HomePage_Banner
HomePage_Banner
HomePage_Banner
HomePage_Banner

ಫಿಲೋಮಿನಾ ಗಣಪನಿಗೆ 39ರ ಸಂಭ್ರಮ – ವಿಗ್ರಹ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸರಕಾರದ ಮಾರ್ಗಸೂಚಿಯಂತೆ ಈ ಬಾರಿ ಕಾರ್ಯಕ್ರಮ

ಪುತ್ತೂರು: ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆಯುವ ೩೯ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಜು.27ನೇ ಅಂಗಾರಕ ಸಂಕಷ್ಟಿಯ ಶುಭ ಮುಹೂರ್ತದಲ್ಲಿ ಶ್ರೀ ಗಣೇಶನ ವಿಗ್ರಹ ಮುಹೂರ್ತ ಕಾರ್ಯಕ್ರಮವು ಪರ್ಲಡ್ಕದಲ್ಲಿ ನಡೆಯಿತು.

ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯರವರ ನೇತೃತ್ವದಲ್ಲಿ ಪೂಜಾವಿಧಿ ವಿಧಾನದೊಂದಿಗೆ ವಿಗ್ರಹ ರಚನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಪ್ರಕಾಶ್ ಮುಕ್ರಂಪಾಡಿ, ನಾಗೇಶ್ ಪೈ, ದುರ್ಗಾಪ್ರಸಾದ್, ವಿದ್ಯಾರ್ಥಿಗಳಾದ ಸುಕುಮಾರ್ ಪರ್ಲಡ್ಕ, ಆಶ್ಲೇಷ, ಕೀರ್ತೆಶ್, ಅಖಿಲ್, ಸುಖೇಶ್, ಪ್ರಜ್ವಲ್, ರಿತೇಂದ್ರ, ಶರತ್, ರೋಹಿತ್ ಮತ್ತೀತರರು ಉಪಸ್ಥಿತರಿದ್ದರು. ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ಈ ಬಾರಿ ಕಾರ್ಯಕ್ರಮ ನಡೆಯಲಿದೆ ಎಂದು ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.