ಒಳಮೊಗ್ರು ಗ್ರಾಂ. ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರುಃ  ಶಾಲೆಗಳಿಗೆ ನೀಡುವ ಅಡುಗೆ ಎಣ್ಣೆಯ ಬದಲು ಅಡುಗೆ ಎಣ್ಣೆಯಾಗಿ ತೆಂಗಿನ ಎಣೆ ನೀಡುವಂತೆ ಉಸ್ತುವಾರಿ ಸಚಿವರಿಗೆ  ಬರೆಯಲು ಒಳಮೂಗ್ರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು ರವರ ಅಧ್ಯಕ್ಷತೆಯಲ್ಲಿ  ನಡೆಯಿತು. ಶಾಲೆಗಳಿಗೆ ಅಡುಗೆ ಎಣ್ಣೆಯಾಗಿ ತೆಂಗಿನ ಎಣ್ಣಿ ನೀಡುವ ಬಗ್ಗೆ ಉಸ್ತುವಾರಿ ಸಚಿವರಿಗೆ ಬರೆಯಲು ಸದಸ್ಯ ಮಹೇಶ್ ಕೇರಿ ಆಗ್ರಹ ದ.ಕ ಕರಾವಳಿ ಭಾಗದಲ್ಲಿ ಅಡುಗೆ ಎಣ್ಣೆಯಾಗಿ ತೆಂಗಿನ ಎಣ್ಣೆ ಹೆಚ್ಚು ಉಪಯುಕ್ತ ಹಾಗೂ ಅಡುಗೆ ಈ ಭಾಗದಲ್ಲಿ ಹೆಚ್ಚಾಗಿ ಬಳಸುವುದರಿಂದ ಬೇರೆ ಯಾವುದೇ ಎಣ್ಣೆಯ ಬದಲಾಗಿ ತೆಂಗಿನ ಎಣ್ಣೆ ನೀಡುವಂತೆ ದ.ಕ ಉಸ್ತುವಾರಿ ಸಚಿವರಿಗೆ ಬರೆಯಲು ಒತ್ತಾಯಿಸಿದರು  ಈ ಬಗ್ಗೆ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸಮ್ಮತಿ ಸೂಚಿಸಿದರು ಇವರೊಂದಿಗೆ ಸದಸ್ಯ ಅಶ್ರಫ್ ಯು ಸತ್ ನೀಡಿದರು. ಬಳಿಕ ಚರ್ಚಿಸಿ  ಅಡುಗೆ ಎಣ್ಣೆಯಾಗಿ ತೆಂಗಿನ ಎಣ್ಣೆ ನೀಡುವಂತೆ ದ‌ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿರವರಿಗೆ ಬರೆಯಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು .
ಪರ್ಪುಂಜ- ಕುರಿಯ ರಸ್ತೆ ಸರಕಾರಿ ಬಾವಿ ಹತ್ತಿರ, ಕುರಿಯ ಮಸೀದಿ ಎದುರು ಹಾಗೂ ಕೆ.ಹೆಚ್ ಬಿಲ್ಡಿಂಗ್ ಕೆಳಗೆ ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳಿವೆ.ಸದಸ್ಯ ವಿನೋದ್ ಶೆಟ್ಟಿ ಸಭೆಯ ಗಮನಕ್ಕೆ ತಂದರು ಇವರೊಂದಿಗೆ ಅಶ್ರಫ್ ಯು ಧ್ವನಿ ಗೂಡಿಸಿದರು. ಈ ಬಗ್ಗೆ ಅಧ್ಯಕ್ಷೆ ತ್ರಿವೇಣಿ  ಪಲ್ಲತ್ತಾರು  ಮಾತನಾಡಿ  ರಸ್ತೆ ಬದಿ ಇರುವ ಅಪಾಯಕಾರಿ ಮರಗಳನ್ನು ತೆರವು ಗುಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಬರೆಯುವ  ಎಂದು ಹೇಳಿದರು.   ಬಳಿಕ ಚರ್ಚಿಸಿ ಸರ್ವವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಪರ್ಪುಂಜ ‌ಅಂಗಡಿ ಕೋಣೆಯ ಬೀಗ ಜಡಿದು ಅಂಗಡಿ ಏಲಂ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಪರ್ಪುಂಜ ಬಸ್ ತಂಗುದಾಣದಲ್ಲಿರುವ ಅಂಗಡಿಗಳನ್ನು ತೆರವು ಗೊಳಿಸಿ ಹೊಸದಾಗಿ ಬಸ್ ತಂಗುದಾಣ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ಲಸಿಕೆ ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ  ಗ್ರಾಮಕ್ಕೆ ಬೇಕಾದಷ್ಟು ಲಸಿಕೆ ಒದಗಿಸುವ ಬಗ್ಗೆ ಸರ್ಕಾರಕ್ಕೆ ಬರೆದುಕೊಳ್ಳಲು ತೀರ್ಮಾನಿಸಲಾಯಿತು.
ಬಾಕ್ಸ್
ಸಾಮಾನ್ಯ ಸಭೆ ದಿನಾಂಕ ನಿಗದಿ ಪಡಿಸಿ ರದ್ದು ಪಡಿಸಿದ ಬಗ್ಗೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷ ಸದಸ್ಯರ ಮಧ್ಯ ಮಾತಿನ ಚಕಮಕಿ:-
ಜು20 ರಂದು ಸಾಮಾನ್ಯ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿಪಡಿಸಿ ಸದಸ್ಯರಿಗೆ ನೋಟಿಸ್ ಕಳುಹಿಸಿ ಕೊನೆಯ ಎರಡು ದಿನಗಳಲ್ಲಿ ಸಭೆಯ ದಿನಾಂಕ ಬದಲಾವಣೆ ಮಾಡಿದ ಬಗ್ಗೆ ಸದಸ್ಯ ಅಶ್ರಫ್ ಯು ಬದಲಾವಣೆ ಮಾಡಲು ಕಾರಣದ ಬಗ್ಗೆ ಪಿಡಿಒ ಹಾಗೂ ಅಧ್ಯಕ್ಷರನ್ನು ಪ್ರಶ್ನಿಸಿದರು ಈ ಬಗ್ಗೆ ಅಧ್ಯಕ್ಷೆ ತ್ರಿವೇಣಿ ಉತ್ತರಿಸಿ ನಮ್ಮಲ್ಲಿ ಬೇರೆ ಕಾರ್ಯಕ್ರಮ ಇತ್ತು ಅದು  ನಿಗದಿ ಪಡಿಸಿದ್ದು ಗೊತ್ತಾಗಿ ಇರಲಿಲ್ಲ ಕೊನೆಯ ಎರಡು ದಿವಸಗಳ ಹಿಂದೆ ಗೊತ್ತಾಯಿತು. ಅದರಿಂದ ಬದಲಾಣೆ ಮಾಡಲಾಗಿದೆ ಎಂದು ಹೇಳಿದರು ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅಶ್ರಫ್ ಯು  ಸಭೆಗೆ ಸದಸ್ಯರು ಗೈರು ಹಾಜರಿಯಾಗಿ ಕೋರಂ ಇಲ್ಲದಿರುವ ಪಕ್ಷದಲ್ಲಿ ರದ್ದು  ಪಡಿಸುವುದು ಹೊರತು ಅಧ್ಯಕ್ಷರಿಗೆ ಹಾಗೂ ಇತರ ಸದಸ್ಯರಿಗೆ ಸಮಯ ಇಲ್ಲದೆ ಇರುವಾಗ ರದ್ದು ಪಡಿಸುವಂತಿಲ್ಲ ಅಧ್ಯಕ್ಷರು ಇಲ್ಲದ ಸಂದರ್ಭದಲ್ಲಿ ಉಪಾಧ್ಯಕ್ಷ ಅಥವಾ ಹಿರಿಯ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕು. ಎಂಬುದು ಪಂಚಾಯತ್ ನಿಯಮ ಇದೆ ಗೊತ್ತಿಲ್ಲಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಆಡಳಿತ ಪಕ್ಷ ಸದಸ್ಯ ಮಹೇಶ್ ರೈ ಕೇರಿ ಪ್ರತಿಕ್ರಿಯಿಸಿ ಕೊರಂ ಇಲ್ಲ ಎಂದು ಗೊತ್ತಿತ್ತು ಅದರಿಂದ ರದ್ದುಪಡಿಸಿದ್ದು  ಸಭೆ ರದ್ದು ಪಡಸುವ ಹಾಗೂ ಮುಂದೂಡುವ ಅಧಿಕಾರ ಅಧ್ಯಕ್ಷರಿಗಿದೆ ಎಂದಾಗ ಸದಸ್ಯರ ಮಧ್ಯೆ ಮಾತಿನಚಕಮಕಿ ನಡೆಯಿತು. ಈ ಬಗ್ಗೆ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷನಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ವಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಅಶ್ರಫ್ ಯು ಪ್ರತಿಕ್ರಿಯಿಸಿ ಅಧಿಕಾರ ಇಲ್ಲ ಎಂದು ಹೇಳಿಲ್ಲ  ನಮ್ಮಲ್ಲಿ 15 ಮಂದಿ ಸದಸ್ಯರು ಇರುವುದು ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 8 ಜನ ಸದಸ್ಯರು ಇದ್ದಾಗ ಸಭೆ ನಡೆಸಬಹುದು ನಿಯಮ ಇದೆ.ಎಂದು ಹೇಳಿದರು ಇವರೊಂದಿಗೆ ಸೀನಪ್ಪ ನಾಯ್ಕ, ವಿನೋದ್ ಧ್ವನಿ ಗೂಡಿಸಿದರು. ಈ ಬಗ್ಗೆ ಅಧ್ಯಕ್ಷೆ ತ್ರಿವೇಣಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವ ಕೋರಂ ಇದ್ದರೆ ಸಭೆ ನಡೆಸಿ ಎಂದು ಹೇಳಿ ಚರ್ಚೆಗೆ ಪೂರ್ಣ ಚುಕ್ಕೆ ನೀಡಿದರು. 
ಬಾಕ್ಸ್ 
 ಅನಾಮಧೇಯ ಪತ್ರ ಬಗ್ಗೆ ಆಡಳಿತ ಹಾಗೂ ಪ್ರತಿ ಪಕ್ಷದೋಳಗೆ ಮಾತಿನ ಚಕಮಕಿ:-
ಗ್ರಾ.ಪಂ ಹಾಗೂ ವರ್ತಕ ಸಂಘದ ವತಿಯಿಂದ ಕುಂಬ್ರ ಪೇಟೆ ಹಾಗೂ ಸುತ್ತ ಮುತ್ತಲಿನ ಪರಿಸರ ಸ್ವಚ್ಚತಾ ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾ.ಪಂ ಓರ್ವ ಸದಸ್ಯನಿಂದ  ಇಢೀ ಪಂಚಾಯತ್ ಸದಸ್ಯರ ಘನತೆಗೆ ಕುಂದುಟಾಗದೆ.ಈ ಬಗ್ಗೆ  ತನಿಖೆ ನಡೆಸಬೇಕು.  ಎಂಬ ಅರ್ಜಿ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯ ಮಹೇಶ್ ರೈ ಕೇರಿ ವಿಷಯ ಪ್ರಸ್ತಾಪಿಸಿ  ನಮ್ಮ ಐದು ವರ್ಷದ ಅವಧಿಯಲ್ಲಿ ಯಾವೊಬ್ಬ ಸದಸ್ಯರಿಗೂ ಅಪವಾದ ಉಂಟಾದರೂ ಅದು ಇಡೀ ಪಂಚಾಯತಿ ಸದಸ್ಯರಿಗೆ ಅಪಮಾನವಾದಂತೆ ಇದನ್ನು ನಾನು ಸಹಿಸಲಾರೆ ಈ ಬಗ್ಗೆ ಸಂಪ್ಯ ಗ್ರಾಮಾಂತರ ಪೋಲಿಸ್ ಠಾಣೆಗೆ ಬರೆಯಲು  ಆಗ್ರಹಿಸಿದರು ಈ ಬಗ್ಗೆ ಪ್ರತಿ ಪಕ್ಷ ಸದಸ್ಯ ಅಶ್ರಫ್ ಪ್ರತಿಕ್ರಿಯಿಸಿ, .ಅನಾಮಧೇಯ ಅರ್ಜಿ ಸಲ್ಲಿಸಿದವರು ಯಾರು? ಈ ಅರ್ಜಿ ಸ್ವೀಕರಿಸಿದ್ದು ಯಾರು? ಎಂಬುದು ಗೊತ್ತಿಲ್ಲ. ಅದು ಬಿಟ್ಟು ಪಂಚಾಯತ್ ನಲ್ಲಿ ಅರ್ಜಿ ಸ್ವೀಕರಿಸಿದ ಬಗ್ಗೆ ನಮೂದಿಸಿಲ್ಲ,  ಆ ಬಳಿಕ ಅರ್ಜಿಯಲ್ಲಿ ಅಭಿವೃದ್ಧಿ ಅಧಿಕಾರಿ ಅಥವಾ ಅಧ್ಯಕ್ಷರ ಸಹಿ ಇಲ್ಲ  ಈಗಿರುವಾಗ ಅರ್ಜಿ ಬಗ್ಗೆ  ಯಾವ ರೀತಿಯಲ್ಲಿ ಚರ್ಚೆ ಕೈಗೊಳ್ಳುವುದು ಎಂದು ಪ್ರಶ್ನಿಸಿದರು.ಈ ಬಗ್ಗೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷದ ನಡುವೆ  ಮಾತಿನ ಚಕಮಕಿ ನಡೆಯಿತು ಈ  ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಧ್ಯೆ ಪ್ರವೇಶಿಸಿ ನನ್ನ ಅವಧಿಯಲ್ಲಿ ಯಾವೊಬ್ಬ ಸದಸ್ಯರಿಗೂ ಅಪವಾದ ಬಂದರೂ ನಾನು ಸಹಿಸಲಾರೆ ಇದರ ಬಗ್ಗೆ ತನಿಖೆ ಆಗಬೇಕು ಮುಂದೆ ಇಂತಹ ವಿಚಾರಗಳು ಮರುಕಳಿಸಬಾರದು ಎಂದರು.
 ಈ ಬಗ್ಗೆ  ಪ್ರತಿ ಪಕ್ಷ ಸದಸ್ಯ ಅಶ್ರಫ್ ಯು ಖಂಡನೆ ವ್ಯಕ್ತಪಡಿಸಿ, ಅರ್ಜಿ ಸಲ್ಲಿಸಿದವರು ಯಾರು ಎಂದು ಕಂಡುಹಿಡಿಯಿರಿ ಆ ಬಳಿಕ ತನಿಖೆ ನಡೆಸಲು ಪೋಲಿಸ್ ಠಾಣೆಗೆ ಬರೆಯುವಂತೆ ಆಗ್ರಹಿಸಿದರು. ಇವರೊಂದಿಗೆ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಅಬ್ದುಲ್ ಸಿರಾಜುದ್ದೀನ್ ಧ್ವನಿ ಗೂಡಿಸಿದರು,ಬಳಿಕ ಚರ್ಚಿಸಿ ಮುಂದಿನ  ತಿಂಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು.
 ನಿವೇಶನಕ್ಕೆ ಜಾಗ ಕಾದಿರಸದ ಬಗ್ಗೆ ವಿಷಾದ
ಒಳಮೂಗ್ರು ಗ್ರಾಮಕರಣಿಕ ರಾಧಾಕೃಷ್ಣ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿ ಮಾತನಾಡಿ
ಗ್ರಾಂ. ಪಂ ವ್ಯಾಪ್ತಿ ಇಷ್ಟು ದೊಡ್ಡದಾಗಿದೆ ಆದರೆ ಇಲ್ಲಿ ಈತನ ಯಾರು ನಿವೇಶನ ಜಾಗ ಕಾದಿರಸದೆ ಇರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.ಮುಂದೆ ಸರಕಾರಿ ಭೂಮಿ ಕಂಡು ಹುಡುಕಿ  ಕಾದಿರಿಸುವ ಬಗ್ಗೆ ಪ್ರಯತ್ನಿಸುದಾಗಿ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಂದರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರಾದ ಶೀನಪ್ಪ ನಾಯ್ಕ, ಅಬ್ದುಲ್ ಸಿರಾಜುದ್ಧೀನ್, ಲತೀಫ್ ಎಸ್, ವಿನೋದ್ ಶೆಟ್ಟಿ ಎಂ, ಚಿತ್ರಾ ಬಿ.ಸಿ, ಶಾರದಾ, ವನಿತಾ, ನಳಿನಾಕ್ಷಿ, ರೇಖಾ, ಮಹೇಶ್ ರೈ ಕೇರಿ ಸಹಕಾರಿಸಿದರು.
ರು.ಗ್ರಾ.ಪಂ ಕಾರ್ಯದರ್ಶಿ ಜಯಂತಿ ಸ್ವಾಗತಿಸಿ,ವಂದಿಸಿದರು ಪಿಡಿಒ ಗೀತಾ ಬಿ.ಎಸ್, ಸರ್ಕಾರದ ಸತೋಲೆ ಓದಿ, ಖರ್ಚು ವೆಚ್ಚಗಳ ವರದಿ ಮಂಡಿಸಿದರು.ಸಿಬ್ಬಂದಿಗಳಾದ  ಜಾನಕಿ,ಗುಲಾಬಿ, ಕೇಶವ ಸಹಕಾರಿಸಿದರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.