಗೌರವಾಧ್ಯಕ್ಷ ಬೇಬಿಜಾನ್ ಪುರುಷರಕಟ್ಟೆ, ಪ್ರ.ಕಾರ್ಯದರ್ಶಿ ಫಾರೂಕ್ ಎಸ್.ಎಂ, ಉಪಾಧ್ಯಕ್ಷ ಫಾರೂಕ್ ಮಂಜಲ್ಪಡ್ಪು, ಯೋಗೀಶ್ ಪೂಜಾರಿ, ಜಗದೀಶ್ ಮಂಜಲ್ಪಡ್ಪು ಸೇರಿದಂತೆ ಸಂಘದ ಸದಸ್ಯರು, ಲಾರಿ ಚಾಲಕರು, ಮಾಲಕರು ಉಪಸ್ಥಿತರಿದ್ದರು.

ಬಾಡಿಗೆ ಹೆಚ್ಚು ಕೇಳಿದ್ದಕ್ಕೆ ಬೇರೆಯವರಿಗೆ ಕೊಟ್ಟಿದ್ದೇವೆ: ಪ್ರಕಾಶ್
ಸ್ಥಳೀಯ ಲಾರಿಯವರು ಬಾಡಿಗೆ ಹೆಚ್ಚಳ ಕೊಡಬೇಕೆಂದು ಕೇಳಿಕೊಂಡ ಕಾರಣ ಬೇರೆ ಟ್ರಾನ್ಸ್‌ಪೋರ್ಟ್‌ನವರಿಗೆ ಅವಕಾಶ ಕೊಡಲಾಗಿದ್ದು ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಬಾಡಿಗೆ ಕೊಟ್ಟು ಮೈಂಟೇನ್ ಮಾಡುವುದು ಕಷ್ಟದ ಕಾರ್ಯವಾಗಿದೆ ಹಾಗಾಗಿ ಅನಿವಾರ್ಯವಾಗಿ ಬೇರೆ ಲಾರಿಗಳಿಗೆ ಅವಕಾಶ ನೀಡಿದ್ದೇವೆ ಎಂದು ಬಿಂದು ಫ್ಯಾಕ್ಟರಿಯ ಮ್ಯಾನೇಜರ್ ಪ್ರಕಾಶ್ `ಸುದ್ದಿ’ಗೆ ತಿಳಿಸಿದ್ದಾರೆ. ಇಲ್ಲಿನವರಿಗೆ ನೀಡುವಷ್ಟೇ ಬಾಡಿಗೆಯನ್ನೇ ಅವರಿಗೂ ನೀಡುತ್ತಿದ್ದೇವೆ, ಪ್ರಸಕ್ತ ಸಂದರ್ಭದಲ್ಲಿ ಬಾಡಿಗೆ ಹೆಚ್ಚಳಗೊಳಿಸುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.