HomePage_Banner
HomePage_Banner
HomePage_Banner
HomePage_Banner

ದೈಪಿಲ ಕ್ಷೇತ್ರದ ದೈವಸ್ಥಾನಗಳ ಜೀರ್ಣೋದ್ಧಾರದ ಕುರಿತು ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ತುಳುನಾಡಿನ ಅತ್ಯಂತ ಪುರಾತನ ಸುಮಾರು 800 ವರ್ಷದ ಇತಿಹಾಸವಿರುವ ಕಾರಣಿಕ ಕ್ಷೇತ್ರವಾಗಿರುವ ಚಾರ್ವಾಕ ಗ್ರಾಮದ ದೈಪಿಲ ಕ್ಷೇತ್ರದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ಕಟ್ಟೆಗಳ ನಿರ್ಮಾಣ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವದ ನೂತನ ದೈವಸ್ಥಾನ ನಿರ್ಮಾಣಗೊಂಡು ಜೀರ್ಣೋದ್ಧಾರಗೊಳ್ಳಲ್ಲಿದ್ದು, ಇದರ ಪೂರ್ವಭಾವಿ ಸಭೆಯು ಅರುವಗುತ್ತು ಚಂದ್ರಕಲಾ ಸಿ.ಜೆ ಅವರ ಮನೆಯಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ದೈಪಿಲ ಶ್ರೀ ಕ್ಷೇತ್ರದ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ನಿರ್ಮಾಣಕ್ಕೆ ಪ್ರವೀಣ್ ಕುಂಟ್ಯಾನ ಅವರು ತಮ್ಮ ತೋಟದಲ್ಲಿ 5 ಸೆಂಟ್ಸ್ ಜಾಗವನ್ನು ದಾನದ ರೂಪದಲ್ಲಿ ನೀಡಿದ್ದು, ಜಾಗದ ರೆಕಾರ್ಡ್ ಪ್ರತಿಯನ್ನು ಅರುವಗುತ್ತಿನ ಯಜಮಾನ ಪ್ರದೀಪ್ ಆರ್.ಗೌಡ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅರುವಗುತ್ತು ಚಂದ್ರಕಲಾ ಸಿ.ಜೆ, ಪ್ರದೀಪ್ ಆರ್. ಗೌಡ, ಕುಂಬ್ಲಾಡಿ ಕುಕ್ಕೇನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಪ್ರವೀಣ್ ಕುಂಟ್ಯಾನ, ಪರಮೇಶ್ವರ ಗೌಡ ಮೀಯೊಳ್ಪೆ, ಶೇಖರ ಗೌಡ ಅಂಬುಲ, ಪ್ರಕಾಶ್ ಅರುವ, ರಾಮಣ್ಣ ಗೌಡ ಖಂಡಿಗ, ವಿಜಯ ಬೈಲು, ಶೇಖರ ಗೌಡಮನೆ ಹಾಗೂ ನಾಲ್ಕು ಪ್ರಮುಖ ಮನೆಯವರು, ೧೪ ವರ್ಗದವರು ಹಾಗೂ ಊರ ಕೂಡಿಕಟ್ಟಿನವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.