ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್, ಲಿಯೋ ಕ್ಲಬ್ ವತಿಯಿಂದ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೊಂದವರಿಗೆ ಸಹಾಯ ಮಾಡುವುದು ಮಾನವ ಧರ್ಮವಾಗಿದೆ: ಹೇಮನಾಥ ಶೆಟ್ಟಿ

ಪುತ್ತೂರು: ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಕಛೇರಿಯಲ್ಲಿ ಕೊರೋನಾ ಸಂಕಷ್ಟ ಕಾಲದಲ್ಲಿ ಸೇವೆ ಸಲ್ಲಿಸಿದ ಗೃಹರಕ್ಷಕ ದಳ ಸಿಬ್ಬಂದಿಗಳು ಮತ್ತು ಮಾಧ್ಯಮ ಪ್ರವರ್ತಕರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಜು.೨೫ ರಂದು ನಡೆಯಿತು.
ಪ್ರಾಂತ್ಯ ೭ ರ ಪ್ರಾಂತೀಯ ಅಧ್ಯಕ್ಷರಾಗಿರುವ ಕಾವು ಹೇಮನಾಥ್ ಶೆಟ್ಟಿಯವರು ಮಾತನಾಡಿ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭಗೊಂಡಿರುವ ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಸಂಕಷ್ಟಕ್ಕೆ ಒಳಗಾಗಿರುವ ಜನರ ಕಣ್ಣೀರು ಒರೆಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗೃಹರಕ್ಷಕ ದಳದ ಸಿಬ್ಬಂದಿಗಳು ಕನಿಷ್ಠ ಗೌರವಧನ ಪಡೆದು ನಿಸ್ವಾರ್ಥ ವಾಗಿ ಸೇವೆ ಮಾಡುತ್ತಿರುವ ಗೃಹರಕ್ಷಕ ದಳದ ಸಿಬಂದಿಗಳನ್ನು ಗುರುತಿಸಿ ಸಹಾಯ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಹೇಮನಾಥ್ ಶೆಟ್ಟಿಯವರು ಹೇಳಿದರು.ನೊಂದವರಿಗೆ ಸಹಾಯ ಮಾಡುವುದು ಮಾನವ ಧರ್ಮವಾಗಿದೆ ಎಂದು ಹೇಳಿದರು.

ವಲಯ ೧ ವಲಯಾಧ್ಯಕ್ಷರಾದ ಶಿವ ಪ್ರಸಾದ್ ಮಾತನಾಡಿ ಲಯನ್ಸ್ ಸಂಸ್ಥೆಯ ಈ ಕೆಲಸ ಅತೀ ಉತ್ತಮವಾದುದು ಇವರು ಸಮಾಜಕ್ಕೆ ಅತೀ ಹತ್ತಿರವಾಗಿರುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಿಟ್ಟ್ ವಿತರಣೆ ಧನಸಹಾಯ ಮಾಡಿದ ಲಯನ್ ಮೋಹನ್ ನಾಯಕ್ ಮಾತನಾಡಿ ಸಣ್ಣ ಪುಟ್ಟ ಸಹಾಯವನ್ನು ಮಾಡುತ್ತಿದ್ದ ನನಗೆ ಈಗ ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಗೆ ಸೇರಿ ನಿಮಗೆಲ್ಲ ಸಹಾಯ ಮಾಡಲು ಸಹಾಯ ಮಾಡಲು ಸಾಧ್ಯವಾಯಿತು ತುಂಬಾ ಖುಷಿಯಾಯಿಗೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ ಐದು ತಿಂಗಳ ಹಿಂದೆ ಪ್ರಾರಂಭವಾಗಿರುವ ನಮ್ಮ ಸಂಸ್ಥೆಗೆ ನಮ್ಮ ಸದಸ್ಯರ ಬೆಂಬಲದಿಂದ ಇಂತಹ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಯಿತು. ಈ ಸಂಸ್ಥೆಯನ್ನು ಹುಟ್ಟು ಹಾಕಿದ ಕಾವು ಹೇಮನಾಥ್ ಶೆಟ್ಟಿ, ಮಾರ್ಗದರ್ಶನ ಮಾಡಿದ ಗಣೇಶ್ ಶೆಟ್ಟಿಯವರ ಸೇವೆ ಅನನ್ಯ ಎಂದು ಅಭಿಪ್ರಾಯಿಸಿದರು. ಗೃಹ ರಕ್ಷಕದಳ ಸದಸ್ಯರ ಪರವಾಗಿ ಮಾತನಾಡಿದ ಸಂತೋಷ್ ಅವರು ನಮ್ಮ ಸದಸ್ಯರನ್ನು ಗುರುತಿಸಿ ಗೌರವಿಸುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ. ನಿಮ್ಮ ಸೇವೆಗೆ ಸದಾ ಋಣಿಯಾಗಿದ್ದೇವೆ. ನಿಮಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ಸಿಗಲಿ ಎಂದು ಕೃತಜ್ಞತೆ ಹೇಳಿದರು.

ಜಿಲ್ಲಾ ಸಂಪುಟ ಸದಸ್ಯರಾಗಿರುವ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ಉಪಾಧ್ಯಕ್ಷರಾಗಿರುವ ವಿಕ್ರಮ್ ಶೆಟ್ಟಿ, ದಾಮೋದರ್ ಭಂಡಾರ್ಕರ್, ಅನ್ವರ್ ಖಾಸಿಂ,ಬಶೀರ್ ಪರ್ಲಡ್ಕ, ಅಬೂಬಕ್ಕರ್ ಮುಲಾರ್, ನೇಮಾಕ್ಷ ಸುವರ್ಣ, ರವಿಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು,ಕೋಶಾಧಿಕಾರಿ ಕೇಶವ ಬೆದ್ರಾಳ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.