ಕಡಬ ತಾಲೂಕು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷ; ವಿಮಲ್ ಕುಮಾರ್, ಖಜಾಂಜಿ; ಶೇಷಾದ್ರಿ, ರಾಜ್ಯ ಪರಿಷತ್ ಸದಸ್ಯರಾಗಿ ಮಾಮಚ್ಚನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ತಾಲೂಕು ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪುತ್ತೂರು ನೌಕರರ ಭವನದಲ್ಲಿ ರಾಜ್ಯ ಸಂಘದ ಕೋಶಾಧಿಕಾರಿ  ಶ್ರೀನಿವಾಸ, ರಾಜ್ಯ ಸಂಘದ ಮ್ಯಾನೇಜರ್  ಸುರೇಶ್, ಜಿಲ್ಲಾ ಸಂಘದ ಅಧ್ಯಕ್ಷರಾದ  ಕೃಷ್ಣ, ಕಾರ್ಯದರ್ಶಿ  ನವೀನ್ ಇವರ ಉಪಸ್ಥಿತಿಯಲ್ಲಿ ನಡೆಯಿತು.

ವಿಮಲ್‌ ಕುಮಾರ್
ಶೇಷಾದ್ರಿ
ಮಾಮಚ್ಚನ್

 

ಕಡಬ ತಾಲೂಕು ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ನೆಲ್ಯಾಡಿ ಶಾಲೆಯ ಶಿಕ್ಷಕ ವಿಮಲ್ ಕುಮಾರ್, ಖಜಾಂಜಿಯಾಗಿ ಕಂದಾಯ ಇಲಾಖೆಯ ಶೇಷಾದ್ರಿ, ರಾಜ್ಯ ಪರಿಷತ್ ಸದಸ್ಯರಾಗಿ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಇವರನ್ನು ಕಡಬ ತಾಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ನೂತನ ತಾಲೂಕಾಗಿರುವ ಕಡಬದಲ್ಲಿ ಎಲ್ಲಾ ರೀತಿಯಲ್ಲೂ ನೌಕರರ ಸಮಸ್ಯೆಗಳಿಗೆ ರಾಜ್ಯ ಅಧ್ಯಕ್ಷರಾದ ಷಡಕ್ಷರಿ, ಜಿಲ್ಲಾಧ್ಯಕ್ಷರಾದ ಶ್ರೀಕೃಷ್ಣ ಅವರ ಜೊತೆಗೆ ಸರಕಾರಿ ನೌಕರರ ಪರವಾಗಿ ನಮ್ಮ ತಂಡವು ಪ್ರಾಮಾಣಿಕ ಸೇವೆ ಮಾಡಲಿದೆ. ಪ್ರಮುಖ ಸಮಸ್ಯೆಗಳಾದ ನೂತನ ಪಿಂಚಣಿ ಯೋಜನೆ ರದ್ದು ಪಡಿಸಲು, ಕೇಂದ್ರ ಮಾದರಿ ವೇತನ ದೊರಕುವಂತೆ ಮಾಡಲು ರಾಜ್ಯ ಸಂಘದ ಜೊತೆಗೆ ಹೋರಾಟಕ್ಕೆ ಕೈ ಜೋಡಿಸಲಿದ್ದೇವೆ ಎಂದು ಕಡಬ ತಾಲೂಕು ಸರಕಾರಿ ನೌಕರರ ಸಂಘದ ನೂತನ ಅದ್ಯಕ್ಷ ವಿಮಲ್ ಕುಮಾರ್ ಹೇಳಿದರು.

ಪುತ್ತೂರು ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಶಿವಾನಂದಾಚಾರ್ಯ,ಸುಳ್ಯ ತಾಲೂಕು ಸಂಘದ ಅಧ್ಯಕ್ಷರಾದ ತೀರ್ಥರಾಂ ,ಕಾರ್ಯದರ್ಶಿ ಧನಲಕ್ಷ್ಮೀ, ರಾಜ್ಯ ಪರಿಷತ್ ಸದಸ್ಯರಾದ ಪುರುಷೋತ್ತಮ, ಜನಾರ್ಧನ ,ಪುತ್ತೂರು ತಾಲೂಕು ನೌಕರರ ಸಂಘದ ಕಾರ್ಯದರ್ಶಿ ಅಬ್ರಹಾಂ ,ಬಂಟ್ವಾಳ ನೌಕರರ ಸಂಘದ ಕಾರ್ಯದರ್ಶಿ ಸಂತೋಷ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ,ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ,ಶಿಕ್ಷಕರ ಸಂಘದ ರಾಜ್ಯ ಸಂಘದ ಮಹಿಳಾ ಸಂಘಟನಾ ಕಾರ್ಯದರ್ಶಿ ಹೇಮಲತಾ, ಕಡಬ ತಾ ಶಿಕ್ಷಕರ ಸಂಘದ.ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಪುತ್ತೂರು ತಾ ಶಿಕ್ಷಕರ ಸಂಘದ.ಪ್ರ.ಕಾರ್ಯದರ್ಶಿ ವೇದಾವತಿ, ಪುತ್ತೂರು, ಸುಳ್ಯ, ಬಂಟ್ವಾಳ, ಮಂಗಳೂರು, ಸ.ನೌ.ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.