HomePage_Banner
HomePage_Banner
HomePage_Banner
HomePage_Banner

ದರ್ಬೆತ್ತಡ್ಕ: ಶಾಲಾ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ: ಕಂದಾಯ ಇಲಾಖೆಯಿಂದ ಮನೆ ತೆರವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ಮನೆ ಧ್ವಂಸ ಮಾಡಿದ್ದಾರೆ- ನ್ಯಾಯಕ್ಕಾಗಿ ಪ್ರತಿಭಟನೆ ಮಾಡುತ್ತೇವೆ: ದಲಿತ ಸಂಘಟನೆಗಳ ಎಚ್ಚರಿಕೆ

ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಶಾಲಾ ಬಳಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆಯ ವತಿಯಿಂದ ಜು. 27 ರಂದು ಮನೆಯನ್ನು ತೆರವು ಮಾಡಿದ ಘಟನೆ ನಡೆದಿದ್ದು, ಮನೆ ತೆರವು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ನ್ಯಾಯಕ್ಕಾಗಿ ಕಂದಾಯ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ ಘಟನೆ ಜು. 27 ರಂದು ದರ್ಬೆತ್ತಡ್ಕದಲ್ಲಿ ನಡೆದಿದೆ.

 

ಒಳಮೊಗ್ರು ಗ್ರಾಮದ ಸರ್ವೆ ನಂ.207 ರಲ್ಲಿ ದರ್ಬೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ ಹೆಸರಿನಲ್ಲಿ ಜಾಗ ಇದೆ. ಶಾಲೆಯ ಮುಂಭಾಗದಲ್ಲಿರುವ ಗ್ರಾಪಂ ವತಿಯಿಂದ ನಿರ್ಮಾಣ ಮಾಡಿರುವ ಬಸ್ ತಂಗುದಾಣದ ಹಿಂಬದಿ ರಘುನಾಥ್ ಎಂಬವರು ಕಳೆದ 12 ವರ್ಷಗಳಿಂದ ಶೆಡ್ ನಿರ್ಮಿಸಿ ವಾಸವಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಶೆಡ್‌ಗೆ ಗೋಡೆಯನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಶಾಲಾ ಎಸ್‌ಡಿಎಂಸಿ ವಿರೋಧ ವ್ಯಕ್ತಪಡಿಸಿ ರಘುನಾಥ್ ವಾಸ್ತವ್ಯ ಇರುವ ಶೆಡ್‌ನ ಜಾಗ ದರ್ಬೆತ್ತಡ್ಕ ಶಾಲೆಗೆ ಸೇರಿದ್ದಾಗಿದ್ದು ಅಲ್ಲಿ ಮನೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು. ಶೆಡ್ ಇರುವ ಸ್ಥಳದಲ್ಲಿ ಗೋಡೆ ನಿರ್ಮಾಣ ಮಾಡಿ ಮನೆ ಕಟ್ಟಡ ನಿರ್ಮಾಣ ಮಾಡದಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದರು. ಆದರೆ ಗೋಡೆ ನಿರ್ಮಾಣ ಕಾರ್ಯ ನಡೆದಿತ್ತು.

ಮೂರು ತಿಂಗಳ ಗುಡುವು
ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾಗಿ ಆರೋಪಿಸಿ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಜಾಗ ಶಾಲೆಗೆ ಸೇರಿದ್ದಾಗಿದ್ದು ಇಲ್ಲಿ ಮನೆ ನಿರ್ಮಾಣ ಮಾಡಿರುವುದು ತಪ್ಪು. ಮನೆಯನ್ನು ತೆರವು ಮಾಡುವಂತೆ ಮನೆ ಮಂದಿಗೆ ಮೂರು ತಿಂಗಳೊಳಗಾಗಿ ಬದಲಿ ವ್ಯವಸ್ಥೆಯನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದರು. ಸೂಚನೆ ನೀಡಿ ಮೂರು ತಿಂಗಳು ಕಳೆದಿದೆ. ಜು. 27 ರಂದು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮನೆಯೊಳಗಿದ್ದ ಸಾಮಾಗ್ರಿಗಳನ್ನು ಬದಿಯಲ್ಲಿಟ್ಟು ಗೋಡೆಯನ್ನು ಧ್ವಂಸ ಮಾಡಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಪೂರ್ತಿ ಮನೆಯನ್ನು ಧ್ವಂಸ ಮಾಡಿ ತೆರವು ಮಾಡಿದ್ದಾರೆ.

ನಮಗೆ ಯಾವುದೇ ನೋಟೀಸ್ ನೀಡಿಲ್ಲ: ಜಯಂತಿ
ರಘುನಾಥ್ ಅವರ ಮನೆಯಲ್ಲಿ ಅವರ ಅಕ್ಕ ಜಯಂತಿ ಮತ್ತು ಮಕ್ಕಳು ಸೇರಿ 5 ಮಂದಿ ವಾಸ್ತವ್ಯವಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಜಯಂತಿ ಅವರಲ್ಲಿ ಸುದ್ದಿ ಮಾತನಾಡಿಸಿದಾಗ “ ನಾವು ಕಳೆದ 12 ವರ್ಷಗಳಿಂದ ಈ ಮನೆಯಲ್ಲಿ ವಾಸ್ತವಿದ್ದೇವೆ. ನಾನು ಮತ್ತು ಅಣ್ಣ ರಘುನಾಥ್ ಹಾಗೂ ಮಕ್ಕಳ ಜೊತೆ ವಾಸವಿದ್ದೇನೆ. ಜು. 27 ರಂದು ನಾನು ಕೆಲಸಕ್ಕೆ ಹೋಗಿದ್ದೆ, ರಘುನಾಥ್ ಕೆಲಸಕ್ಕೆ ಹೋಗಿದ್ದರು, ಮಕ್ಕಳು ಶಾಲೆಗೆ ಹೋಗಿದ್ದರು ಈ ವೇಳೆ ಬಂದು ಕಂದಾಯ ಅಧಿಕಾರಿಗಳು ಮನೆಯನ್ನು ಧ್ವಂಸ ಮಾಡಿದ್ದಾರೆ. ಮನೆಯೊಳಗಿದ್ದ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಅಕ್ಕಿ, ಜಿನಸು ಸಾಮಾಗ್ರಿ, ಬಟ್ಟೆ ಬರೆ, ಪಾತ್ರೆಗಳನ್ನು ಎಸೆದಿದ್ದಾರೆ, ಕೆಲವು ಮಣ್ಣಿನಡಿಗೆ ಹಾಕಿದ್ದಾರೆ. ನಾವು ಅಕ್ರಮವಾಗಿ ಇಲ್ಲಿ ಕೂತಿಲ್ಲ, ಶಾಲೆಯ ಜಾಗ ಎಂದು ಬಾಯಲ್ಲಿ ಹೇಳುತ್ತಾರೆ, ಅಳತೆ ಮಾಡಿ ಎಂದಾಗ ಅಳತೆ ಮಾಡುವುದಿಲ್ಲ. ನಮಗೆ ಬೇರೆ ಮನೆ ಇಲ್ಲ. ಮಳೆಗಾಲದಲ್ಲಿ ಬಂದು ನಮ್ಮ ವಾಸದ ಮನೆಯನ್ನು ಧ್ವಂಸ ಮಾಡಿರುವುದು ಯಾವ ನ್ಯಾಯ? ನಮಗೆ ಯಾವುದೇ ಇಲಾಖೆಯಿಂದ ನೊಟೀಸ್ ಬಂದಿಲ್ಲ. ತನಗಾದ ಅನ್ಯಾಯದ ವಿರುದ್ದ ಹೋರಾಟವನ್ನು ನಡೆಸುವುದಾಗಿ ತಿಳಿಸಿದ್ದಾರೆ.

ಗ್ರಾಮಕರಣಿಕರ ಕಚೇರಿಗೆ ಮುತ್ತಿಗೆ: ಹೇಮಂತ್ ಆರ್ಲಪದವು
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಂಬೇಡ್ಕರ್ ಆಪತ್ಪಾಂಧವ ಟ್ರಸ್ಟ್ ಇದರ ತಾಲೂಕು ಅಧ್ಯಕ್ಷ ಹೇಮಂತ್ ಆರ್ಲಪದವು ಮಾತನಾಡಿ ಬಡ ದಲಿತ ಕುಟುಂಬ ವಾಸವಾಗಿರುವ ಜಾಗ ಅಕ್ರಮವೋ ಸಕ್ರಮವೋ ಎಂಬುದನ್ನು ಅಧಿಕಾರಿಗಳು ಜಾಗದ ಅಳತೆ ಮಾಡಿದ ಬಳಿಕ ಹೇಳಬೇಕಿತ್ತು. ಪಹಣಿ ಪತ್ರದಲ್ಲಿ ಸರಕಾರಿ ಜಾಗ ಮತ್ತು ಶಾಲಾ ಜಾಗ ಎಂದು ಎರಡು ವಿಧದಲ್ಲಿ ನಮೂದಾಗಿದೆ. ಮಳೆಗಾಲದಲ್ಲಿ ದಲಿತ ಕುಟುಂಬದ ಮನೆಯನ್ನು ಧ್ವಂಸ ಮಾಡಿದ್ದಾರೆ. ಆಗಿರುವ ಅನ್ಯಾಯದ ವಿರುದ್ದ ನಾವು ಒಳಮೊಗ್ರು ಗ್ರಾಮಕರಣಿಕರ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಹೋರಾಟವನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಶಾಲೆಗೆ ಮಂಜೂರಾದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ: ಕಂದಾಯ ನಿರೀಕ್ಷಕ
ದರ್ಬೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಮಂಜೂರಾದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದರು ಅದನ್ನು ತೆರವು ಮಾಡುವಂತೆ ಮೂರು ತಿಂಗಳ ಹಿಂದೆ ನೊಟೀಸ್ ನೀಡಿದ್ದೆವು, ತೆರವು ಮಾಡದ ಕಾರಣ ನಾವೇ ತೆರವು ಮಾಡಿದ್ದೇವೆ. ಮನೆ ತೆರವು ಮಾಡುವಾಗ ಮನೆಯೊಳಗಿದ್ದ ಎಲ್ಲಾ ಸಾಮಾಗ್ರಿಗಳನ್ನು ಸುರಕ್ಷಿತವಾಗಿ ಇಟ್ಟಿದ್ದೇವೆ. ಮನೆಯಲ್ಲಿ ವಾಸ್ತವ್ಯವಿದ್ದ ರಘುನಾಥ್ ಎಂಬವರಿಗೆ ಪಟ್ಟೆಯಲ್ಲಿ ಸ್ವಂತ ಜಾಗವಿದೆ, ಜಯಂತಿ ಅವರಿಗೆ ಒಳಮೊಗ್ರು ಗ್ರಾಮದ ನೀರ್ಪಾಡಿಯಲ್ಲಿ 94 ಸಿಯಲ್ಲಿ ಜಾಗ ಮಂಜೂರು ಮಾಡಿದ್ದು ಅಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಶಾಲೆಗೆ ಸೇರಿದ ಜಾಗದಲ್ಲಿ ಯಾರೂ ಅಕ್ರಮವಾಗಿ ಮನೆ ಕಟ್ಟುವ ಹಾಗಿಲ್ಲ ಎಂದು ಕಂದಾಯ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ.

ಸಮಯ ನೀಡಬೇಕಿತ್ತು
ಮಳೆಗಾಲದಲ್ಲಿ ಮನೆ ಧ್ವಂಸ ಮಾಡಿರುವುದು ಸರಿಯಾದ ಕ್ರಮವಲ್ಲ. ಅಕ್ರಮವೋ, ಸಕ್ರಮವೋ ಎಂಬುದು ತನಿಖೆಯ ಬಳಿಕ ಅಥವಾ ಜಾಗ ಅಳತೆ ಮಾಡಿದಾಗ ಗೊತ್ತಾಗುತ್ತದೆ. ಯಾರೂ ಇಲ್ಲದ ವೇಳೆ ಧ್ವಂಸ ಮಾಡಿರುವುದು ಅಮಾನವೀಯತೆಯಾಗಿದೆ.
                                                                                                                                               – ಅಶೋಕ್ ಬೊಳ್ಳಾಡಿ, ಅಧ್ಯಕ್ಷರು ವಲಯ ಕಾಂಗ್ರೆಸ್ ಒಳಮೊಗ್ರು

 

 

 

 

 

 

 

 

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.